ಐ.ಎಸ್ಎಫ್ ರಿಯಾದ್ ವತಿಯಿಂದ ಕೋಮು ಭಯೋತ್ಪಾದನೆ ವಿರುದ್ಧ ಅಭಿಯಾನ
ಇಂಡಿಯನ್ ಸೋಷಿಯಲ್ ಫಾರಂ ರಿಯಾದ್ ಕೇಂದ್ರ ಸಮಿತಿ ವತಿಯಿಂದ ಜನವರಿ 15 ರಿಂದ ಫೆಬ್ರವರಿ 15 ರವೆಗೆ ಕೋಮು ಭಯೋತ್ಪಾದನೆ ವಿರುದ್ಧ ಅಭಿಯಾನ ನಡೆಯಲಿರುವುದಾಗಿ ಐ.ಎಸ್.ಎಫ್. ಕೇಂದ್ರ ಸಮಿತಿ ಅಧ್ಯಕ್ಷರಾದ ಜನಾಬ್ ಬಶೀರ್ ಎಂಗಾಬುಝ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಭಾರತ ದೇಶದಲ್ಲಿ ಅಸಹಿಷ್ಣುತೆ , ಕೋಮು ಭಯೋತ್ಪಾದನೆ ವ್ಯಾಪಕವಾಗಿದ್ದು ಜನರು ದೇಶದಲ್ಲಿ ತಿನ್ನುವ ಹಾಗೂ ಮಾತನಾಡುವ ಹಕ್ಕನ್ನು, ಕಳೆದುಕೊಳ್ಳುತಿದ್ದಾರೆ. ಜನ ಸಾಮಾನ್ಯರು ತಮಗಿಷ್ಟವಾದ ಆಹಾರವನ್ನು ಭಕ್ಷಿಸುವುದಕ್ಕಾಗಿ ಕೊಲೆಗೈಯಲ್ಪಟ್ಟಿದ್ದು ಪವಿತ್ರ ಗೋವಿನ ಹೆಸರಿನಲ್ಲಿ ಜನರ ಆಹಾರ ಪದ್ಧತಿಯನ್ನು ಕೋಮುಶಕ್ತಿಗಳು ನಿಯಂತ್ರಿಸಲಾರಂಬಿಸಿವೆ, ಹಲವು ಸರ್ಕಾರಗಳು ಈ ಸಮಾಜಘಾತುಕ ಶಕ್ತಿಗಳಿಗೆ ಬೆಂಬಲವಾಗಿದೆ. ನಮ್ಮ ದೇಶವನ್ನು ಆಳುತ್ತಿರುವ ಸರ್ಕಾರದ ಸಂಸದರು ಮತ್ತು ಮುಖಂಡರುಗಳು ಅತ್ಯಂತ ಅಸಯ್ಯವಾದ ಕೀಳುಮಟ್ಟದ ಹೇಳಿಕೆಗಳನ್ನು ನೀಡುತಿದ್ದು , ಅವರನ್ನು ನಿಯಂತ್ರಿಸಲು ಕೂಡ ಸರ್ಕಾರಕ್ಕೆ ಅಸಾಧ್ಯವಾಗಿದೆ. ಇವರನ್ನು ವಿರೋಧಿಸುವ ವ್ಯಕ್ತಿಗಳನ್ನು ಧಮನಿಸಲಾಗುತಿದ್ದು, ಅವರಿಗೆ ದೇಶದ್ರೋಹಿಗಳ ಪಟ್ಟವನ್ನು ನೀಡಲಾಗುತ್ತಿದೆ. ಪ್ರಗತಿಪರ ಚಿಂತಕರನ್ನು ಕೊಲೆಗೆಯ್ಯಲಾಗುತ್ತಿದೆ, ಮತ್ತು ಮಾಹಿತಿ ಹಕ್ಕು ಕಾರ್ಯಕರ್ತರ ಮೇಲೂ ದಾಳಿಗಳು ನಡೆಸಲಾಗುತ್ತಿದೆ. ಆದ್ದರಿಂದ ಜನ ಸಾಮಾನ್ಯರು ಭಯದ ವಾತಾವರಣದಲ್ಲಿ ಜೀವಿಸುತಿದ್ದಾರೆ ಎಂದು ತಿಳಿಸಿದರು.
ಇದರ ವಿರುದ್ಧ ವ್ಯಾಪಕವಾದ ಒಂದು ಹೋರಾಟ ರೂಪುಗೊಳ್ಳಬೇಕಾಗಿರುವುದು ಕಾಲದ ಬೇಡಿಕೆಯಾಗಿದೆ, ಅದಕ್ಕಾಗಿ ಎಸ್.ಡಿ.ಪಿ.ಐ ಭಾರತ ದೇಶದಾದ್ಯಂತ ಧೃಡವಾಗಿ ನಿಲ್ಲಿರಿ ನಿಮ್ಮ ಪಾದಗಳ ಮೇಲೆ , ನಿಮ್ಮ ಮಂಡಿಗಳ ಮೇಲಲ್ಲ ಎಂಬ ಶೀರ್ಷಿಕೆಯಡಿಯಲ್ಲಿ ಅಸಹಿಷ್ಣುತೆ ಮತ್ತು ಕೋಮು ಭಯೋತ್ಪಾದನೆ ವಿರುದ್ಧ ಅಭಿಯಾನವನ್ನು ನಡೆಸಿದೆ. ಇದರಂತೆ ಇಂಡಿಯನ್ ಸೋಶಿಯಲ್ ಫಾರಂ ರಿಯಾದ್ ನಲ್ಲಿ ಕೂಡ ಈ ಅಭಿಯಾನವನ್ನು ನಡೆಸಲು ಉದ್ದೇಶಿಸಿದ್ದು ಜನವರಿ 15 ರಿಂದ ಫೆಬ್ರುವರಿಯ 15 ವರೆಗೆ ನಡೆಯಲಿದೆ. ರಿಯಾದ್ ನಲ್ಲಿರುವ ಸರಿ ಸುಮಾರು 50 ಸಾವಿರದಷ್ಟು ಅನಿವಾಸಿ ಭಾರತೀಯರನ್ನು ಭೇಟಿಯಾಗಿ ಅವರಿಗೆ ದೇಶದ ಪ್ರಸಕ್ತ ಸ್ಥಿತಿಗತಿಗಳ ಬಗ್ಗೆ ತಿಳಿಯಪಡಸಿ ಸ್ವಾತಂತ್ಯದ ಉಳಿವಿಗಾಗಿ ನಾವು ದೃಡವಾಗಿ ನಿಲ್ಲಬೇಕಾದ ಅವಶ್ಯಕತೆಗಳನ್ನು ಮನವರಿಕೆ ಮಾಡಿಕೊಡಲಾಗವುದು ಎಂದು ಅವರು ತಿಳಿಸಿದರು.
ಪತ್ರಿಕೆಗೋಷ್ಠಿಯಲ್ಲಿ ರಿಯಾದ್ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ ಜನಾಬ್ ಕೋಯ ಫಾರುಕ್, ರಿಯಾದ್ ತಮಿಳುನಾಡು ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಜನಾಬ್ ರಶೀದ್ ಖಾನ್ , ಕೇರಳ ರಾಜ್ಯ ಸಮಿತಿ ಅಧ್ಯಕ್ಷರಾದ ಜನಾಬ್ ಮುಸ್ತಫ , ಕರ್ನಾಟಕ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಜನಾಬ್ ಶರೀಫ್ ಕಬಕ ಉಪಸ್ಥಿತರಿದ್ದರು.