×
Ad

ಅಬುಧಾಬಿಯಲ್ಲಿ ಗೃಹಸಚಿವಾಲದಿಂದ 16 ಭಾಷೆಗಳಲ್ಲಿ ಸ್ಮಾರ್ಟ್‌ಫೋನ್ ಆಪ್

Update: 2016-01-29 19:52 IST

 ಅಬುಧಾಬಿ: ಗೃಹಸಚಿವಾಲಯದ ಸ್ಮಾರ್ಟ್ ಪೋನ್ ಆಪ್ಲಿಕೇಶನ್ಸೇವೆ 16 ಭಾಷೆಗಳಲ್ಲಿ ಲಭಿಸಲಿದೆಯೆಂದು ಸ್ಮಾರ್ಟ್ ಗವನ್‌ಮೆಂಟ್ ಪ್ರೋಗ್ರಾಂ ತಿಳಿಸಿದೆ. ಆನ್ಡ್ರಾಯ್ಡಾ, ಆಪ್‌ಸ್ಟೋರ್, ವಿಂಡೋಸ್ ಸಹಿತ ಎಲ್ಲ ಸ್ಮಾರ್ಟ್ ಫೋನ್ ಆಪರೇಟಿಂಗ್ ವ್ಯವಸ್ಥೆಗಳಲ್ಲಿ ಇದು ಲಭಿಸಲಿದೆ. ಭಾರತದ ಹಿಂದಿ ಸಹಿತ ವಿವಿಧ ಸೇವೆಗಳು ಲಭಿಸಲಿದೆ. ಅಲ್ಲದೆ ಭಾಷೆಗಳ ಆಪ್ ಸೇವೆಗಳು ಲಭ್ಯಗೊಳಿಸುವುದು ಬಳಕೆದಾರರ ಸಂಖ್ಯೆ ಹೆಚ್ಚಲು ಮತ್ತು ದೊಡ್ಡ ಸಮೂಹವನ್ನು ತಲುಪಲೂ ಸಾಧ್ಯವಾಗಲಿದೆ.
ಇಂಗ್ಲಿಷ್ ಅರಬಿ ಹಿಂದಿಯಲ್ಲದೆ ಉರ್ದು ಕೊರಿಯನ್ ಜಪಾನಿಸ್ ಪೊರ್ಚುಗೀಸ್ ಬಂಗಾಳಿ ಇಂಡೋನೇಷಿಯನ್ ರಷ್ಯನ್ ಜರ್ಮನಿ ಫ್ರೆಂಚ್ ಸ್ಪಾನಿಶ್ ಇಟಲಿಯನ್ ಚೈನಿಸ್ ತಗಲಾಗ್ ಮುಂತಾದ ಭಾಷೆಗಳಲ್ಲಿ ಆಪ್ ಸೇವೆ ಲಭಿಸುತ್ತಿದೆ. ಗೃಹ ಸಚಿವಾಲಯದ ಸ್ಮಾರ್ಟ್ ಅಪ್ಲಿಕೇಶನ್ ಬಳಸುವವರಿಗೆ ಭಾಷಾ ಸಮಸ್ಯೆ ಎದುರಾಗುವುದನ್ನು ತಪ್ಪಿಸಲಿಕ್ಕಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಸ್ಮಾರ್ಟ್ ಗವನ್‌ಮೆಂಟ್ ಪ್ರೋಗ್ರಾಂ ಎಕ್ಸಿಕ್ಯೂಟಿವ್ ಡೈರೆಕ್ಟರ್ ಲೆ. ಕರ್ನಲ್ ಫೈಝಲ್ ಮುಹಮ್ಮದ್ ಅಲ್ ಶಿಮ್ಮಾರಿ ಹೇಳಿದ್ದಾರೆ. ಶಿಕ್ಷಣ, ಸಾಮಾಜಿಕ ಹಿನ್ನೆಲೆಯನ್ನು ಪರಿಗಣಿಸದೆ ಎಲ್ಲರಿಗೂ ಸೇವೆ ಸುಲಭಗೊಳಿಸುವುದು ಉದ್ದೇಶವೆಂದು ಅವರು ಹೇಳಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News