ಯುಎಇ ಆವೃತ್ತಿ ‘ಗಲ್ಫ್ ಇಶಾರ’ ಲೋಕಾರ್ಪಣೆ

Update: 2016-01-09 05:55 GMT

ಯುಎಇ: ಇಶಾರ ಕನ್ನಡ ಮಾಸಿಕದ ಯುಎಇ ಆವೃತ್ತಿ ‘ಗಲ್ಫ್ ಇಶಾರ’ವನ್ನು ದೇರಾ ದುಬೈನ ಫ್ಲೋರಾ ಗ್ರಾಂಡ್ ಹೊಟೇಲ್‌ನಲ್ಲಿ ಶುಕ್ರವಾರ ಲೋಕಾರ್ಪಣೆ ಮಾಡಲಾಯಿತು.

ಕೂರ್ಗ್ ಜಂಇಯ್ಯತುಲ್ ಉಲಮಾದ ಕಾರ್ಯದರ್ಶಿ ಮುಹಮ್ಮದ್ ಮುಸ್ಲಿಯಾರ್ ಎಡಪ್ಪಾಲ್ ಪ್ರಾರ್ಥಿಸಿದರು. ಸ್ಪೀಕರ್ ಕಾಗೋಡು ತಿಮ್ಮಪ್ಪ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು. ಆರೋಗ್ಯ ಸಚಿವ ಯು.ಟಿ.ಖಾದರ್ ‘ಗಲ್ಫ್ ಇಶಾರ’ ಮಾಸಿಕವನ್ನು ದುಬೈನ ಭಾರತದ ಕನ್ಸುಲ್ ಜನರಲ್ ಡಾ.ಅನುರಾಗ್ ಭೂಷಣ್ ಅವರಿಗೆ ನೀಡುವ ಮೂಲಕ ಲೋಕಾರ್ಪಣೆ ಮಾಡಿದರು.

ಯುಎಇ ಕೆಸಿಎಫ್‌ನ ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಲ ಅಧ್ಯಕ್ಷತೆ ವಹಿಸಿದ್ದರು.
ಕರ್ನಲ್ ಮುಹಮ್ಮದ್ ಅಬ್ದುಲ್ಲ ಬಿನ್ ಮಜೀದ್ ಅಲ್ ಮರ್ರಿ, ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯಾಧ್ಯಕ್ಷ ಎನ್.ಕೆ. ಮುಹಮ್ಮದ್ ಶಾಫಿ ಸಅದಿ, ಉಪಾಧ್ಯಕ್ಷ ಅಬ್ದುರ್ರಹ್ಮಾನ್ ರಝ್ವಿ, ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಜಿ ಶೈಖ್ ಬಾವಾ, ಇಶಾರ ಮಾಸಿಕದ ಕಾರ್ಯನಿರ್ವಾಹಕ ಸಂಪಾದಕ ಅಬ್ದುಲ್ ಹಮೀದ್ ಬಜ್ಪೆ, ದುಬೈ ತುಂಬೆ ಕ್ಲಿನಿಕ್ಸ್ ನಿರ್ದೇಶಕ ಡಾ.ಸದಾಶಿವ ಬಂಗೇರ ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News