×
Ad

ದುಬಾಯಿ : ಯಶಸ್ವಿಯಾಗಿ ನಡೆದ "ಅಲ್ ಖಮರ್ ವೆಲ್ಪೇರ್ ಎಸೋಸಿಯೇಶನ್ ದುಬಾಯಿ " ಇದರ 21 ನೇ ವಾರ್ಷಿಕ ಮಹಾಸಭೆ

Update: 2016-01-30 18:48 IST

ದುಬಾಯಿ : ಅಲ್ ಖಮರ್ ವೆಲ್ಫೇರ್ ಅಸೋಸಿಯೇಶನ್ ದುಬಾಯಿ ಇದರ 21 ನೇ ವಾರ್ಷಿಕ ಮಹಾಸಭೆಯು ತಾರೀಖು 28/01/2016 ರ ಗುರುವಾರದಂದು ಸಾಯಂಕಾಲ 9:30 ರ ಸುಮಾರಿಗೆ "ಹೋಟೇಲ್ ರಾಫಿ " ದೇರಾ ಇದರ ಸಭಾಂಗಣದಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು " ಅಲ್ ಖಮರ್ ವೆಲ್ಫೇರ್ ಎಸೋಸಿಯೇಶನ್ ದುಬಾಯಿ " ಇದರ ಸ್ಥಾಪಕ ಸದಸ್ಯರೂ ಪ್ರಸ್ತುತ ಗೌರವಾಧ್ಯಕ್ಷರೂ ಆದ ಜನಾಬ್!! ಎಂ.ಇ. ಮೂಳೂರು ವಹಿಸಿದ್ದರು.ಅಬ್ದುಲ್ ಜಲೀಲ್ ಮೂಳೂರು ಇವರ ಖಿರಾಅತ್ ನೊಂದಿಗೆ ಸಬೆಯು ಆರಂಭಿಸಲಾಯಿತು. ಸ್ವಾಗತ ಭಾಷಣ ಜನಾಬ್!! ಇಸ್ಮಾಯೀಲ್ ಅಬ್ದುಲ್ ರಝಾಕ್ ನೆರವೇರಿಸಿದರು. ಗತ ವಾರ್ಷಿಕ ವರಧಿ ವಾಚನ ಹಾಗೂ ಬಂದ ಪತ್ರ ಗಳ ವಾಚನೆಯನ್ನು ಜನಾಬ್!! ಅಬ್ದುಲ್ ಜಲೀಲ್ ರಝಾಕ್ , ಗತ ವಾರ್ಷಿಕ ಲೆಕ್ಕಪತ್ರವನ್ನು ಜನಾಬ್!! ಅಬ್ದುಲ್ ಹಮೀದ್ ರಝಾಕ್ , ಇವರುಗಳು ಸದಸ್ಯರಿಗೆ ಓದಿ ಹೇಳಿದರು , ಇದನ್ನು ಒಕ್ಕೊರಲಿನಿಂದ ಅನುಮೋದಿಸಲಾಯಿತು.

ನಿರ್ಗಮನ ಅಧ್ಯಕ್ಷರ ಎರಡು ಮಾತಿನ ನಂತರ ಕಳೆದ ಸಾಲಿನ ಕಾರ್ಯಕಾರಿ ಸಮಿತಿಯನ್ನು ಬರ್ಕಾಸ್ತು ಗೊಳಿಸಲಾಯಿತು, ತದನಂತರ ಹೊಸ ಕಾರ್ಯಕಾರಿ ಸಮಿತಿಯನ್ನು ಚುನಾಯಿಸಲಾಯಿತು.

