ಶಾರ್ಜಾ: ಟ್ರಾಫಿಕ್ ಉಲ್ಲಂಘನೆಗಳ ಕಣ್ಗಾವಲಿಗೆ 40 ಹೊಸ ರಾಡಾರ್ಗಳ ಅಳವಡಿಕೆ
ಶಾರ್ಜಾ: ಅತಿ ವೇಗದ ಚಾಲನೆ ಹಾಗೂ ಸಿಗ್ನಲ್‌ಲೈಟ್ ಉಲ್ಲಂಘನೆಗಳನ್ನು ಪತ್ತೆಹಚ್ಚಲು, ಶಾರ್ಜಾದಲ್ಲಿ ವಿವಿಧ ಟ್ರಾಫಿಕ್‌ಸಿಗ್ನಲ್‌ಗಳಲ್ಲಿ ಹಾಗೂ ಆಂತರಿಕ ರಸ್ತೆಗಳಲ್ಲಿ 40 ರಾಡಾರ್‌ಗಳನ್ನು ಅಳವಡಿಸಲಾಗಿದೆ. ಈ ರಾಡಾರ್‌ಗಳು, 2016ರ ಜನವರಿ 1ರಿಂದ ಕಾರ್ಯಾಚರಿಸುತ್ತಿವೆಯೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅತಿವೇಗದ ವಾಹನಚಾಲನೆಯಿಂದ ಉಂಟಾಗುವ ಅವಘಡಗಳನ್ನು ತಡೆಗಟ್ಟುವ ಉದ್ದೇಶದಿಂದ ನೂತನ ರಾಡಾರ್‌ಗಳನ್ನು ಅಳವಡಿಸಲಾಗಿದೆಯೆಂದು ಸಾರಿಗೆ ಇಲಾಖೆಯ ಉಪನಿರ್ದೇಶಕ ಕ. ಅಹ್ಮದ್ ಬಿನ್ ದಾರ್ವಿಷ್ ತಿಳಿಸಿದ್ದಾರೆ.ಬಹುತೇಕ ವಾಹನಸವಾರರು, ಟ್ರಾಫಿಕ್‌ಸಿಗ್ನಲ್‌ನಲ್ಲಿ ಹಳದಿದೀಪವನ್ನು ಕಂಡಾಗಲೂ ವೇಗವನ್ನು ಕಡಿವೆುಗೊಳಿಸುವುದಿಲ್ಲ. ಅವರು ಸಿಗ್ನಲ್ ಕೆಂಪುಲೈಟನ್ನು ತೋರಿಸುವ ಮೊದಲೇ ವೇಗವಾಗಿ ಹಾದುಹೋಗುತ್ತಾರೆ. ಇದರಿಂದಾಗಿ ಹಲವು ಅಪಘಾತಗಳು ಸಂಭವಿಸಿರುವುದಾಗಿ ಅವರು ಹೇಳುತ್ತಾರೆ. ಹಲವಾರು ಧಾರುಣ ಅವಘಡಗಳು ವೇಗದ ಚಾಲನೆಯಿಂದಾಗಿವೆ. ಕೆಲವು ಪ್ರಕರಣಗಳಲ್ಲಿ,ಚಾಲಕರು ವಾಹನದ ಮೇಲೆ ಹಿಡಿತವನ್ನು ಕಳೆದುಕೊಳ್ಳುವುದರಿಂದ ವಾಹನಗಳು ಡಿಕ್ಕಿ ಹೊಡೆದು ನುಜ್ಜುಗುಜ್ಜಾಗಿವೆಯೆಂದವರು ತಿಳಿಸಿದ್ದಾರೆ.
ಭಾರೀ ದಂಡ ಪಾವತಿಸುವುದರಿಂದ ಹಾಗೂ ಕಪ್ಪು ಚುಕ್ಕೆ (ಬ್ಲಾಕ್‌ಪಾಯಿಂಟ್)ಯಿಂದ ಪಾರಾಗುವುದಕ್ಕಾಗಿ ವೇಗದ ಮಿತಿಯನ್ನು ಪಾಲಿಸುವಂತೆ ಚಾಲಕರನ್ನು ಖಂಡಿತವಾಗಿಯೂ ಈ ರಾಡಾರ್‌ಗಳು ಪ್ರೇರೇಪಿಸಲಿವೆಯೆಂದರು.