ಐ.ಎಸ್.ಎಫ್ ನೆರವಿನಿಂದ ಸ್ವದೇಶಕ್ಕೆ ಮರಳಿದ ಉತ್ತರ ಪ್ರದೇಶದ ಚೋಟರಾಮ್.

Update: 2015-12-23 11:14 GMT

ಕಳೆದ ನಾಲ್ಕು ವರ್ಷಗಳಿಂದ ತನ್ನ ಪ್ರಾಯೋಜಕನ ಅಧೀನದಲ್ಲಿ ಕೆಲಸ ನಿರ್ವಹಿಸುತಿದ್ದ ಉತ್ತರ ಪ್ರದೇಶದ ಚೋಟರಾಮ್ ಎಂಬವರು ಕಳೆದ ನಾಲ್ಕು ತಿಂಗಳಿನಿಂದ ತನ್ನ ಸಂಬಳ ಕೊಡದೆ, ಸರಿಯಾದ ವ್ಯವಸ್ಥೆ ಕಲ್ಪಿಸದೆ, ಅತ್ತ ಊರಿಗೂ ಕಳುಹಿಸಿದೆ ಸತಾಯಿಸುತಿದ್ದಂತಹ ತನ್ನ ಪ್ರಯೋಜಕನ ವಿರುದ್ದ ಚೋಟರಾಮ್ ಖುದ್ದಾಗಿ ತೆರಳಿ ಕಾರ್ಮಿಕ ಇಲಾಖೆಯಲ್ಲಿ ಕೇಸು ದಾಖಲಿಸಿದರೂ ಏನು ಪ್ರಯೋಜನವಾಗಿರಲಿಲ್ಲ.

ಕಾರ್ಮಿಕ ಇಲಾಖೆಯಿಂದ ಪ್ರಾಯೋಜಕನಿಗೆ ಮೂರು ಬಾರಿ ಎಚ್ಚರಿಕೆ ಪತ್ರ ಬಂದರೂ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನಲೆಯಲ್ಲಿ, ಚೋಟರಾಮ್ ಇಂಡಿಯನ್ ಸೋಶಿಯಲ್ ಫೋರಮ್ ರಿಯಾದ್ ನ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದರು  . ತಕ್ಷಣವೇ  ಇಂಡಿಯನ್ ಸೋಶಿಯಲ್ ಫೋರಮ್ ರಿಯಾದ್ ಕಾರ್ಯಕರ್ತರಾದ ಇಸ್ಮಾಯಿಲ್ ಮಂಗಳಪೇಟೆ ಹಾಗೂ ಉಸ್ಮಾನ್ ಕುಂಜತ್ತೂರು ರವರ ನೇತೃತ್ವದ ನಿಯೋಗ ಪ್ರಾಯೋಜಕನನ್ನು ಸಂಪರ್ಕಿಸಿದರು.

ಪ್ರಯೋಜಕನು ತನ್ನ ವಿರುದ್ದ ದಾಖಲಾದ ಮೊಕದ್ದಮೆ ಹಿಂಪಡೆದರೆ ಒಂದು ವಾರದಲ್ಲಿ ಚೋಟರಾಮ್ ಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವೆ ಎಂದು ಇಂಡಿಯನ್ ಸೋಶಿಯಲ್ ಫೋರಮ್ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದನು ಇದಕ್ಕೆ ಪೂರಕವಾಗಿ ಒಂದು ವಾರದ ನಂತರ ಪ್ರಾಯೋಜಕನನ್ನು ಸಂಪರ್ಕಿಸಿದಾಗ ಇನ್ನೂ ನಾಲ್ಕು ದಿನದ ಕಾಲಾವಕಾಶ ಬೇಕೆಂದಾಗ ತಕರಾರಿಗೆ ತೆಗೆದುಕೊಂಡ ಇಂಡಿಯನ್ ಸೋಶಿಯಲ್ ಫೋರಮ್ ಹೀಗೆ ಮುಂದುವರಿದರೆ ಭಾರತೀಯ ರಾಯಭಾರಿ ಕಚೇರಿಗೆ ದೂರು ದಾಖಲಿಸುದಾಗಿ ಎಚ್ಚರಿಸಿದರು. ತಕ್ಷಣವೇ ಕಾರ್ಯಪ್ರವರ್ತನಾದ ಪ್ರಾಯೋಜಕನು 2800 ಸೌದಿ ರಿಯಲ್ ಸಂಬಳ ಹಾಗು ಏನು ತೊಂದರೆ ನೀಡದೆ ದಿನಾಂಕ 19/12/2015 ರಂದು ಚೋಟರಾಮ್ ನನ್ನು ಭಾರತಕ್ಕೆ ಕಳುಹಿಸಿದನು. ತಾಯ್ನಾಡಿಗೆ ಮರಳುವಾಗ ಚೋಟರಾಮ್ ನವರು ಇಂಡಿಯನ್ ಸೋಶಿಯಲ್ ಫೋರಮ್ ರಿಯಾದ್ ಕಾರ್ಯಕರ್ತರಿಗೆ ಧನ್ಯವಾದಗಳನ್ನು ಹೇಳಿದರು. 

Writer - ವರದಿ : ಯಾಕೂಬ್ ಫೈರೋಝ್

contributor

Editor - ವರದಿ : ಯಾಕೂಬ್ ಫೈರೋಝ್

contributor

Similar News