ಸೌದಿ ಅರೇಬಿಯಾದ 35 ಕೇಂದ್ರ ಗಳಲ್ಲಿ 'ಅಸ್ಸುಫ್ಫ ' ತರಭೇತಿ ಆರಂಭ
ರಿಯಾದ್: ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್)ನ ಮಹತ್ವಾಕಾಂಕ್ಷೆಯ ಯೋಜನೆಯಾದ 'ಅಸ್ಸುಫ್ಫ ' ತರಭೇತಿ ಕಾರ್ಯ ಕ್ರಮವು ಸೌದಿ ಅರೇಬಿಯಾದ 35 ಕೇಂದ್ರಗಳಲ್ಲಿ ಏಕಕಾಲಕ್ಕೆ ಆರಂಭಗೊಂಡಿದೆ. ಇಸ್ಲಾಮಿನ ಆರಂಭದ ದಿನಗಳಲ್ಲಿ ಪ್ರವಾದಿ ಮುಹಮ್ಮ ದ್(ಸ)ರಿಂದ ಪವಿತ್ರ ಮಸೀದಿಯಲ್ಲಿ ಆರಂಭಗೊಂಡ ಈ ಶೈಕ್ಷ ಣಿಕ ಬೋಧನಾ ರೀತಿಯು ಇಸ್ಲಾಮಿನ ಗುರು ಕುಲ ಪದ್ಧ ತಿ ಎನಿಸಿಕೊಂಡಿದೆ. ಜಿಸಿಸಿ ಸದಸ್ಯ ದೇಶಗಳಾದ ಯುಎಇ, ಕತ್ತ ರ್,ಹಾಗೂ ಬಹ್ರೈನ್ ಗಳಲ್ಲಿ ಈಗಾಗಲೇ ತರಗತಿಗಳಿಗೆ ಚಾಲನೆ ದೊರೆತಿದ್ದು ಇದೀಗ ಸೌದಿ ಕೂಡ ಆ ಸಾಲಿಗೆ ಸೇರ್ಪಡೆಗೊಂಡಿದೆ. ಮುಂದಿನ ದಿನಗಳಲ್ಲಿ ಕುವೈಟ್, ಒಮಾನ್,ಮಲೇಶ್ಯ ಹಾಗೂ ನೂತನವಾಗಿ ಸಂಘಟನೆ ಅಸ್ಥಿತ್ವ ಕ್ಕೆ ಬಂದ ಲಂಡನ್ ನಲ್ಲೂ ಬೋಧನಾ ತರಗತಿಗಳನ್ನು ಆರಂಭಿಸಲಾಗುವುದು.
ಜಗತ್ತಿನಾದ್ಯಂತ ಇಸ್ಲಾಮಿನ ಹೆಸರಿನಲ್ಲಿ ಉಗ್ರ ವಾದ,ಭಯೋತ್ಪಾದನಾ ಚಟುವಟಿಕೆಗಳು,ಅಮಾಯಕರ ವಿರುದ್ಧ ಶಸಸ್ತರ ದಾಳಿಗಳು ಇತ್ಯಾದಿ ನಿರಂತರ ನಡೆಯುತ್ತಿದ್ದು, ಇಸ್ಲಾಮೀ ಶಾಸನಗಳ ಬಗ್ಗೆ ಪ್ರಾಥಮಿಕ ಅರಿವು ಕೂಡ ಇಲ್ಲದ ವಿದ್ಯಾವಂತ ಸಮೂಹವನ್ನು ಈ ದುಷ್ಕೃತ್ಯ ಗಳಿಗಾಗಿ ಬಳಸಿಕೊಳ್ಳ ಲಾಗುತ್ತಿದೆ.ಈ ನಿಟ್ಟಿನಲ್ಲಿ ಸಮಾಜದ ನವ ಪೀಳಿಗೆಯನ್ನು ಇಂಥ ಗಂಡಾಂತರಗಳಿಂದ ರಕ್ಷಿಸಿ ಅವರಿಗೆ ನೈಜ ಸುನ್ನತ್ ಜಮಾಅತ್ ನ ನಂಬಿಕೆ ಹಾಗೂ ಆಚರಣೆಗಳ ಬಗ್ಗೆ ಅರಿವು ಮೂಡಿಸಬೇಕಾದ ಅಗತ್ಯ ವಿದೆ. ಈ ನಿಟ್ಟಿನಲ್ಲಿ ಕೆಸಿಎಫ್ ಆರಂಭಿಸಿದ ಆರು ತಿಂಗಳ ಅವಧಿಯ ಈ ಬೋಧನಾ ತರಗತಿಗೆ ಅಭೂತಪೂರ್ವ ಮನ್ನ ಣೆ ದೊರೆತಿದೆ. ಒಂದು ತಿಂಗಳ ಹಿಂದೆ ಆರಂಭಿಸಿದ ನೋಂದಣಿ ಪ್ರಕ್ರಿಯೆಗೆ ಮುಸ್ಲಿಂ ಕನ್ನ ಡಿಗರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಸೌದಿಯಾದ್ಯಂತ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾ ಪ್ರೇಮಿಗಳು ಪ್ರವೇಶ ಪಡೆದುಕೊಂಡಿದ್ದಾರೆ. ರಿಯಾದ್ ಝೋನಲ್ ವ್ಯಾಪ್ತಿಗೆ ಬರುವ ಬತ್ತಾ, ಮಲಾಝ್, ರಬ್ವಾ, ರೌದ, ಗೊರ್ನಾಥ, ನ್ಯೂ ಸನಯ್ಯ, ಉನೈಝಾ ಹಾಗೂ ಒಲೆಯ್ಯಾ ಗಳಲ್ಲಿ ತರಬೇತಿ ಕೇಂದ್ರಗಳನ್ನು ತೆರೆಯಲಾಗಿದೆ. ಅದೇ ರೀತಿ ದಮ್ಮಾಂ ಝೋನಲ್ ನ ಸೆಕ್ಟರ್ ಗಳಲ್ಲೂ ತರಗತಿಗಳು ಆರಂಭಗೊಂಡಿದ್ದು, ಅಲ್ ರವಾಬಿ,ಅಲ್ ಬದಿಯ, ಸೀಕೋ, ಅಲ್ ಕೋಬರ್,ಅಕ್ರ ಬಿಯಾ, ರಾಖಾ, ಅಲ್ ದನಾ,ಸೋಲಾ, ಲೇಡೀಸ್ ಮಾರ್ಕೆಟ್ ಹಾಗೂ ಜುಬೈಲ್ ಗಳು ಆ ಸಾಲಿಗೆ ಬರುತ್ತವೆ.
ಮದೀನ ಪ್ರಾಂತ್ಯಕ್ಕೊಳಪಟ್ಟ ಮದೀನ ಮುನವ್ವ ರ, ಯಾಂಬು,ಹಾಯಿಲ್ ಮತ್ತು ತಬೂಕ್ ಗಳಲ್ಲೂ 'ಅಸ್ಸುಫ್ಪ ' ತರಗತಿಗೆ ಚಾಲನೆ ದೊರೆತಿದೆ. ಜಿದ್ದ ಝೋನಲ್ ನ ಹತ್ತು ಸೆಕ್ಟರ್ ಗಳಲ್ಲೂ ತರಬೇತಿ ಕೇಂದ್ರಗಳು ಆರಂಭಗೊಂಡಿದ್ದು ಅವುಗಳನ್ನು ಅಝೀಝಿಯಾ, ಮಹ್ಬ ಸ್ ಜಿನ್ನ್, ಶರಫಿಯ್ಯಾ, ರಹೀಲಿ, ತಾಯಿಫ್, ಅಲ್ ಝಹ್ರಾ, ಅಲ್ ಮರ್ವ, ಅಲ್ ನುಝ್ಹಾ ಹಾಗೂ ಫೈಸಲಿಯಾ ಎಂದು ಗುರುತಿಸಲಾಗಿದೆ. ಹೊಸದಾಗಿ ಅಸ್ತತ್ವ ಕ್ಕೆ ಬಂದ ಜಿಝಾನ್ ಹಾಗೂ ಅರಾರ್ ಸೆಕ್ಟರ್ ಗಳಲ್ಲೂ 'ಅಸ್ಸುಫ್ಫ ' ತರಗತಿಗೆ ತಯಾರಿ ನಡೆದಿದ್ದು ಅಬ್ಬಾಸ್ ಝಹ್ರಿ ಕೊಡಿಪ್ಪಾಡಿ, ನೌಶಾದ್,ತೌಫೀಕ್ ಅಂಬೆಕಲ್ಲು ಮುಂತಾದವರ ನೇತೃತ್ವ ದಲ್ಲಿ ಸಿದ್ದತೆ ನಡೆಸಲಾಗುತ್ತದೆ.
