×
Ad

ವಿಜಯಪುರ: ಸೆಕ್ಯುರಿಟಿ ಗಾರ್ಡ್ ಗೆ ಹಲ್ಲೆಗೈದು ಮನೆಯಿಂದ ನಗ-ನಗದು ಕಳವು

Update: 2023-12-15 11:28 IST

ವಿಜಯಪುರ, ಡಿ.15: ಸೆಕ್ಯುರಿಟಿ ಗಾರ್ಡ್ ಗೆ ಹಲ್ಲೆಗೈದು ಮನೆಗೆ ನುಗ್ಗಿದ ಕಳ್ಳರು ಚಿನ್ನ, ನಗದು ಹಾಗೂ ಬೆಳೆಬಾಳುವ ಸಾಮಗ್ರಿಗಳನ್ನು ಕಳವುಗೈದು ಪರಾರಿಯಾದ ಘಟನೆ ವಿಜಯಪುರ ನಗರದ ಮಹಾವೀರ ಕಾಲನಿಯಲ್ಲಿ ಶುಕ್ರವಾರ ಮುಂಜಾವ ನಡೆದಿದೆ.

ಗುಲಾಬ್ ಮುಹಮ್ಮದ್ ಮುಝಾವರ್ ಹಲ್ಲೆಗೊಳಗಾದ ಸೆಕ್ಯುರಿಟಿ ಗಾರ್ಡ್. ಇನ್ನು ಶ್ರೀಕಾಂತ್ ಎಂಬವರ ಮನೆಯಲ್ಲಿ ಈ ಕಳ್ಳತನ ನಡೆದಿದೆ.

ಶ್ರೀಕಾಂತ್ ಕುಟುಂಬಸ್ಥರು ಮದುವೆಗೆ ಹೋದಾಗ ಈ ಕೃತ್ಯ ನಡೆದಿದೆ. ಮನೆಗೆ ನುಗ್ಗಿದ ಕಳ್ಳರು ತಡೆಯಲು ಯತ್ನಿಸಿದ ಸೆಕ್ಯುರಿಟಿ ಗಾರ್ಡ್ ಗುಲಾಬ್ ಮುಹಮ್ಮದ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ತೀವ್ರ ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಎಪಿಎಂಸಿ ಠಾಣಾ ಪೊಲೀಸರು ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News