×
Ad

ವಿಜಯಪುರ: ಮೀಲಾದುನ್ನಬಿ ಪ್ರಯುಕ್ತ ರ‍್ಯಾಲಿ

Update: 2025-09-04 23:59 IST

ವಿಜಯಪುರ: ಮೀಲಾದುನ್ನಬಿ ಪ್ರಯುಕ್ತ ಶಾಂತಿಯುತ ರ‍್ಯಾಲಿ ವಿಜಯಪುರದಲ್ಲಿ ಗುರುವಾರ ನಡೆಯಿತು. ನೂರಾರು ಯುವಕರು ರ‍್ಯಾಲಿಯಲ್ಲಿ ಪಾಲ್ಗೊಂಡರು.

ಅಂಜುಮನ್ ಇಸ್ಲಾಂ ಹಾಗೂ ಮೈನಾರಿಟಿ ಮುಸ್ಲಿಂ ಡೆವಲಪ್‌ಮೆಂಟ್ ಕಮಿಟಿ ವತಿಯಿಂದ ಈ ಮೆರವಣಿಗೆ ಆಯೋಜಿಸಲಾಗಿತ್ತು.

ಈ ರ‍್ಯಾಲಿ ಹಕೀಂ ಚೌಕದಿಂದ ಆರಂಭವಾಗಿ ಐತಿಹಾಸಿಕ ಜಾಮಿಯಾ ಮಸೀದಿ ಬಳಿ ಇರುವ ಝಂಡಾ ಕಟ್ಟಾ ಸ್ಥಳದಿಂದ ಬಾರಾ ಕಮಾನ್, ಅತಾವುಲ್ಲಾ ಸರ್ಕಲ್, ಅಷ್ಟಪೈಲ ಬಂಗ್ಲೆ, ಬಾಗಲಕೋಟೆ ಕ್ರಾಸ್, ಹಜರತ್ ಟಿಪ್ಪು ಸುಲ್ತಾನ್ ಸರ್ಕಲ್, ಜಗಜ್ಯೋತಿ ಬಸವೇಶ್ವರ ಸರ್ಕಲ್ ವೃತ್ತ, ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರ ವೃತ್ತ ಹಾಗೂ ಸಂತ ಶ್ರೇಷ್ಠ ಕನಕದಾಸ ವೃತ್ತ ಮುಖಾಂತರ ಅಸಾರ್ ಮಹಲ್ ತಲುಪಿತು.

ಹಜರತ್ ಹಾಸಿಂಪೀರ ದರ್ಗಾದ ಸಜ್ಜಾದೆ ನಷೀನ್ ಹಜರತ್ ಸೈಯದ್ ಷಾ ಮುರ್ತುಜಾ ಹುಸೇನಿ ಹಾಶ್ಮಿ ಮುರ್ಷಿದ್ ಪೀರಾ, ಅರ್ಕಾಟ್ ದರ್ಗಾದ ಡಾ.ಸೈಯ್ಯದ್ ತಕೀಪೀರಾ ಹುಸೈನಿ, ಸೈಯ್ಯದ್ ಜೈನುಲಾಬುದ್ದೀನ್, ಎಲ್.ಎಲ್. ಉಸ್ತಾದ, ರಫೀಕ್‌ ಅಹ್ಮದ್ ಖಾಣೆ, ಬಂದೇನವಾಜ ಮಹಾಬರಿ, ಆಪ್ತಾಬ್ ಖಾದ್ರಿ ಇನಾಮದಾರ, ಜಮೀರ ಭಕ್ಷಿ, ಜಮೀಲ್ ಬಾಂಗಿ, ಗೌಸ್ ಅಹ್ಮದ್ ಹವಾಲ್ದಾರ, ಇರ್ಫಾನ್ ಶೇಖ್, ಹಾಫೀಜ್ ಸಿದ್ದಿಕಿ ಮುಂತಾದವರು ರ‍್ಯಾಲಿಯಲ್ಲಿ ‌ಭಾಗವಹಿಸಿದ್ದರು 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News