ಜುಬೈಲ್; ಹೊನಲು ಬೆಳಕಿನ ಕ್ರಿಕೆಟ್ ಟೂರ್ನಮೆಂಟ್ 2015-2016
ತೋಡಾರು ಟ್ರೋಫಿ ಹೊನಲು ಬೆಳಕಿನ ಕ್ರಿಕೆಟ್ ಟೂರ್ನಮೆಂಟ್ 2015-2016 ಜುಬೈಲಿನ ಅಲ್ ಫಲಾಹ್ ಕ್ರೀಡಾಂಗಣದಲ್ಲಿ ನಡೆಯಿತು.
ಡಿಸೆಂಬರ್ 31ರಿಂದ ಜನವರಿ 15 ರ ವರೆಗೆ ನಡೆದ ಈ ಟೂರ್ನಮೆಂಟಿನಲ್ಲಿ 24 ತಂಡಗಳು ಭಾಗವಹಿಸಿದ್ದವು.
ಈ ಬಾರಿಯ ತೋಡಾರ್ ಟ್ರೋಫಿಯಲ್ಲಿ ಅಲ್ ಆದ್ ಜುಬೈಲ್ ತಂಡ ಚಾಂಪಿಯನ್ ಆಯಿತು. ವಿಜೇತ ತಂಡದ 12 ಸದಸ್ಯರಿಗೆ ಟ್ರೋಫಿ ಸಹಿತ ಪ್ರತಿ ಸದಸ್ಯರಿಗೆ 4 ಗ್ರಾಂ ಚಿನ್ನದ ನಾಣ್ಯ ನೀಡಿ ಗೌರವಿಸಲಾಯಿತು.
JLCC ಜುಬೈಲ್ ತಂಡ ದ್ವಿತೀಯ ಸ್ಥಾನ ಪಡೆಯಿತು. ಈ ತಂಡಕ್ಕೆ ಟ್ರೊಫಿ ಸಹಿತ ಪ್ರತಿ ಸದಸ್ಯರಿಗೆ 2 ಗ್ರಾಂ ಚಿನ್ನದ ನಾಣ್ಯ ನೀಡಿ ಗೌರವಿಸಲಾಯಿತು.
ಫೈನಲ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಅಲ್ ಆದ್ ತಂಡದ ನಝೀರ್ ರವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು. ಇವರಿಗೆ ಟ್ರೋಫಿ ಹಾಗೂ 2 ಗ್ರಾಂ ಚಿನ್ನದ ನಾಣ್ಯ ನೀಡಿ ಗೌರವಿಸಲಾಯಿತು.
ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಅಲ್ ಆದ್ ತಂಡದ ರಹೀಝ್ ಪಡೆದರು. ಇವರಿಗೆ 4ಗ್ರಾಂ ಚಿನ್ನದ ನಾಣ್ಯ ಹಾಗೂ ಟ್ರೋಫಿ ನೀಡಲಾಯಿತು.
ಉತ್ತಮ ವಿಕೇಟ್ ಕೀಪರ್ ಆಗಿ ಅಲ್ ಆದ್ ತಂಡದ ಅಝಾದ್,
ಹೆಚ್ಚು ರನ್ ಗಳಿಸಿದಕ್ಕಾಗಿ JLCC ತಂಡದ ಬಶರತ್,
ಉತ್ತಮ ಬೌಲರ್ ಆಗಿ ಆದ್ ತಂಡದ ಹಿದಾಯತ್ ಆಯ್ಕೆಯಾದರು. ಇವರುಗಳಿಗೆ 2 ಗ್ರಂ ಚಿನ್ನದ ನಾಣ್ಯ ಹಾಗೂ ಟ್ರೋಫಿ ನೀಡಲಾಯಿತು.
ಈ ಟೂರ್ನಮೆಂಟಿನಲ್ಲಿ ಗಲ್ಫ್ ಕ್ರಿಕೆಟ್ ಚರಿತ್ರೆಯಲ್ಲಿ ಪ್ರೇಕ್ಷಕರ ಮತದ ಮೂಲಕ ಉತ್ತಮ ಕಮೆಂಟರಿ ಹಾಗೂ ಉತ್ತಮ ಅಂಪಾಯರ್ ಅನ್ನು ಆಯ್ಕೆ ಮಾಡಲಾಯಿತು.
ಟೂರ್ನಮೆಂಟಿನಲ್ಲಿ ಉತ್ತಮ ಕಮೆಂಟರಿ ಆಗಿ ಸಫ್ವಾನ್ ಬಜ್ಪೆಇವರು ಆಯ್ಕೆ ಯಾದರು, ಉತ್ತಮ ಅಂಪಾಯರ್ ಆಗಿ ಯು.ಕೆ ಆಸಿಫ್ ಆಯ್ಕೆಯಾದರು. ಇವರಿಗೆ 2 ಗ್ರಾಂ ಚಿನ್ನದ ನಾಣ್ಯ ಹಾಗೂ ಗಿಫ್ಟ್ ನೀಡಿ ಗೌರವಿಸಲಾಯಿತು.
ಈ ಟೋನಮೆಂಟಿನಲ್ಲಿ ಭಾಗವಹಿಸಿದ್ದ ಪ್ರೇಕ್ಷಕರಿಗಾಗಿ 4 ಪ್ರೇಕ್ಷಕರನ್ನು ಲಕ್ಕಿ ಪ್ರೇಕ್ಷಕರಾಗಿ ಆಯ್ಕೆ ಮಾಡಲಾಯಿತು. ಇವರಿಗೆ ತಲಾ 2ಗ್ರಾಂ ಚಿನ್ನದ ನಾಣ್ಯ ನೀಡಲಾಯಿತು.
ಪ್ರೇಕ್ಷಕರಿಗಾಗಿ ಆಯೋಜಕರು ಕ್ರಿಕೆಟ್ ಕ್ವಿಝ್ ಆಯೋಜಿಸಿದ್ದರು. ಇದರಲ್ಲಿ ಬಾಗವಹಿಸಿದವರಿಗೆ ಗಿಫ್ಟ್ ನೀಡಿ ಗೌರವಿಸಲಾಯಿತು.
ಈ ಸಮಾರೋಪ ಸಮಾರಂಬದಲ್ಲಿ ಅಥಿತಿಗಳಾಗಿ ಮದರ್ ಇಂಡಿಯಾ ಖಾದರ್,ಸೈಫುಲ್ಲ ತೋಡಾರ್,ಅಕ್ಬರ್ ಮಂಗಳೂರು,ಆಸೀಫ್ ಜುಬೈಲ್,ಸಲೀಂ ಉಡುಪಿ,ಹಫೀಜ್ ಏರ್ ಇಂಡಿಯಾ,ರಫೀಕ್ ಆಲ್ ಫಲಾಹ್ ಗ್ರೂಪ್ ಕಂಪೆನಿ,ವಿನಯ್,ಹನೀಫ್ ಹಂಡೇಲ್,ಶಬೀರ್ ಪಡುಬಿದ್ರಿ,ಸಿರಾಜ್ ತೋಡಾರ್,ಅಝರ್ ತೋಡಾರ್ ಹಾಗೂ ಸಫ್ವನ್ ಬಜಪೆ ಕಾರ್ಯಕರ್ಮ ನಿರೋಪಿಸಿದರು, ಈ ಪ್ರಕಟಣೆಯನ್ನು ಅನ್ಸಾರ್ ಪುತ್ತಿಗೆ ವಾರ್ತಾಭಾರತಿಗೆ ತಿಳಿಸಿದ್ದಾರೆ.