ಜನವರಿ 22ರಂದು 'ಜೆಎಫ್ ವಿಂಟರ್ ಕಪ್ 2016'
ದಮ್ಮಾಮ್: ಜಮೀಯ್ಯತುಲ್ ಫಲಾಹ್‌ನ ದಮ್ಮಾಮ್ ಘಟಕವು, 2015-16ನೆ ಸಾಲಿನ 'ಜೆಎಫ್ ವಿಂಟರ್ ಕಪ್ 2016' ಕ್ರಿಕೆಟ್ ಟೂರ್ನಮೆಂಟ್ ಜನವರಿ 22ರಂದು ನಡೆಯಲಿದೆ. ಸೌದಿ ಅರೇಬಿಯದ ಅಲ್-ಖೋಬಾರ್‌ನ ರಾಖಾದಲ್ಲಿರುವ ಎಸ್‌ಎಬಿಎಸ್‌ಎ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಈ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ 12 ಶ್ರೇಷ್ಠ ಕ್ರಿಕೆಟ್ ತಂಡಗಳು ಭಾಗವಹಿಸಲಿವೆ. ಜನವರಿ 22ರಂದು ಬೆಳಗ್ಗೆ 7:00 ಗಂಟೆಗೆ, ಕ್ರಿಕೆಟ್ ಪಂದ್ಯಕೂಟದ ಉದ್ಘಾಟನಾ ಸಮಾರಂಭ ನಡೆಯಲಿದೆ. ಉದಾತ್ತ ಧ್ಯೇಯದೊಂದಿಗೆ ಆಯೋಜಿಸಲಾದ ಈ ಕ್ರಿಕೆಟ್ ಪಂದ್ಯಕೂಟದಲ್ಲಿ ಸೌದಿ ಅರೇಬಿಯದ ಪೂರ್ವ ಪ್ರಾಂತದ 12 ಶ್ರೇಷ್ಠ ಕ್ರಿಕೆಟ್ ತಂಡಗಳು ಪಾಲ್ಗೊಳ್ಳಲಿದ್ದು, ಆಕರ್ಷಕ ಆಟದೊಂದಿಗೆ ಬೃಹತ್ ಸಂಖ್ಯೆಯ ವೀಕ್ಷಕರನ್ನು ರಂಜಿಸಲಿವೆ. 2016ರ ಜನವರಿ 22ರಂದು, ಬೆಳಗ್ಗೆ ಹಾಗೂ ಮಧ್ಯಾಹ್ನದ ಅವಧಿಯಲ್ಲಿ ಎಲ್ಲಾ 12 ತಂಡಗಳು ಪ್ರಾಥಮಿಕ ಪಂದ್ಯಗಳನ್ನು, ಕ್ವಾರ್ಟರ್ ಫೈನಲ್ ಹಾಗೂ ಸೆಮಿಫೈನ್ ಪಂದ್ಯಗಳನ್ನು ಆಡಲಿವೆ. ಆ ದಿನವೇ, ಹೊನಲು ಬೆಳಕಿನಲ್ಲಿ ಫೈನಲ್ಸ್ ಪಂದ್ಯ ನಡೆಯಲಿದ್ದು, ಆ ಬಳಿಕ ಪ್ರಶಸ್ತಿ ವಿತರಣೆ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ.
ಈ ಪ್ರತಿಷ್ಠಿತ ಪಂದ್ಯಕೂಟವನ್ನು ಜಮೀಯ್ಯತುಲ್ ಫಲಾಹ್‌ನ ಸಮಿತಿ ಸದಸ್ಯರು ಕಳೆದ ಎರಡೂವರೆ ದಶಕಗಳಿಂದ ಅಚ್ಚುಕಟ್ಟಾಗಿ ಆಯೋಜಿಸುತ್ತಾ ಬಂದಿದ್ದಾರೆ ಹಾಗೂ ಸೌದಿ ಅರೇಬಿಯದ ಪೂರ್ವ ಪ್ರಾಂತದ ಬಹುನಿರೀಕ್ಷಿತ ಕ್ರೀಡಾಕಾರ್ಯಕ್ರಮವೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ತಾಯ್ನಿಡಿನಲ್ಲಿರುವ ಸಮುದಾಯದ ಬಡ ಕುಟುಂಬಗಳಿಗೆ ನೆರವಾಗುವುದಕ್ಕಾಗಿ ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳನ್ನು ವಿಸ್ತರಿಸಲು ಜಮೀಯ್ಯತುಲ್ ಫಲಾಹ್‌ಗೆ ಅನುವು ಮಾಡಿಕೊಡಲಿದೆ.
ಪೂರ್ವ ಪ್ರಾಂತದ ಕ್ರೀಡಾ ಪ್ರೇಮಿಗಳು ಈ ಕ್ರಿಕೆಟ್ ಟೂರ್ನಮೆಂಟ್‌ಗೆ ಆಗಮಿಸಿ ಪಂದ್ಯಗಳನ್ನು ವಿಸ್ತರಿಸಬೇಕು ಹಾಗೂ ಉದಾತ್ತ ಉದ್ದೇಶದೊಂದಿಗೆ ಆಡುತ್ತಿರುವ ಎಲ್ಲಾ 12 ತಂಡಗಳ ಆಟಗಾರರನ್ನು ಪ್ರೋತ್ಸಾಹಿಸಬೇಕೆಂದು ಜಮೀಯ್ಯತುಲ್ ಫಲಾಹ್‌ನ ಪ್ರಕಟಣೆ ಕೋರಿದೆ.