×
Ad

ದಮಾಮ್: ಐಎಫ್‌ಎಫ್‌ನಿಂದ ಸೀರತುನ್ನಬಿ ಕಾರ್ಯಕ್ರಮ

Update: 2016-01-14 19:44 IST

ದಮಾಮ್, ಜ.14: ಪ್ರವಾದಿ ಮುಹಮ್ಮದ್(ಸ.ಅ)ರವರು ಯಾವುದೇ ಭೇದಭಾವವನ್ನು ತೋರದೇ ಸಂಪೂರ್ಣ ಮನುಕುಲಕ್ಕೆ ಶಾಂತಿಮಂತ್ರವನ್ನು ಭೋದಿಸಿದ ಮಹಾನ್ ವ್ಯಕ್ತಿಯಾಗಿದ್ದಾರೆ ಎಂದು ಸಲೀಮ್ ಗುರುವಾಯನಕೆರೆ ಹೇಳಿದರು.
ಅವರು ಇಂಡಿಯನ್ ಫ್ರೆಟರ್ನಿಟಿ ಫೋರಂ ಪೂರ್ವಪ್ರಾಂತದ ವತಿಯಿಂದ ದಮಾಮ್‌ನ ಜುಬೈಲ್ ಮತ್ತು ಅಲ್‌ಹಸಾದಲ್ಲಿ ನಡೆದ ಸೀರತುನ್ನಬಿ ಕಾರ್ಯಕ್ರಮದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಕಿರಾಅತ್‌ನೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಇಂಡಿಯನ್ ಫ್ರೆಟರ್ನಿಟಿ ಫೋರಂನ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಇಂಡಿಯನ್ ಫ್ರೆಟರ್ನಿಟಿ ಫೋರಂನ ಕರ್ನಾಟಕ ರಾಜ್ಯಾಧ್ಯಕ್ಷರಾದ ಇಮ್ತಿಯಾಝ್ ಮಾತನಾಡಿದರು.
ಈ ಸಂದರ್ಭ ಫತೇಹ್ ಅಲ್ ಜುಬೈಲ್ ಇದರ ಪ್ರಧಾನ ವ್ಯವಸ್ಥಾಪಕರಾದ ಮುಷ್ತಾಕ್ ಅಹ್ಮದ್, ಜಮೀಯತುಲ್ ಫಲಾಹ್‌ನ ಅಧ್ಯಕ್ಷರಾದ ಯು. ಫಯಾಝ್ ಅಹ್ಮದ್, ಎಸ್‌ಡಿಪಿಐಯ ಕಾರ್ಯನಿರ್ವಾಹಕ ಸದಸ್ಯರಾದ ಅಬೂಬಕರ್ ಕುಳಾಯಿ, ಅಹ್ಮದ್ ಬಾವಾ, ಇಂಡಿಯನ್ ಸೋಶಿಯಲ್ ಫೋರಂನ ಪ್ರಧಾನ ಕಾರ್ಯದರ್ಶಿ ಆರಿಫ್ ಜೋಕಟ್ಟೆ, ಇಂಡಿಯನ್ ಸೋಶಿಯಲ್ ಫೋರಂ ಅಲ್‌ಹಸಾ ಅಧ್ಯಕ್ಷರಾದ ಅಬ್ದುಲ್ ಕಾದರ್, ಇಂಡಿಯನ್ ಫ್ರೆಟರ್ನಿಟಿ ಫೋರಂನ ಅಧ್ಯಕ್ಷರಾದ ಇಕ್ಬಾಲ್ ಅಂಕಜಾಲ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News