ಹೊಸ ಕಾರ್ಯಕಾರಿ ಸಮಿತಿಯಲ್ಲಿ ಅಧ್ಯಕ್ಶರು ಜನಾಬ್| ಹಮೀದ್ ಮೂಳೂರು ತೋಟ , ಉಪಾಧ್ಯಕ್ಷರಾಗಿ ಮುಹಮ್ಮದ್ ಶಾಬಾನ್ ಮೂಳೂರು , ಇಸ್ಮಾಯಿಲ್ ಬಾರೂದ್, ಪ್ರಧಾನ ಕಾರ್ಯದರ್ಶಿ ಅಬ್ಧುಲ್ ಜಲೀಲ್ ರಝಾಕ್ , ಜೊತೆ ಕಾರ್ಯದರ್ಶಿ ಇಕ್ರಮ್ ಮೂಳೂರು ತೋಟ , ಕೋಶಾದಿಕಾರಿ ಅಬ್ದುಲ್ ಹಮೀದ್ ರಝಾಕ್ , ಸಂಚಾಲಕ ಎಂ.ಇ. ಉಸ್ಮಾನ್ , ಹ೦ಝ ಮೂಳೂರು,ಲೆಕ್ಕ ಪರಿಶೋದಕ ಎಂ.ಇ ಸುಲೈಮಾನ್ , ಹಾಗೂ ಇನ್ನಿತರ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆಮಾಡಲಾಯಿತು. ಇನ್ನಿತರ ವಿಷಯದಲ್ಲಿ ಒಂದು ಸುಧೀರ್ಘವಾದ ಚರ್ಚೆನಡೆದು ಅಂತಿಮ ತೀರ್ಮಾನಕ್ಕೆ ಬರಲು ಸಭೆಯು ಯಶಸ್ವಿಯಾಯಿತು. ಮುಖ್ಯ ಅಥಿತಿಯಾಗಿ ಬಂದಂತಹ ಜನಾಬ್!! ಇ.ಕೆ ಇಬ್ರಾಹೀಮ್ ಇವರು ಸಂಸ್ಥೆಯ ಬಗ್ಗೆ ಸಂಸ್ಥೆಯು ಊರಿನಲ್ಲಿ ನಡೆಸಿಕೊಂಡು ಬರುವಂತಹ ಉತ್ತಮ ಕೆಲಸ ಕಾರ್ಯಗಳನ್ನು ಪ್ರಶಂಸಿಸುತ್ತಾ ಶುಭ ಹಾರೈಸಿದರು.

ಜನಾಬ್!! ಇಸ್ಮಾಯೀಲ್ ಬಾರೂದ್ ಇವರು ಸದಸ್ಯರಿಗೆ ತನಗಾದ ಕೆಲವು ಅನುಭವ ಗಳನ್ನು ತಿಳಿಸಿದರು ,

ನೂತನ ಅಧ್ಯಕ್ಷರಾದ ಜನಾಬ್ !! ಅಬ್ದುಲ್ ಹಮೀದ್ ತೋಟ' ಇವರು ' ಒಳಿತಿನ ನಾಳೆಗಾಗಿ ಒಗ್ಗಟ್ಟಿನ ಶ್ರಮ ' ಯಾವರೀತಿ ಮಾಡಬಹುದು ಹಾಗೂ ಸಂಸ್ಥೆಯ ಉನ್ನತಿಗಾಗಿ ಹಲವು ಮಾರ್ಗ ಸೂಚಿಗಳನ್ನು ತಿಳಿಸಿದರು. ಸಭಾಧ್ಯಕ್ಷರ ಭಾಷಣದಲ್ಲಿ ಜನಾಬ್!! ಎಮ್.ಇ. ಮೂಳೂರು ರವರು ಮಾತನಾಡುತ್ತಾ 20 ವರುಷಗಳಿಂದ ಸಂಸ್ಥೆಯು ನಡೆಸಿಕೊಂಡು ಬಂದ ಕಾರ್ಯಕ್ರಮಗಳ ಒಂದು ಸಂಕ್ಷಿಪ್ತ ಹಿನ್ನೋಟವನ್ನು ನೆನಪಿಸುತ್ತಾ ಹೊಸ ಕಾರ್ಯಕಾರಿ ಸಮಿತಿಯು ಇನ್ನು ಮುಂದೆ ಯಾವರೀತಿಯ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗಬಹುದು ಎಂಬುದರ ಬಗ್ಗೆ ಕಿವಿಮಾತನ್ನು ತಿಳಿಸುತ್ತಾ ಹೊಸ ಪಧಾದಿಕಾರಿಗಳಿಗೆ ಶುಭವನ್ನು ಕೋರಿದರು.

ಕಾರ್ಯಕ್ರಮದ ನಿರೂಪನೆಯನ್ನು ಜನಾಬ್!! ಅಬ್ದುಲ್ ಲತೀಫ್ ರಝಾಕ್ ರವರು ನೆರವೇರಿಸಿದರು , ಜನಾಬ್!! ಇಕ್ರಮ್ ಮುಹಮ್ಮದ್ ಇವರು ಧನ್ಯವಾದವನ್ನು ತಿಳಿಸುತ್ತಾ ಸ್ವಲಾತ್ ನೊಂದಿಗೆ ಸಭೆಯು ಮುಕ್ತಾಯ ವಾಯಿತು.

ವರಧಿ : ಅಬ್ದುಲ್ ಲತೀಫ್ ಮೂಳೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News