ಯುಎಇ : ಇಂಡಿಯನ್ ಕಲ್ಚರಲ್ ಸೊಸೈಟಿ ಕರ್ನಾಟಕ ಘಟಕದ ಸಮಾವೇಶ
ಯುಎಇ, ಜ.25: ಸೋಶಿಯಲ್ ಡೆಮಾಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾದ ಅನಿವಾಸಿ ಭಾರತೀಯ ಘಟಕವಾದ ಯುಎಇ ಇಂಡಿಯನ್ ಕಲ್ಚರಲ್ ಸೊಸೈಟಿಯ ಕರ್ನಾಟಕ ಘಟಕದ ಸಮಾವೇಶ ಇತ್ತೀಚೆಗೆ ಅಲ್ ಕುಸೈಸ್‌ನ ಕ್ರೆಸೆಂಟ್ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ ಸಭಾಂಗಣದಲ್ಲಿ ಜರಗಿತು.
ಮುಖ್ಯ ಭಾಷಣಗೈದ ಎಸ್‌ಡಿಪಿಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆ, ಬಂಡವಾಳಶಾಹಿಗಳಿಗೆ ವಿದೇಶಗಳಲ್ಲಿ ನೆಲೆಯನ್ನು ಸ್ಥಾಪಿಸುವುದರಲ್ಲಿ ಈಗಿನ ಸರಕಾರ ಕಾರ್ಯನಿರತವಾಗಿದೆ ಎಂದರು. ಎಸ್‌ಡಿಪಿಐ ಪಕ್ಷವು ಈವತ್ತು 20ಕ್ಕೂ ಮಿಕ್ಕಿ ರಾಜ್ಯಗಳಲ್ಲಿ ಯಶಸ್ವಿಯಾಗಿ ಮುನ್ನುಗ್ಗುತ್ತಿರುದನ್ನು ತಿಳಿಸಿದರಲ್ಲದೆ, ಭಾರತದ ರಾಜಕೀಯ ವ್ಯವಸ್ಥೆಯ ಬದಲಾವಣೆಗೆ ಕೈಜೋಡಿಸಲು ಅವರು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಇಂಡಿಯನ್ ಕಲ್ಚರಲ್ ಸೊಸೈಟಿಯ ಕರ್ನಾಟಕ ಘಟಕದ ಅಧ್ಯಕ್ಷ ಆಶಿರ್ ಚೊಕ್ಕಬೆಟ್ಟು, ಸೊಸೈಟಿ ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.
ಇಂಡಿಯನ್ ಕಲ್ಚರಲ್ ಸೊಸೈಟಿ ಯು.ಎ.ಇ. ಇದರ ಪ್ರಧಾನ ಕಾರ್ಯದರ್ಶಿ ನಾಸಿರ್ ಕಾರಾಜೆ ಮಾತನಾಡಿ, ಭಾರತದಲ್ಲಿ ಇತ್ತೀಚೆಗೆ ಅಸಹಿಷ್ಣುತೆ ಜನರ ಸಾಮಾಜಿಕ ಜೀವನಕ್ಕೆ ಬೆದರಿಕೆಯನ್ನು ಒಡ್ಡುತ್ತಿದೆ. ಈ ನಿಟ್ಟಿನಲ್ಲಿ ಭಯಮುಕ್ತ ಭಾರತ ಹಸಿವು ಮುಕ್ತ ಭಾರತ ಎಂಬ ಧ್ಯೇಯದೊಮಡಿಗೆ ಎಸ್‌ಡಿಪಿಐ ಪಕ್ಷವು ಜನರ ದೈನಂದಿನ ಜೀವನದಲ್ಲಿ ಬದಲಾವಣೆಗೆ ಶ್ರಮಿಸುತ್ತಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬ್ಯಾರೀಸ್ ವೆಲ್ಫೇರ್ ಫೋರಮ್ ಅಬುಧಾಬಿ ಇದರ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ ಅವರನ್ನು ಸನ್ಮಾನಿಸಲಾಯಿತು.
ಸೊಸೈಟಿಯ ಕರ್ನಾಟಕ ಘಟಕದ ಪ್ರಧಾನ ಕಾರ್ಯದರ್ಶಿ ಸರ್ಫರಾಝ್ ಕಾಪು, ಎಮಿರೇಟ್ಸ್ ನಾಲ್ಕು ವಲಯಾಧ್ಯಕ್ಷರಾದ ಇಲ್ಯಾಸ್ ಮೆಲ್ಕಾರ್, ಅಬ್ದುಲ್ ಮಜೀದ್ ಹಾಲಡ್ಕ, ಶಂಶುದ್ಧೀನ್ ಉಡುಪಿ, ಝಾಕಿರ್ ಹೊನ್ನಾಳ, ಕುಂದಾಪುರ ಜಮಾಅತ್ ಅಧ್ಯಕ್ಷ ಮುಹಮ್ಮದ್ ಫೈಝಲ್, ಗಂಗೊಳ್ಳಿ ಜಮಾಅತ್ ಕಮಿಟಿ ಸದಸ್ಯರಾದ ರಹ್ಮಾನ್ ಭಾಗವಹಿಸಿದ್ದರು.
ಇಂಡಿಯನ್ ಕಲ್ಚರಲ್ ಸೊಸೈಟಿ ಕರ್ನಾಟಕ ಘಟಕದ ಉಪಾಧ್ಯಕ್ಷ ಮುಹಮ್ಮದ್ ಶಾಫಿ ಹುಬ್ಬಳ್ಳಿ ಸ್ವಾಗತಿಸಿದರು. ಅಕ್ಬರ್ ಅಲಿ ಕೃಷ್ಣಾಪುರ ಹಾಡುಗಳನ್ನಾಡಿದರು.
ಫರಾಝ್ ಬ್ರಹ್ಮಾವರ ಮತ್ತು ಇರ್ಫಾನ್ ಎರ್ಮಾಳ್ ಕಾರ್ಯಕ್ರಮ ನಿರೂಪಿಸಿದರು. ಸೊಸೈಟಿಯ ಕರ್ನಾಟಕ ಘಟಕದ ಕಾರ್ಯದರ್ಶಿ ಆರಿಫ್ ಮಡಿಕೇರಿ ವಂದಿಸಿದರು.