ವಿಜಯಪುರ| ಬಸ್ ಹರಿದು ಎರಡು ವರ್ಷದ ಮಗು ಮೃತ್ಯು
Update: 2025-10-24 14:39 IST
ವಿಜಯಪುರ: ಸಾರಿಗೆ ಬಸ್ ಹರಿದು ಎರಡು ವರ್ಷದ ಬಾಲಕ ಮೃತಪಟ್ಟ ಹೃದಯವಿದ್ರಾವಕ ಘಟನೆ ತಾಲೂಕಿನ ಕುಮಟಗಿ ಬಸ್ ಸ್ಟಾಪ್ ಬಳಿ ನಡೆದಿದೆ.
ರಾಘವೇಂದ್ರ ತಳವಾರ (2) ಮೃತ ಬಾಲಕ. ಘಟನಾ ಸ್ಥಳಕ್ಕೆ ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದರು.