ಸೌದಿಯಿಂದ ವಿದೇಶೀಯರು ಕಳುಹಿಸಿದ ಹಣ 15,690 ಕೋಟಿ ರಿಯಾಲ್!
ಜಿದ್ದಾ, ಫೆ. 1: ಸೌದಿ ಅರೇಬಿಯದಲ್ಲಿರುವ ವಿದೇಶಿ ವಲಸಿಗರು ತಮ್ಮ ದೇಶಗಳಿಗೆ 2015ರಲ್ಲಿ ಕಳುಹಿಸಿದ ಹಣ 15,690 ಕೋಟಿ ಸೌದಿ ರಿಯಾಲ್ ಆಗಿದ್ದು, ಸಾರ್ವಕಾಲಿಕ ಗರಿಷ್ಠವಾಗಿತ್ತು. ಇದು 2014ರಲ್ಲಿ ಕಳುಹಿಸಿದ ಮೊತ್ತ 15,330 ಕೋಟಿ ರಿಯಾಲ್‌ಗಿಂತ 2.3 ಶೇಕಡ ಹೆಚ್ಚಾಗಿದೆ.
ಕಳೆದ 22 ವರ್ಷಗಳ ಅವಯಲ್ಲಿ ಸೌದಿ ಅರೇಬಿಯದಿಂದ 1.5 ಲಕ್ಷ ಕೋಟಿ ರಿಯಾಲ್ ವಿದೇಶಗಳಿಗೆ ವರ್ಗಾವಣೆಯಾಗಿದೆ.
ಕಳೆದ ಇಸ್ಲಾಮಿಕ್ ಕ್ಯಾಲೆಂಡರ್ ವರ್ಷದಲ್ಲಿ ಹಲವಾರು ವಿದೇಶಗಳ ವಲಸಿಗರಿಗೆ 18 ಲಕ್ಷ ಹೊಸ ಕೆಲಸ ಪರವಾನಿಗೆಗಳನ್ನು ನೀಡಲಾಗಿದ್ದು, ಈ ಹಿನ್ನೆಲೆಯಲ್ಲಿ ಹಣ ವರ್ಗಾವಣೆಯಲ್ಲಿ ಏರಿಕೆಯಾಗಿದೆ.
ಸೌದಿ ಅರೇಬಿಯದಲ್ಲಿರುವ 11.5 ಶೇಕಡ ನಿರುದ್ಯೋಗ ಮಟ್ಟವನ್ನು ತಗ್ಗಿಸುವ ನಿಟ್ಟಿನಲ್ಲಿ ರಾಷ್ಟ್ರೀಕರಣವನ್ನು ಹೆಚ್ಚಿಸುವುದಕ್ಕಾಗಿ ವ್ಯಾಪಕ ಪ್ರಯತ್ನಗಳನ್ನು ನಡೆಸುತ್ತಿರುವ ಹೊರತಾಗಿಯೂ ಆ ದೇಶದಲ್ಲಿ ವಿದೇಶಿ ಕಾರ್ಮಿಕರ ಸಂಖ್ಯೆ ಹೆಚ್ಚುತ್ತಿದೆ.
ಸೌದಿ ಅರೇಬಿಯದಲ್ಲಿ ಕೆಲಸ ಮಾಡುತ್ತಿರುವ ವಿದೇಶೀಯನೊಬ್ಬ 2015ರಲ್ಲಿ ತನ್ನ ದೇಶಕ್ಕೆ ಕಳುಹಿಸಿದ ಸರಾಸರಿ ಹಣ 1,440 ಸೌದಿ ರಿಯಾಲ್ ಆಗಿತ್ತು. ಅದೇ ವೇಳೆ, ಸೌದಿ ಅರೇಬಿಯದ ಖಾಸಗಿ ಕ್ಷೇತ್ರದಲ್ಲಿ 2015ರಲ್ಲಿ ಕೆಲಸ ಮಾಡಿದವರ ಸಂಖ್ಯೆ 90 ಲಕ್ಷವನ್ನು ತಲುಪಿತ್ತು. ಇದೇ ಅವಯಲ್ಲಿ ಸರಕಾರಿ ಕ್ಷೇತ್ರದಲ್ಲಿ 72,000 ವಿದೇಶೀಯರು ಕೆಲಸ ಮಾಡಿದ್ದರು.