×
Ad

ಸಿಂದಗಿ | ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಲೆಕೆಳಗಾಗಿ ಹಾರಿದ ರಾಷ್ಟ್ರ ಧ್ವಜ

Update: 2025-11-01 10:55 IST

ವಿಜಯಪುರ: ಸಿಂದಗಿ ತಾಲೂಕು ತಹಶಿಲ್ದಾರ ಕಚೇರಿಯಲ್ಲಿ ಶನಿವಾರ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜವನ್ನು ತಲೆ ಕೆಳಗಾಗಿ ಹಾರಿಸಿದ ಘಟನೆ ನಡೆಯಿತು.

ಸಿಂದಗಿ ಶಾಸಕ ಅಶೋಕ ಮನಗೂಳಿ ಅವರು ಧ್ವಜಾರೋಹಣವನ್ನು ನೆರವೇರಿಸಿದ್ದಾರೆ. ಸಿಂದಗಿ ತಹಶೀಲ್ದಾರ ಕರಿಯಪ್ಪ ಅವರ ಎಡವಟ್ಟಿನಿಂದ ಉಲ್ಟಾ ಧ್ವಜಾರೋಹಣ ಮಾಡಲಾಗಿದೆ ಎಂದು ಆರೋಪಿಸಿರುವ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ‌.

ಕನ್ನಡ ಪರ ಸಂಘಟನೆಯ ಮುಖಂಡ ಸಂತೋಷ ಮಣಿಗೇರಿ, ನಿಂಗರಾಜ ಆತನೂರ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆ ಮುಖಂಡರು  ವಿರೋಧ ವ್ಯಕ್ತಪಡಿಸಿದರು.

ರಾಷ್ಟ್ರಧ್ವಜ ಅರಳಿ ಜನ ಗಣ ಮನ ಆರಂಭವಾಗಿ ಅತಿಥಿಗಳು ತಲೆ ಎತ್ತಿ ಧ್ವಜಕ್ಕೆ ಸೆಲ್ಯೂಟ್ ಹೊಡೆಯುವಷ್ಟರಲ್ಲಿ ನಡೆದ ಅಚಾತುರ್ಯ ಎಲ್ಲರ ಗಮನಕ್ಕೆ ಬಂತು.  ಧ್ವಜ ತಲೆ ಕೆಳಗಾಗಿದ್ದ ಧ್ವಜವನ್ನು ತಕ್ಷಣವೇ ಕೆಳಕ್ಕಿಳಿಸಿ ರಾಷ್ಟ್ರಗೀತೆಯನ್ನು ನಿಲ್ಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News