ಝಮ್ ಝಮ್ ತಂಡಕ್ಕೆ ‘ಬಿಗ್‌ಬ್ಯಾಶ್ ಕಪ್-2015’
ದಮ್ಮಾಮ್: ಡಿಸೆಂಬರ್‌ನಲ್ಲಿ ಇಲ್ಲಿನ ‘ಎಕ್ಸಿಟ್ 18 ಅಲ್ ಫೌಝಾನ್ ಮೈದಾ’ದಲ್ಲಿ ನಡೆದ ಪ್ರತಿಷ್ಠಿತ ವಾರಂಗಲ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಮೆಂಟ್‌ನ ಫೈನಲ್ ಪಂದ್ಯದಲ್ಲಿ ಝಮ್ ಝಮ್‌ತಂಡವು ಎದುರಾಳಿ ಓನ್ ಹಿಟ್ ತಂಡವನ್ನು 15 ರನ್‌ಗಳಿಂದ ಸೋಲಿಸಿ, ‘ಬಿಗ್‌ಬ್ಯಾಶ್ ಕಪ್-2015’ನ್ನು ಎತ್ತಿಕೊಂಡಿದೆ. ರೋಚಕ ಪಂದ್ಯದಲ್ಲಿ ಝಮ್ ಝಮ್ ತಂಡವು ಟಾಸ್‌ಗೆದ್ದು, ಬ್ಯಾಟಿಂಗಿಗಿಳಿಯಿತು. ನಿಗದಿತ 16 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ ತಂಡವು 149 ರನ್‌ಗಳನ್ನು ಕಲೆ ಹಾಕಿತು. ಬಳಿಕ ಬ್ಯಾಟಿಂಗಿಗಿಳಿದ ಓನ್ ಹಿಟ್ ವಂಡರ್ ತಂಡವು, ಝಮ್ ಝಮ್ ತಂಡದ ರನ್ ಮೊತ್ತವನ್ನು ಬೆನ್ನಟ್ಟುವಲ್ಲಿ ವಿಫಲವಾಗಿ, 15 ರನ್ ಅಂತರದಲ್ಲಿ ಸೋಲುಂಡಿತು. ರೋಮಾಂಚಕಕಾರಿಯಾಗಿ ಸಾಗಿದ ಫೈನಲ್ಸ್ ಪಂದ್ಯವನ್ನು ನೂರಾರು ಕ್ರಿಕೆಟ್ ಅಭಿಮಾನಿಗಳು, ಡಬ್ಲುಪಿಎಲ್‌ನ ಹಿತೈಷಿಗಳು ಹಾಗೂ ಗಣ್ಯ ಅತಿಥಿಗಳು ವೀಕ್ಷಿಸಿದರು.
ಆನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಲಾಯಿತು. ಉತ್ಕೃಷ್ಟ ಆಟವನ್ನು ಪ್ರದರ್ಶಿಸಿದ ಮುಹಮ್ಮದ್ ಇಮ್ರಾನ್‌ರನ್ನು ಫೈನಲ್ಸ್‌ನ ಪಂದ್ಯಶ್ರೇಷ್ಠ ಹಾಗೂ ಮುಹಮ್ಮದ್ ಸಾಮಿಯವರನ್ನು ಸರಣಿ ಶ್ರೇಷ್ಠನೆಂದು ಘೋಷಿಸಲಾಯಿತು.
ರಿಯಾದ್‌ನ ಉದ್ಯಮಿ ಖಾಜಾ ತಾಹಿರ್ ಹುಸೈನ್ ಹಾಗೂ ಡಾ. ಸೈಯದ್ ನವಾಝ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.