ಈ ಕುರಿತಂತೆ ಇತ್ತೀಚೆಗೆ ಸೌದಿ ಅರೇಬಿಯಾದ ವಿವಿಧ ಕಡೆಗಳಲ್ಲಿ ಅನೇಕ ಸಾರ್ವಜನಿಕ ಹಾಗೂ ಸಾಂಘಿಕ ಸಭಾ ಕಾರ್ಯಕ್ರ ಮಗಳು ನಡೆದಿದ್ದು, ರಿಯಾದ್ ಕೆಸಿಎಫ್ ಕೇಂದ್ರ ಕಚೇರಿಯಲ್ಲಿ ನಡೆದ 'ಲೀಡರ್ಸ್ ಆಂಡ್ ಟ್ಯೂಟರ್ಸ್ ಮೀಟ್'' ನಲ್ಲಿ ಕೆಸಿಎಫ್ ರಿಯಾದ್ ಝೋನ್ ಅದ್ಯಕ್ಷ ನಝೀರ್ ಕಾಶಿಪಟ್ಣ ಅದ್ಯಕ್ಷ ತೆ ವಹಿಸಿದರು. ಪ್ರಾಂತೀಯ ಸಮಿತಿ ಕೋಶಾಧಿಕಾರಿ ಹನೀಫ್ ಬೆಳ್ಳಾರೆ ಕಾರ್ಯಕ್ರಮ ಉದ್ಘಾಟಿಸಿದರು.ಕೆಸಿಎಫ್ ಅಂತಾರಾಷ್ಟ್ರೀಯ ಅಧ್ಯ ಕ್ಷ ಎಸ್.ಪಿ.ಹಂಝ ಸಖಾಫಿ ಬಂಟ್ವಾಳ ವಿಷಯ ಮಂಡಿಸಿದರು.ಝೋನಲ್ ಕಾರ್ಯದರ್ಶಿ ಫಾರೂಕ್ ಉಳ್ಳಾಲ ವೇದಿಕೆಯಲ್ಲಿ ಉಪಸ್ಥಿತರಿದ್ದ ರು. ಕೆಸಿಎಫ್ ಬತ್ತಾ ಸೆಕ್ಟರ್ ಕಾರ್ಯದರ್ಶಿ ಬಶೀರ್ ತಲಪ್ಪಾಡಿ ಆರಂಭದಲ್ಲಿ ಸ್ವಾಗತಿಸಿ ಝೈನ್ ಸಖಾಫಿ ಭಟ್ಕ ಳ ಕೊನೆಯಲ್ಲಿ ವಂದಿಸಿದರು. ಸೆಕ್ಟ ರ್ ಮಟ್ಟ ದ ವಿಶ್ಲೇಷಣಾ ಸಭೆಗಳ ಪೈಕಿ ನ್ಯೂ ಸನಯ ದಲ್ಲಿ ನಡೆದ ಕಾರ್ಯಕ್ರ ಮ ರಿಯಾದ್ ಝೋನ್ ಶಿಕ್ಷಣ ವಿಭಾಗದ ಸಂಚಾಲಕ ಅಬ್ದುಲ್ಲ ಸಖಾಫಿ ನಿಂತಿಕಲ್ಲು ಉದ್ಘಾಟಿಸಿದರು. ಸೆಕ್ಟರ್ ಅದ್ಯಕ್ಷ ಮುಹಮ್ಮ ದ್ ಮುಸ್ಲಿಯಾರ್ ಮಾಚಾರ್ ಅದ್ಯಕ್ಷ ತೆ ವಹಿಸಿದರು. ಎಸ್.ಪಿ.ಹಂಝ ಸಖಾಫಿ ವಿಷಯ ಮಂಡನೆ ನಡೆಸಿದರು. ಮುಸ್ತಫಾ ಸಅದಿ ಸೂರಿಕುಮೇರು ಅರಂಭದಲ್ಲಿ ಸ್ವಾಗತಿಸಿ ಕೆಸಿಎಫ್ ಸಾಂತ್ವನ ವಿಭಾಗದ ಮುಖ್ಯಸ್ಥ ಸಲೀಂ ಕನ್ಯಾಡಿ ಕೊನೆಯಲ್ಲಿ ವಂದಿಸಿದರು. ಹಾರಾದಲ್ಲಿ ನಡೆದ ದ್ವಿತೀಯ ಮಟ್ಟದ ಸಭೆಯನ್ನು ಎಸ್.