ಇಂಡಿಯನ್ ಪ್ರವಾಸಿ ಫೋರಮ್ ಮಬೇಲ - ಓಮನ್ ರಿಂದ ಉಚಿತ ವೈದ್ಯಕೀಯ ತಪಾಸಣೆ ಮತ್ತು ರಕ್ತದಾನ ಶಿಬಿರ

Update: 2016-01-03 13:29 GMT

ಇಂಡಿಯನ್ ಪ್ರವಾಸಿ ಫೋರಮ್ ಮಬೇಲ - ಓಮನ್ ಮತ್ತು ಮಿನಿಸ್ಟ್ರಿ ಆಫ್ ಹೆಲ್ತ್ ಮತ್ತು ಮೋಡಾರ್ನ್ ಅಲ್ ಸಲಾಮ ಪೋಲಿಕ್ಲಿನಿಕ್ ಇದರ ಸಹಯೋಗದೊಂದಿಗೆ ಉಚಿತ ವೈದ್ಯಕೀಯ ತಪಾಸಣೆ ಮತ್ತು ರಕ್ತದಾನ ಶಿಬಿರ ದಿನಾಂಕ 01 .01 .2016 , ಶುಕ್ರವಾರದಂದು ದೀಯ ಅಲ್ ಮುಸ್ತಕ್ಬಲ್ ಪ್ರೈವೇಟ್ ಸ್ಕೂಲ್ ಮಬೇಲ ಇಂಡಸ್ಟ್ರಿಯಲ್ ಏರಿಯಾದಲ್ಲಿ ನಡೆಯಿತು.

ಸಭಾ ಕ್ರಾಯಕ್ರಮವನ್ನು ಇಂಡಿಯನ್ ಪ್ರವಾಸಿ ಫೋರಮ್ ಓಮನ್ ನಾರ್ತ್ ಝೋನ್ ಅಧ್ಯಕ್ಸ ಮಕ್ಸೂದ್ ಉದ್ಘಾಟಿಸಿ ಪ್ರವಾಸಿ ಫೋರಮ್ ನ ಕೆಲಸ ಕಾರ್ಯಗಳನ್ನೂ ವಿವರಿಸಿದರು. ಡಾಕ್ಟರ್. ಮುಸ್ತಫಾ (ಎಂ.ಬಿ.ಬಿ.ಎಸ್, ಎಂ.ಡಿ, ಇಂಟರ್ನಲ್ ಸ್ಪೆಷಲಿಸ್ಟ್ ಮೋಡಾರ್ನ್ ಅಲ್ ಸಲಾಮ ಪೋಲಿಕ್ಲಿನಿಕ್ ) ರವರು ಆರೋಗ್ಯದ ಬಗ್ಗೆ ಉಪನ್ಯಾಸ ನೀಡಿದರು ಮತ್ತು ಓಮನ್ ನಲ್ಲಿ ರಕ್ತದ ಕೊರತೆಯ ಬಗ್ಗೆ ವಿವರಿಸಿದರು. ಇಂಡಿಯನ್ ಪ್ರವಾಸಿ ಫೋರಮ್ ಓಮನ್ ಕರ್ನಾಟಕ ಅಧ್ಯಕ್ಷ ಯೂಸುಫ್ ಮುಕ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  ಅಬುಬಕ್ಕರ್ ಸಿದ್ದಿಕ್, ಮ್ಯಾನೇಜಿಂಗ್ ಡೈರೆಕ್ಟರ್ ಮೋಡಾರ್ನ್ ಅಲ್ ಸಲಾಮ ಪೋಲಿಕ್ಲಿನಿಕ್ ,ಶ್ರೀಮತಿ.ಇಬ್ತೀಸಂ ಮಹಮ್ಮದ್ ಮುಖ್ಯೋಪಾಧ್ಯಾಯಿನಿ .ದೀಯ ಅಲ್ ಮುಸ್ತಕ್ಬಲ್ ಪ್ರೈವೇಟ್ ಸ್ಕೂಲ್ ಮಬೇಲ, ಡಾಕ್ಟರ್ .ಶ್ರೀಮತಿ. ಸಾಯಿ ಪ್ರಭ (ಬಿ.ಡಿ.ಎಸ್, ಡೆಂಟಲ್ ಸ್ಪೆಷಲಿಸ್ಟ್ ಮೋಡಾರ್ನ್ ಅಲ್ ಸಲಾಮ ಪೋಲಿಕ್ಲಿನಿಕ್ ), ಇರ್ಫಾನ್ ಉಜಿರೆ  ವಲಯಾಧ್ಯಕ್ಷ  ಇಂಡಿಯನ್ ಪ್ರವಾಸಿ ಫೋರಮ್ ಬರ್ಕ - ಓಮನ್, ಅಬ್ಬಾಸ್ ಗುರುಪುರ  ವಲಯಾಧ್ಯಕ್ಷ  ಇಂಡಿಯನ್ ಸೋಶಿಯಲ್ ಫೋರಮ್ ಬರ್ಕ - ಓಮನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇಂಡಿಯನ್ ಪ್ರವಾಸಿ ಫೋರಮ್ ಬರ್ಕ - ಓಮನ್ ವಲಯಾಧ್ಯಕ್ಷ ಇರ್ಫಾನ್ ಉಜಿರೆ ರಕ್ತದಾನ ಮಾಡುವ ಮೂಲಕ ರಕ್ತ ದಾನ ಶಿಬಿರಕ್ಕೆ ಚಾಲನೆ ನೀಡಿದರು.

ಸುಮಾರು 300 ರಷ್ಟು ಅನಿವಾಸಿ ಭಾರತೀಯರು ಪಾಲ್ಗೊಂಡಿದ್ದರು. 56 ಯೂನಿಟ್ ರಕ್ತ ವನ್ನು ಸಂಗ್ರಹಿಸಲಾಯಿತು. ಓಮನ್ ಗೆ ಬಂದು ಒಂದು ವರ್ಷ ಪೂರ್ತಿ ಆಗಬೇಕೆಂಬ ನಿಯಮದಿಂದ ಹಲವರು ಮಂದಿ ರಕ್ತದಾನ ಮಾಡಲು ಬಂದು ಹಿಂದಿರುಗಬೇಕಾಯಿತು.

Writer - ABDUL MUBARAK KARAJE

contributor

Editor - ABDUL MUBARAK KARAJE

contributor

Similar News