×
Ad

ಸೌದಿ ಅರೇಬಿಯಾ : ಕೆಸಿಎಫ್ ವತಿಯಿಂದ 'ಅಸ್ಸುಫ್ಪಾ' ಕಲಿಕಾ ಅಭಿಯಾನಕ್ಕೆ ಚಾಲನೆ

Update: 2016-01-20 17:50 IST

ಸೌದಿ ಅರೇಬಿಯಾ:ಅನಿವಾಸಿ ಮುಸ್ಲಿಂ ಕನ್ನಡಿಗರಲ್ಲಿ ಪರಂಪರೆ ಹಾಗೂ ತಾತ್ವಿಕ ಮೌಲ್ಯಗಳನ್ನೊಳಗೊಂಡ ನೈಜ ಇಸ್ಲಾಮೀ ಶಿಕ್ಶಣವನ್ನು ತರಬೇತುಗೊಳಿಸುವ. ನಿಟ್ಟಿನಲ್ಲಿ ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ಜಿಸಿಸಿ ಮಟ್ಟದಲ್ಲಿ ಹಮ್ಮಿಕ್ಕೊಂಡ 'ಅಸ್ಸುಫ್ಪ 'ಕಲಿಕಾ ಅಭಿಯಾನ'ಕ್ಕೆ ಸೌದಿಯಾದ್ಯಂತ ಚಾಲನೆ ದೊರೆತಿದೆ. ಈ ಕುರಿತಂತೆ ದಮ್ಮಾಮ್ ನಲ್ಲಿ ನಡೆದ ರಾಷ್ಟೀಯ ಸಮಾವೇಶದಲ್ಲಿ ಕೆಸಿಎಫ್ ಅಂತರಾಷ್ಟ್ರೀಯ ಅಧ್ಯಕ್ಷ, SP ಹಂಝ ಸಖಾಫಿ, ಸೌದಿ ಮಟ್ಟದ ಅ ಭಿಯಾನಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ''ಅನಿವಾಸಿ ಮುಸ್ಲಿಂ ಕನ್ನಡಿಗರ ಹೆಮ್ಮೆಯ ಸಂಕೇತವಾಗಿ ಬೆಳೆದು ಬಂದ KCF ಈಗಾಗಲೇ ಜಿಸಿಸಿಯಾದ್ಯಂತ ತನ್ನ ಸಂಘಟನಾ ಬಲವನ್ನು ವಿಸ್ತರಿಸಿಕೊಂಡಿದೆ .ಜನರಲ್ಲಿ ಧರ್ಮ ಜಾಗೃತಿಯನ್ನು ಜೀವಂತವಾಗಿರಿಸುವುದರ ಜತೆಗೆ ಅವರನ್ನು ಸಮಾಜಕ್ಕೂ ದೇಶಕ್ಕೂ ಉಪಯುಕ್ತ ಪ್ರಜೆಗಳನ್ನಾಗಿ ಬೆಳೆಸುವುದೇ ಕೆ.ಸಿ.ಎಫ್ ನ ಧ್ಯೇಯ. ಎಲ್ಲಕ್ಕಿಂತ ಮುಖ್ಯವಾಗಿ ವ್ಯಕ್ತಿಗಳ ಆತ್ಮ ಸುಧಾರಣೆ ಹಾಗೂ ಅದರ ಮೂಲಕ ಸುಸಂಸ್ಕೃತ ಸಮಾಜವೊಂದರ ನಿರ್ಮಾಣಕ್ಕೆ ಅದು ಆಧ್ಯ ತೆ ನೀಡಿದೆ. ವ್ಯಕ್ತಿ ಸುಧಾರಣೆಯಿಂದ ಮಾತ್ರ ಆರೋಗ್ಯಪೂರ್ಣ ಸಮಾಜವೊಂದರ ಕಲ್ಪನೆ ಸಾಧ್ಯ . ಈ ನಿಟ್ಟಿನಲ್ಲಿ ತಾತ್ವಿಕ ಪರಂಪರೆಯ ತಳಹದಿಯಡಿಯಲ್ಲಿ ಗುಣಾತ್ಮಕ ಶಿಕ್ಷಣದ ಮೂಲಕ ಅವರನ್ನು ತರಬೇತುಗೊಳಿಸುವ ಕೆಲಸಕ್ಕೆ ಅದು ಮುಂದಾಗಿದೆ'' ಎಂದು ನುಡಿದರು. ಕುರ್ಆನ್, ಹದೀಸ್, ಪಿಕ್ಹ್, ಅಖೀದ, ತಜ್ ವೀದ್ ಸೇರಿದಂತೆ ವಿವಿಧ ಇಸ್ಲಾಮೀ ಜ್ಞಾನ ಶಾಖೆಗಳನ್ನೊಳಗೊಂಡ ಆರು ತಿಂಗಳ ಅವಧಿಯ, ವ್ಯವಸ್ಥಿತ ಪಠ್ಯ ಕ್ರಮ ಇದಾಗಿದ್ದು, ಜಗತ್ತಿನಾದ್ಯಂತ ಇಸ್ಲಾಮಿನ ಹೆಸರಿನಲ್ಲಿ ಆಸಹಿಸ್ಣುತೆ ಹಾಗೂ ದ್ವೇಷದ ಕೆಟ್ಟ ಸಂದೇಶ ಹರಡುತ್ತಿರುವವರ ವಿರುದ್ಧ ಸೈದ್ಧಾಂತಿಕ ಹೋರಾಟ ನಡೆಸಲು ಕಾರ್ಯಕರ್ತರಿಗೆ ಇದು ಸಹಕಾರಿಯಾಗಬಹುದೆಂದು ಅವರು ಆಶಾವಾದ ವ್ಯಕ್ತ ಪಡಿದಿಸಿದರು. ಆದೂರು 'ಮಜ್ಲಿಸ್' ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಸಯ್ಯಿದ್ ಆಶ್ರಫ್ ತಂಙಳ್ ಕಾರ್ಯಕ್ರಮ ಉದ್ಘಾಟಿಸಿದರು. KCF ರಾಷ್ಟ್ರೀಯ ಸಮಿತಿ ಅಧ್ಯಕ್ಷ ಯೂಸುಫ್ ಸಖಾಫಿ ಅಧ್ಯಕ್ಷತೆ ವಹಿಸಿದರು. KCF ಅಂತರಾಷ್ಟ್ರೀಯ ಶಿಕ್ಷ ಣ ವಿಭಾಗದ ಅಧ್ಯಕ್ಷ ಖಮರುದ್ದೀನ್ ಗೂಡಿನಬಳಿ ಪ್ರಾಸ್ತಾವಿಕ ಭಾಷಣ ಮಾಡಿದರು. KCF ಅಂತರಾಷ್ಟ್ರೀಯ ಸಂಯೋಜಕ NS ಅಬ್ದುಲ್ಲಾ ಮಂಜನಾಡಿ, ಶರೀಫ್ ಬಾಖವಿ, ಉಡುಪಿ ಡಿವಿಜನ್ SSF ಅಧ್ಯಕ್ಷ ಆಶ್ರಫ್ ಅಮ್ಜದಿ ಮುಂತಾದ ಗಣ್ಯ ರು ಮುಖ್ಯ ಆತಿಥಿಗಳಾಗಿ ಭಾಗವಹಿಸಿದ್ದರು. 2016ರ KCF ಕ್ಯಾಲಂಡರನ್ನು ಈ ಸಂಧರ್ಭದಲ್ಲಿ ಬಿಡುಗಡೆ ಮಾಡಲಾಯಿತು. KCF ರಾಷ್ಟೀಯ ಸಮಿತಿ ಕಾರ್ಯದರ್ಶಿ ಫಾರೂಕ್ ಕಾಟಿಪಳ್ಳ ಸ್ವಾಗತಿಸಿದರು. ರಝಾಕ್ ಸಖಾಫಿ ಮಚ್ಚಂಪಾಡಿ ಕಿರಾಆತ್ ನಡೆಸಿದರು. ನೌಶಾದ್ ತಲಪಾಡಿ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಫೈಝಲ್ ಕೃಷ್ಣಾಪುರ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News