ಜ.15; ಮರ್ಕಝುಲ್ ಹಿದಾಯ ಕೊಡಗು ಕ್ರಿಸ್ಟಲ್ ಜುಬಿಲೀ ಘೋಷಣಾ ಸಮಾರಂಭ
ದುಬೈ: ಮರ್ಕಝುಲ್ ಹಿದಾಯ ಕೊಡಗು ಇದರ ಸ್ಪಟಿಕ ಮಹೋತ್ಸವ ಘೋಷಣಾ ಸಮಾವೇಶ ಮತ್ತು ಜೀಲಾನಿ (ಖ ಸಿ), ತಾಜುಲ್ ಉಲಮಾ, ನೂರುಲ್ ಉಲಮಾ ಅನುಸ್ಮರಣಾ ಸಂಗಮ ದುಬೈ ದೇರಾದಲ್ಲಿರುವ ರಾಫಿ ಹೋಟೆಲ್ ಸಭಾಂಗಣದಲ್ಲಿ ಜನವರಿ 15 ರಂದು ಸಂಜೆ ಆರು ಘಂಟೆಗೆ ನಡೆಯಲಿದೆ.
ಮರ್ಕಝುಲ್ ಹಿದಾಯ ಯುಎಇ ಸಮಿತಿ ಅಧ್ಯಕ್ಷರಾದ ಉಸ್ಮಾನ್ ಹಾಜಿ ನಾಪೋಕ್ಲುರವರ ಅಧ್ಯಕ್ಷ್ಯತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಉಪ ಖಾಝಿಯೂ, ಕೊಡಗು ಜಿಲ್ಲಾ ಸುನ್ನಿ ವಿದ್ವಾಂಸ ಒಕ್ಕೂಟದ ಕಾರ್ಯದರ್ಶಿಯೂ, ಮರ್ಕಝುಲ್ ಹಿದಾಯ ಕೇಂದ್ರ ಸಮಿತಿ ಅಧ್ಯಕ್ಷರೂ ಆಗಿರುವ ಶೈಖುನಾ ಮಹಮೂದ್ ಮುಸ್ಲಿಯಾರ್ ಎಡಪಾಲ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ಅಧ್ಯಕ್ಷರಾದ ಮೌಲಾನಾ ಎನ್ ಕೆ ಎಂ ಶಾಫಿ ಸಅದಿ ಬೆಂಗಳೂರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ.
ಕೊಡಗು ಸುನ್ನಿ ವೆಲ್ಫೇರ್ ಅಸೋಷಿಯೇಶನ್ ವತಿಯಿಂದ ಈ ಸಂದರ್ಭದಲ್ಲಿ ಶೈಖುನಾ ಮಹಮೂದ್ ಉಸ್ತಾದರಿಗೆ"ಮರ್ಹೂಂ ಪಿಎ ಅಲಿ ಉಸ್ತಾದ್ ಇಸ್ಲಾಮಿಕ್ ಪರ್ಸನಾಲಿಟಿ ಅವಾರ್ಡ್" ನೀಡಿ ಗೌರವಿಸಲಾಗುವುದು. ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ಪ್ರತಿಭೆಗಳಾದ ಆಶಿಕ್ ಕಾಜೂರು ಮತ್ತು ಸಲೀಂ ಖಾದ್ರಿ ರವರಿಂದ ನಾತೇ ಶರೀಫ್ ನಡೆಯಲಿದೆ.
ಕೆಸಿಎಫ್ ಯುಎಇ ಸಮಿತಿ ಅಧ್ಯಕ್ಷರಾದ ಅಬ್ದುಲ್ ಹಮೀದ್ ಸಅದಿ, ಪ್ರಮುಖ ಸಮಾಜ ಸೇವಕರೂ ಉದ್ಯಮಿಗಳೂ ಆದ ಕೆಸಿಎಫ್ ಐ ಎನ್ ಸಿ ಪ್ರಧಾನ ಕಾರ್ಯದರ್ಶಿ ಹಾಜಿ ಶೈಖ್ ಬಾವಾ ಮಂಗಳೂರು, ಕೊಡಗು ಸುನ್ನಿ ವೆಲ್ಫೇರ್ ಅಸೋಷಿಯೇಶನ್ ಅಧ್ಯಕ್ಷರಾದ ಅಬೂಬಕರ್ ಕೊಟ್ಟಮುಡಿ, ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ನಾಯಕರಾದ ಜಲೀಲ್ ನಿಝಾಮಿ ಎಮ್ಮೆಮಾಡು, ಇಕ್ಬಾಲ್ ಕಾಜೂರು, ಶುಕೂರ್ ಮನಿಲ, ಕೆಸಿಎಫ್ ದುಬೈ ಸಮಿತಿ ಅಧ್ಯಕ್ಷರಾದ ಮಹಬೂಬ್ ಸಖಾಫಿ ಕಿನ್ಯ, ಅನ್ವಾರುಲ್ ಹುದಾ ವಿರಾಜಪೇಟೆ ಯುಎಇ ಸಮಿತಿ ಅಧ್ಯಕ್ಷರಾದ ಮುಹಮ್ಮದ್ ಹಾಜಿ ಕೊಂಡಂಗೇರಿ, ಹಾರಿಸ್ ಉಸ್ತಾದ್ ಚಾಮಿಯಾಲ್, ಹಮೀದ್ ಕೊಟ್ಟಮುಡಿ ಸೇರಿದಂತೆ ಹಲವು ಉಲಮಾ ಉಮಾರಾ ನಾಯಕರುಗಳು ಭಾಗವಹಿಸಲಿದ್ದು ಯುಎಇ ಯಲ್ಲಿರುವ ಅನಿವಾಸಿ ದೀನೀ ಪ್ರೇಮಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡಬೇಕೆಂದು ಕ್ರಿಸ್ಟಲ್ ಜುಬಿಲಿ ಸ್ವಾಗತ ಸಮಿತಿ ಕನ್ವೀನರ್ ಇರ್ಶಾದ್ ಕೊಂಡಂಗೇರಿ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.