ಕತರ್: ಕಿಡ್ನಿಗೆ ಸಂಬಂಧಿಸಿದ ಕಾಯಿಲೆ ಇದ್ದರೆ ಮರಳಿ ಮನೆಗೆ !
ಮನಾಮ: ಹೊಸ ವೀಸಾದಲ್ಲಿ ಕತರ್‌ಗೆ ಬರುವವರಿಗೆ ಆರೋಗ್ಯ ತಪಾಸಣೆಯಲ್ಲಿ ಕಿಡ್ನಿಗೆ ಸಂಬಂಧಿಸಿದ ರೋಗಗಳಿರುವುದು ತಿಳಿದು ಬಂದರೆ ಅಂತಹವರಿಗೆ ರೆಸಿಡೆಂಟ್ ಪರ್ಮಿಟ್ ನೀಡದೆ ಮರಳಿ ಕಳುಹಿಸುವುದಾಗಿ ತೀರ್ಮಾನಿಸಲಾಗಿದೆಯೆಂದು ಕತರ್ ಮೆಡಿಕಲ್ ಕಮಿಶನ್ ಹೇಳಿದೆ
.
ವೈದ್ಯಕೀಯ ಪರೀಕ್ಷೆಯಲ್ಲಿ ಕ್ಷಯ, ಹೈಪಟಿಟಿಸ್ ಸಿ ಇವುಗಳಲ್ಲಿ ಯಾವುದೇ ರೋಗ ಇದೆ ಎಂಬ ಸಂಶಯ ಬಂದರೆ ಸ್ಪೋನ್ಸರ್‌ಗಳಿಗೆ ತಿಳಿಸಲಾಗುವುದು. ಆನಂತರ ನಡೆಸಲಾಗುವ ಎಲ್ಲ ಚೆಕಪ್‌ಗಳ ಜವಾಬುದಾರಿ ಸ್ಪೋನ್ಸರ್ ವಹಿಸಿಕೊಳ್ಳಬೇಕಾಗುತ್ತದೆ. ಸಿಫಿಲಿಸ್ ಪರೀಕ್ಷೆಯನ್ನು ಕೂಡ ಇದರಲ್ಲಿ ಒಳಗೊಳ್ಳುವುದು ಸುಪ್ರೀಮ್ ಆರೋಗ್ಯ ಕೌನ್ಸಿಲ್ ತಿಳಿಸಿದೆ. ಇದೆ ಮೊದಲಬಾರಿಗೆ ಕತರ್ ಅಂಟು ರೋಗವಲ್ಲದ ರೋಗಗಳನ್ನು ನಿಷಿದ್ಧದ ವ್ಯಾಪ್ತಿಗೆ ಸೇರಿಸುತ್ತಿದೆ.
ಸಿಲಿಫಿಸ್ ಪಾಸಿಟಿವ್ ಎಂದು ತಿಳಿದುಬಂದರೆ ಅನಿವಾಸಿಯನ್ನು ಮರಳಿ ಆತನ ದೇಶಕ್ಕೆ ಕಳುಹಿಸಿಕೊಡಲಾಗುವುದು ಈಗಿನ ರೆಸಿಡೆಂಟ್ ಪರ್ಮಿಟ್ ನೀಡುವ ಮೊದಲು ಏಯ್ಡ್ಸೆ ಕ್ಷಯ ಹೈಪಟಿಟಿಸ್ ಬಿ,ಸಿ, ಎಂಬ ಪರೀಕ್ಷೆಗಳು ನಡೆಸಲಾಗುತ್ತಿದೆ.ಡಯಲಿಸ್ ಆಗತ್ಯವಿರುವ ಕಿಡ್ನಿ ತೊಂದರೆಗಳು ದೇಶದಲ್ಲಿ ಹೆಚ್ಚಳಗೊಂಡ ಹಿನ್ನೆಲೆಯಲ್ಲಿ ಹೊಸ ಪರೀಕ್ಷಾ ವಿಧಾನ ಸೇರಿಸು ತೀರ್ಮಾನ ತಳೆಯಲಾಗಿದೆ ಎಂದು ಆರೋಗ್ಯ ಕಮಿಶನ್ ಹೇಳಿದೆ