ಬಹರೈನ್ ಕೆ.ಸಿ.ಎಫ್ ಅಂತರ್ರಾಷ್ಟ್ರೀಯ ಮಿಲಾದ್ ಕಾನ್ಫರೆನ್ಸ್
ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆ.ಸಿ.ಎಫ್ )ಬಹರೈನ್ ವತಿಯಿಂದ ಅಂತರ್ರಾಷ್ಟ್ರೀಯ ಇಶ್ಕೇ ರಸೂಲ್ ಕಾನ್ಪರೆನ್ಸ್ ಜನವರಿ 8 ಶುಕ್ರವಾರ 7 ಗಂಟೆಗೆ ಸರಿಯಾಗಿ ಬಹರೈನ್ ನ ರಾಜಧಾನಿ ಮನಾಮ ಮೈದಾನದಲ್ಲಿ ವಿಜ್ರಂಭನೆಯಿಂದ ನಡಿಯಲಿದೆ.ಉದ್ಘಾಟನೆಯನ್ನು ಹನೀಫ್ ಖಾಸಿಮಿ ಉಸ್ತಾದ್ ರವರು ಮಾಡಲಿಕ್ಕಿದ್ದಾರೆ.ಪ್ರಸ್ಥುತ ಕಾರ್ಯಕ್ರಮದಲ್ಲಿ ಅಹ್ಲುಬೈತಿನ ಧ್ರುವತಾರೆ, ಸಯ್ಯಿದ್ "ಫ಼ಜಲ್ ಕೋಯಮ್ಮ ತಂಙಳ್ ಕೂರ" ದುವಾಶಿರ್ವಚನ ನಡೆಸುವಾಗ ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಇದರ ರಾಜ್ಯ ಅಧ್ಯಕ್ಷರೂ ಆದ ಖ್ಯಾತ ವಾಗ್ಮಿ"ಹುಸೈನ್ ಸಅದಿ ಕೆ ಸಿ ರೋಡ್ ಪ್ರಸ್ತುತ ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷನಗೆಯ್ಯಲಿದ್ದಾರೆ".
ಕರ್ನಾಟಕ ರಾಜ್ಯಸ ಎಸ್.ಎಸ್.ಎಫ್ ಉಪಅದ್ಯಕ್ಷ ಹಾಗೂ ಕರ್ನಾಟಕ ರಾಜ್ಯ ವಕ಼್ಫ಼್ ಬೋರ್ಡ್ ಉಲಮ ಕೌನ್ಸಿಲ್ ಸದಸ್ಯ ಇಸ್ಮಾಯಿಲ್ ಸ:ಅದಿ ಕಿನ್ಯ ಸಂದೆಶ ಭಾಷಣ ಮಾಡಲಕ್ಕಿದ್ದಾರೆ". "ನಅತೇ ಶರೀಫ್ ಮತ್ತು ಬುರ್ದಾ ಮಜ್ಲಿಸ್" ಎಳೆಯ ಪ್ರತಿಭೆ,ಕರ್ನಾಟಕಯಾತ್ರೆಯಲ್ಲಿ ತನ್ನ ಕಂಚಿನ ಕಂಠದಿ ಮಿಂಚಿನ ಸಂಚಾರ ಸೃಷ್ಟಿಸಿದ ಗಾನಗಂಧರ್ವ ಗಾಯನ ಕೋಗಿಲೆ ಮಾಸ್ಟರ್ ಶಮ್ಮಾಸ್ ಮಂಗಳೂರ್ ರವರಿಂದ ನಅತೇ ಶರೀಫ್ ಮತ್ತು ಇಶ್ಕ಼ೆ ಮದಿನ ಬುರ್ದಾ ತಂಡವು ಬುರ್ದಾ ಅಲಾಪನೆ ಮಾಡಲಿಕೆ ಇದ್ದಾರೆ.
ಬಹರೈನ್ ನ ಖ್ಯಾತ್ಯ ಉದ್ಯಮಿ ಮಂಗಳೊರ್ ವೆಲ್ಫೇರ್ ಅಸೋಸಿಯೇಷನ್ ಅದ್ಯಕ್ಷರು ಮೆಟಲ್ಕೋ ರಜಾಕ್ ಹಾಜಿ
ಅದಲ್ಲದೆ ಅನೇಕ ಗಣ್ಯ ವ್ಯಕ್ತಿಗಳು ಈ ಸಂಭ್ರಮಕ್ಕೆ ಆಗಮಿಸಲಿಕಿದ್ದಾರೆ ಎಂದು ಕೆ.ಸಿ.ಎಫ್ ನಾಯಕರು ಬಹರೈನ್ ಪ್ರತಿಸ್ಟಿತ ಬ್ಯಾಂಕ್ಕೊಂಗ್ ಹೋಟೆಲ್ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