×
Ad

ವಿಶ್ವದ ಅತ್ಯಂತ ವೌಲ್ಯಯುತ ಬ್ರಾಂಡ್ ಎಮಿರೇಟ್ಸ್ ಏರ್‌ಲೆನ್ಸ್ ಸಾಧನೆ

Update: 2016-02-05 17:32 IST

ಕಳೆದ ವರ್ಷ ಎಮಿರೇಟ್ಸ್ ಏರ್‌ಲೈನ್ಸ್‌ನ ಬ್ರಾಂಡ್ ವೌಲ್ಯವು,7.7 ಶತಕೋಟಿ ಡಾಲರ್‌ಗೆ ತಲುಪಿದ್ದು, ಶೇ. 17ರಷ್ಟು ಏರಿಕೆಯನ್ನು ಕಂಡಿದೆ.

ವಾಯುಯಾನದಲ್ಲಿ ಹಾಗೂ ನೆಲದಲ್ಲಿ ಉತ್ಕೃಷ್ಟ ದರ್ಜೆಯ ಉತ್ಪನ್ನ ಹಾಗೂ ಸೇವೆಗಳನ್ನು ಒದಗಿಸುವ ಹಾಗೂ ಗ್ರಾಹಕರ ಆವಶ್ಯಕತೆಗಳಿಗೆ ಸ್ಪಂದಿಸುವಲ್ಲಿ ಎಮಿರೇಟ್ಸ್ ಏರ್‌ಲೈನ್ಸ್ ಪ್ರದರ್ಶಿಸುತ್ತಿರುವ ಬದ್ಧತೆಯೇ ಅದರ ಬ್ರಾಂಡ್ ವೌಲ್ಯ ವರ್ಧನೆಗೆ ಕಾರಣ.

    ದುಬೈ: ವಿಶ್ವದ ಅತ್ಯಂತ ವೌಲ್ಯಯುತ ಏರ್‌ಲೈನ್ಸ್ ಬ್ರಾಂಡ್ ಎಂಬ ಹೆಗ್ಗಳಿಕೆಗೆ ಯುಎಇನ ಎಮಿರೇಟ್ಸ್ ವಾಯುಯಾನಸಂಸ್ಥೆಯು ಪಾತ್ರವಾಗಿದೆ. ಈ ವಾರ ಬಿಡುಗಡೆಯಾದ 2016ರ ಸಾಲಿನ ‘ಬ್ರಾಂಡ್ ಫೈನಾನ್ಸ್ ಗ್ಲೋಬಲ್ 500’ ವರದಿಯು ಈ ವಿಷಯವನ್ನು ಬಹಿರಂಗಪಡಿಸಿದೆ. ಕಳೆದ ವರ್ಷ ಎಮಿರೇಟ್ಸ್ ಏರ್‌ಲೈನ್ಸ್‌ನ ಬ್ರಾಂಡ್ ವೌಲ್ಯವು,7.7 ಶತಕೋಟಿ ಡಾಲರ್‌ಗೆ ತಲುಪಿದ್ದು, ಶೇ. 17ರಷ್ಟು ಏರಿಕೆಯನ್ನು ಕಂಡಿದೆ.

ವಿಶ್ವದ ಶ್ರೇಷ್ಠ ಬ್ರಾಂಡ್‌ಗಳ ಪಟ್ಟಿಯಲ್ಲಿ ಎಮಿರೇಟ್ಸ್ ಏರ್‌ಲೈನ್ಸ್ ಸ್ಥಾನವು ಸತತ ಐದನೆ ವರ್ಷವೂ ಸ್ಥಿರವಾದ ಏರಿಕೆಯನ್ನು ಕಂಡಿದ್ದು, 171ನೆ ಸ್ಥಾನವನ್ನು ಪಡೆದುಕೊಂಡಿದೆ. ಮಧ್ಯಪ್ರಾಚ್ಯದ ಅತ್ಯಂತ ವೌಲ್ಯಯುತವಾದ ಬ್ರಾಂಡ್ ಎಂಬ ಸ್ಥಾನವನ್ನೂ ಅದು ಭದ್ರಪಡಿಸಿಕೊಂಡಿದೆ. ‘ಬ್ರಾಂಡ್ ಫೈನಾನ್ಸ್ ಗ್ಲೋಬಲ್ 500’ ವರದಿಯು 2009ರ ರ್ಯಾಂಕಿಂಗ್‌ಪಟ್ಟಿಯಲ್ಲ್ಲಿ ಎಮಿರೇಟ್ ಏರ್‌ಲೈನ್ಸ್ ಮೊದಲ ಬಾರಿಗೆ ಸ್ಥಾನ ಪಡೆದುಕೊಂಡಿತ್ತು. ಅಂದಿನಿಂದ ಈವರೆಗೆ ಅದರ ಬ್ರಾಂಡ್ ವೌಲ್ಯದಲ್ಲಿ ಎರಡು ಪಟ್ಟು ಏರಿಕೆ ಕಂಡುಬಂದಿದೆ.