ಪಿ.ಹಂಝ ಸಖಾಫಿ ಉದ್ಘಾಟಿಸಿದರು. ಅಬೂಬಕ್ಕರ್ ಸಾಲೆತ್ತೂರು ಅಧ್ಯ ಕ್ಷತೆ ವಹಿಸಿದರು. ಇಸ್ಮಾಈಲ್ ಮೊಂಟೆಪದವು ಸ್ವಾಗತಿಸಿ ಆಬ್ದುಲ್ ಖಾದರ್ ಸಾಲೆತ್ತೂರು ವಂದಿಸಿದರು.
ಆಶ್ರಫ್ ಸಖಾಫಿ ಪರ್ಪುಂಜ ರವರ ಅಧ್ಯಕ್ಷ ತೆಯಲ್ಲಿ ದಮ್ಮಾಂ ಸೀಕೋ ಘಟಕದ ವತಿಯಿಂದ ನಡೆದ ಪ್ರಚಾರ ಸಭೆಯನ್ನು ಸೌದಿ ರಾಷ್ಟ್ರೀಯ ಸಮಿತಿ ಕಾರ್ಯದರ್ಶಿ ಫಾರೂಕ‌್ ಕಾಟಿಪಳ್ಳ ಉದ್ಘಾಟಿಸಿದರು. ಎಸ್.ಪಿ.ಹಂಝ ಸಖಾಫಿ ವಿಷಯ ಮಂಡಿಸಿದರು. ಇಖ್ಬಾಲ್ ಕೈರಂಗಳ ಆರಂಭದಲ್ಲಿ ಸ್ವಾಗತಿಸಿದರೆ,ಆಶ್ರಫ್ ನಾವುಂದ ವಂದಿಸಿದರು.
ದವಾಸೀರ್ ಸೆಕ್ಟರ್ ಪ್ರಚಾರ ಸಭೆಯು ಇಲ್ಲಿನ ಐಸಿಎಫ್ ಸಭಾಂಗಣದಲ್ಲಿ ಅಬ್ದುಲ್ ಅಝೀಝ್ ಸಅದಿ ಅಧ್ಯಕ್ಷತೆಯಲ್ಲಿ ಜರಗಿತು. ಎಸ್.ಪಿ. ಹಂಝ ಸಖಾಫಿ ಕಾರ್ಯಕ್ರಮ ಉದ್ಘಾಟಿಸಿದರು. ಜುಬೈಲ್ ಘಟಕ ಏರ್ಪಡಿಸಿದ ಸಮಾವೇಶವನ್ನು ಕೆಸಿಎಫ್ ರಾಷ್ಟ್ರೀಯ ಅಧ್ಯಕ್ಷ ಡಿ.ಪಿ.ಯೂಸುಫ್ ಸಖಾಫಿ ಉದ್ಘಾಟಿಸಿದರು. ಹನೀಫ್ ಸಅದಿ ಅಧ್ಯಕ್ಷತೆ ವಹಿಸಿದರು. ಎಸ್.ಪಿ.ಹಂಝ ಸಖಾಫಿ ಮುಖ್ಯ ಭಾಷಣಗೈದರು. ಇಸ್ಮಾಈಲ್ ಕಿಲ್ಲೂರು ಸ್ವಾಗತಿಸಿದರು. ಸಮೀಯುಲ್ಲಾ ಕಾರ್ಯಕ್ರ ಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.
