×
Ad

ವಿಜಯಪುರ | ಎತ್ತುಗಳನ್ನು ತೊಳೆಯಲು ಹೋದ ರೈತ ಮೊಸಳೆ ಬಾಯಿಗೆ!

Update: 2025-08-23 15:42 IST

ವಿಜಯಪುರ : ಎತ್ತುಗಳನ್ನು ತೊಳೆಯಲು ಹೋದ ವೇಳೆ ರೈತರೊಬ್ಬರನ್ನು ಮೊಸಳೆ ಎಳೆದುಕೊಂಡು ಹೋಗಿರುವ ಘಟನೆ ಕೃಷ್ಣಾ ನದಿ ತೀರದ ಕುಚಗನೂರ ಗ್ರಾಮದ ಬಳಿ ಶನಿವಾರ ನಡೆದಿದೆ.

ಮುದ್ದೇಬಿಹಾಳ ತಾಲೂಕಿ ಕುಂಚಗನೂರ ಗ್ರಾಮದ ರೈತ ಕಾಶೀನಾಥ ಹಣಮಂತ ಕಂಬಳಿ(38) ಅವರು ಮೊಸಳೆ ದಾಳಿಗೆ ಒಳಗಾಗಿ ನಾಪತ್ತೆಯಾಗಿದ್ದರು.

ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ನೀರಿನಿಂದ ಮೇಲೆಕೆತ್ತಿದ್ದಾರೆ.

ಸ್ಥಳದಲ್ಲಿ ಕಂದಾಯ ನಿರೀಕ್ಷಕ ಪವನ್ ತಳವಾರ, ಗ್ರಾಮ ಆಡಳಿತ ಅಧಿಕಾರಿ ಎಚ್.ಸಿ.ಕೊರಬು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News