ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಟ್ರೋಫಿ ಗೆದ್ದ ದಕ್ಷಿಣ ಆಫ್ರಿಕಾ
Update: 2025-06-14 17:17 IST
Photo credit: icc-cricket.com
ಲಂಡನ್ : ಲಂಡನ್‌ನ ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ (ಡಬ್ಲ್ಯುಟಿಸಿ) ಫೈನಲ್ ನಲ್ಲಿ ಬಲಿಷ್ಠ ಆಸ್ಟ್ರೇಲಿಯ ತಂಡವನ್ನು ದಕ್ಷಿಣ ಆಫ್ರಿಕಾ ತಂಡ ಸೋಲಿಸಿತು. ಆ ಮೂಲಕ ತನ್ನ ಚೊಚ್ಚಲ ಡಬ್ಲ್ಯುಟಿಸಿ ಕಿರೀಟವನ್ನು ದಕ್ಷಿಣ ಆಫ್ರಿಕಾ ಮುಡಿಗೇರಿಸಿಕೊಂಡಿದೆ.
ಎರಡನೇ ಇನ್ನಿಂಗ್ಸ್ ಪೂರ್ಣಗೊಳಿಸಿ ಆಸ್ಟ್ರೇಲಿಯ ನೀಡಿದ್ದ 281 ರನ್ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ನಾಲ್ಕನೇ ದಿನದಾಟಕ್ಕೆ ಏಡನ್ ಮರ್ಕರಂ ಅವರ ಶತಕದ ನೆರವಿನಿಂದ ಗೆಲುವಿನ ನಗೆ ಬೀರಿತು.