ಅಲ್ ಹಸಾ ಸೆಕ್ಟರ್ ಪ್ರಚಾರ ಸಭೆ ಹುಫೂಫ್ ನ ಸಅದಿಯ್ಯ ಸಭಾಂಗಣದಲ್ಲಿ ನೆರವೇರಿತು.ಅಬ್ದುಲ್ಲ ತೀಫ್ ಸಅದಿ ಕಕ್ಕಿಂಜೆ ಸಭೆ ಉದ್ಘಾಟಿಸಿದರು. ಮುಹಮ್ಮದ್ ಮುಸ್ಲಿಯಾರ್ ಪೊಸೋಟು ಅಧ್ಯಕ್ಷತೆ ವಹಿಸುದರು. ಅಬ್ದುರ್ರಹ್ಮಾನ್ ಕೈರಂಗಳ, ಸಅದಿಯ್ಯ ಸಂಚಾಲಕ ಜಮಾಲ್,ನೌಶಾದ್ ಅಮಾನಿ ಮುಂತಾದ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಎಸ್.ಪಿ' ಹಂಝ ಸಖಾಫಿ ಮುಖ್ಯ ಭಾಷಣ ಮಾಡಿದರು.ಹಬೀಬ್ ಮರ್ದಾಳ ಖಿರಾಆತ್ ಪಠಿಸಿದರು. ಹಾರಿಸ್ ಕಾಜೂರು ಸ್ವಾಗತಿಸಿ ,ಕಬೀರ್ ಮೋಂಟುಗೊಳಿ
ಕೊನೆಯಲ್ಲಿ ವಂದಿಸಿದರು. ಅಶ್ರು ಬಜ್ಪೆ ಕಾರ್ಯಕ್ರಮ ನಿರೂಪಿಸಿದರು.
ಅಲ್ ಕೋಬರ್ ಘಟಕ ಏರ್ಪಡಿಸಿದ ಸಾಂಘಿಕ ಸಭೆಯನ್ನು ಡಿ.ಪಿ ಯೂಸುಫ್ ಸಖಾಫಿ ಉದ್ಘಾಟಿಸಿದರು. ಕೆಸಿಎಫ್ ಕೋಬರ್ ಸೆಕ್ಟರ್ ಅಧ್ಯಕ್ಷ ಅಬ್ದುರ್ರಝಾಕ್ ಸಖಾಫಿ ಮಚ್ಚಂಪಾಡಿ ಅಧ್ಯಕ್ಷ ತೆ ವಹಿಸಿದರು. ಕೆಸಿಎಫ್ ಅಂತಾರಾಷ್ಟ್ರೀಯ ಸಂಯೋಜಕ, ಎನ್.ಎಸ್.ಅಬ್ದುಲ್ಲಾ, ಮುದ್ರಿಕ ಮದನಿ, ಯೂಸುಫ್ ಅಯ್ಯಂಗೇರಿ ಮುಂತಾದವರು ಅಥಿತಿಗಳಾಗಿದ್ದರು. ಕೆಸಿಎಫ್ ಸಾಂತ್ವ ನ ವಿಭಾಗದ ಸಂಚಾಲಕ ಮುಹಮ್ಮದ್ ಮಲೆಬೆಟ್ಟು ಆರಂಭದಲ್ಲಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ನೌಫಲ್ ಉಜಿರೆ ಬೆಟ್ಟು ಖಿರಾಆತ್ ನಡೆಸಿದರು. ಕಾರ್ಯದರ್ಶಿ ಇಬ್ರಾಹೀಂ ವಳವೂರು ಕೊನೆಯಲ್ಲಿ ವಂದಿಸಿದರು.