 ವಾಯುಯಾನದಲ್ಲಿ ಹಾಗೂ ನೆಲದಲ್ಲಿ ಉತ್ಕೃಷ್ಟ ದರ್ಜೆಯ ಉತ್ಪನ್ನ ಹಾಗೂ ಸೇವೆಗಳನ್ನು ಒದಗಿಸುವ ಹಾಗೂ ಗ್ರಾಹಕರ ಆವಶ್ಯಕತೆಗಳಿಗೆ ಸ್ಪಂದಿಸುವಲ್ಲಿ ಎಮಿರೇಟ್ಸ್ ಏರ್‌ಲೈನ್ಸ್ ಪ್ರದರ್ಶಿಸುತ್ತಿರುವ ಬದ್ಧತೆಯೇ ಅದರ ಬ್ರಾಂಡ್ ವೌಲ್ಯ ವರ್ಧನೆಗೆ ಕಾರಣವೆಂದು ಎಮಿರೇಟ್ ಏರ್‌ಲೈನ್ಸ್‌ನ ಕಾರ್ಪೊರೇಟ್ ಸಂವಹನಗಳ ಹಿರಿಯ ವಿಭಾಗೀಯ ಉಪಾಧ್ಯಕ್ಷ ಬೌತ್ರೋಸ್ ತಿಳಿಸಿದ್ದಾರೆ.

 2015ನೆ ವರ್ಷವು ಎಮಿರೇಟ್ಸ್ ಏರ್‌ಲೈನ್ಸ್‌ನ ಬೆಳವಣಿಗೆಯ ದೃಷ್ಟಿಯಿಂದ ಮಹತ್ವದ ವರ್ಷವಾಗಿದೆ. ಈ ವರ್ಷದಲ್ಲಿ ಎಮಿರೇಟ್ಸ್ ಏರ್‌ಲೈನ್ಸ್, ತನ್ನ ವಾಯುಯಾನ ಜಾಲವನ್ನು 150 ತಾಣಗಳಿಗೆ ವಿಸ್ತರಿಸಿತ್ತು.ಎಮಿರೇಟ್ಸ್, ಈ ವರ್ಷ 26 ವಿಮಾನಗಳನ್ನು ಪಡೆದುಕೊಂಡಿದ್ದು,ವಿಶ್ವದ ಅತ್ಯಧಿಕ ಬೋಯಿಂಗ್ 777 ಹಾಗೂ ಏರ್‌ಬಸ್ ಎ380 ವಿಮಾನಗಳ ನಿರ್ವಾಹಕನೆಂಬ ಖ್ಯಾತಿಗೆ ಪಾತ್ರವಾಗಿದೆ. ಪ್ರಸ್ತುತ ಈ ಏರ್‌ಲೈನ್ಸ್ ಸಂಸ್ಥೆಯು 37 ನಗರಗಳಲ್ಲಿ ಡಬಲ್‌ಡೆಕರ್ ಎ380 ವಿಮಾನ ಸೇವೆಯನ್ನು ನೀಡುತ್ತಿದೆ.

ಪ್ರಯಾಣಿಕರಿಗೆ ಅತ್ಯಾಧುನಿಕ ತಂತ್ರಜ್ಞಾನದ ಸೇವೆಯನ್ನು ಪರಿಚಯಿಸುವಲ್ಲಿ ಎಮಿರೇಟ್ಸ್ ಏರ್‌ಲೈನ್ಸ್ ಸದಾ ಮುಂಚೂಣಿಯಲ್ಲಿದೆ. ಗ್ರಾಹಕರ ಪ್ರಯಾಣವನ್ನು ಸರಳಗೊಳಿಸುವ ಉದ್ದೇಶದಿಂದ ಅದು ತನ್ನ ಮೊಬೈಲ್ ಸೈಟ್‌ಗಳು ಹಾಗೂ ಆ್ಯಪ್ಸ್‌ಗಳನ್ನ ಅಭಿವೃದ್ಧಿಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News