×
Ad

ಸಿರಿಯನ್ ಸಂತ್ರಸ್ತರಿಗೆ 30ಕೋಟಿ ಡಾಲರ್ ನೆರವು: ಕುವೈಟ್

Update: 2016-02-05 18:14 IST

ಕುವೈಟ್  ಸಿಟಿ: ಆಂತರಿಕ ಯುದ್ಧಗ್ರಸ್ತ ಸಿರಿಯಾದ ಒಳಗೆ ಮತ್ತು ಹೊರಗೆ ಸಂಕಷ್ಟ ಅನುಭವಿಸುತ್ತಿರುವವರ ನೆರವಿಗೆ ಕುವೈಟ್ಅಮೀರ್ ಧಾವಿಸಿದ್ದಾರೆ. ಸಿರಿಯದ ಸಂತ್ರಸ್ತರ ನೆರವಿಗಾಗಿ ವಿಶ್ವಸಂಸ್ಥೆ ಆಯೋಜಿಸಿದ್ದ ನಾಲ್ಕನೆ ಸಿರಿಯನ್ ಸಹಾಯ ಶೃಂಗ ಸಭೆಯಲ್ಲಿ ಕುವೈಟ್
ನ ಪಾಲಾಗಿ ಮೂವತ್ತು ಕೋಟಿ ಡಾಲರ್ ನೆರವೀಯುವ ವಾಗ್ದಾನವನ್ನು ಅವರು ಘೋಷಿಸಿದ್ದಾರೆ. ಕುವೈಟ್ಅಮೀರ್ ಶೇಕ್ ಸಬಾಹ್ ಅಲ್ ಅಹ್ಮದ್ ಅಲ್‌ಜಾಬಿರ್ ಅಸ್ಸಬಾಹ್‌ರು ಈ ವಿಷಯವನ್ನು ಕುವೈಟ್ನಲ್ಲಿಯೇ ನಡೆದ ಶೃಂಗದಲ್ಲಿ ಘೋಷಿಸಿದ್ದಾರೆ. ಮೂರುವರ್ಷಗಳಲ್ಲಿ ಈಶೃಂಗ ನಡೆಯುತ್ತಿದ್ದು ಕುವೈಟ್ ಆತಿಥ್ಯ ವಹಿಸಿಕೊಂಡಿತ್ತು.

ಪ್ರಥಮ ಶೃಂಗದಲ್ಲಿ ಕುವೈಟ್ 30ಕೋಟಿ ಡಾಲರ್, ಎರಡನೆ ಹಾಗೂ ಮೂರನೆ ಶೃಂಗದಲ್ಲಿ ಕುವೈಟ್ 50 ಕೋಟಿ ಡಾಲರ್‌ಗಳ ನೆರವನ್ನು ಈಗಾಗಲೇ ಘೋಷಿಸಿತ್ತು. ಇದೀಗ ನಾಲ್ಕನೆ ಶೃಂಗದಲ್ಲಿ ಮತ್ತೆ ಮೂವತ್ತು ಕೋಟಿ ಡಾಲರನ್ನು ಘೋಷಿಸಿದೆ. ಅದೇ ವೇಳೆ ವಾಗ್ದಾನ ಮಾಡಿದ ಸಂಪೂರ್ಣ ಮೊತ್ತವನ್ನು ವಿಶ್ವಸಂಸ್ಥೆಗೆನೀಡಿರುವ ಏಕೈಕ ರಾಷ್ಟ್ರ ಕುವೈಟ್ ಗಿದೆ. ವಿಶ್ವಸಂಸ್ಥೆಯು ನಾಲ್ಕನೆ ಶೃಂಗದಲ್ಲಿ 773 ಕೋಟಿ ಡಾಲರ್ ಸಂಗ್ರಹಿಸುವ ಗುರಿಯನ್ನಿರಿಸಿಕೊಂಡಿದೆ. ಕಳೆದ ವರ್ಷ ನಡೆದ ಶೃಂಗದಲ್ಲಿ 840ಕೋಟಿ ಡಾಲರ್ ಗುರಿಯಾಗಿತ್ತು. ಆದರೆ ಕೇವಲ 240ಕೋಟಿ ಡಾಲರ್ ನೀಡುವ ವಾಗ್ದಾನ ದೊರಕಿತ್ತು. ಒಂದನೆ ಶೃಂಗದಲ್ಲಿ 150 ಕೋಟಿ ಡಾಲರ್ ವಾಗ್ದಾನ ಲಭಿಸಿತ್ತು. ವಿಶ್ವಸಂಸ್ಥೆಯ ಅಧೀನದಲ್ಲಿರುವ ಮಾನವಹಕ್ಕುಗಳ ಸಂಸ್ಥೆ ಈ ಶೃಂಗವನ್ನು ಏರ್ಪಡಿಸಿತ್ತಿದೆ. ವಿಶ್ವಸಂಸ್ಥೆ ಸಿರಿಯದೊಳಗೆ ಸಂಕಷ್ಟಕ್ಕೆ ಸಿಲುಕಿರುವವರಿಗೂ ಹೊರಗೆ ಸಂಕಷ್ಟ ಅನುಭವಿಸುವವರಿಗೂ ನೆರವನ್ನು ತಲುಪಿಸುತ್ತದೆ. ಸಿರಿಯನ್ ನಿರಾಶ್ರಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶೃಂಗ ಸಭೆಯನ್ನು ಏರ್ಪಡಿಸಲಾಗುತ್ತಿದೆ.

ಸಿರಿಯನ್ ಜನಸಂಖ್ಯೆಯಲ್ಲಿ ಅರ್ಧಾಂಶ ಮಂದಿ ಮನೆ ಕಳಕೊಂಡಿದ್ದಾರೆ. 75ಲಕ್ಷ ಮಂದಿ ಸಿರಿಯನ್ನರು ನಿರಾಶ್ರಿತರಾಗಿದ್ದಾರೆ. ಹೊರರಾಷ್ಟ್ರಗಳಲ್ಲಿ 45 ಲಕ್ಷ ಮಂದಿ ನಿರಾಶ್ರಿತರಿದ್ದಾರೆ. ಇದಲ್ಲದೆ ಸಿರಿಯಾದೊಳಗೆಯೇ ದಿಗ್ಭಂದನದ ರೀತಿಯಲ್ಲಿ ಐದು ಲಕ್ಷ ಮಂದಿ ಜೀವಿಸುತ್ತಿದ್ದಾರೆ . ಸಿರಿಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಹಸಿವಿನ ಗ್ರಾಮವಾಗಿ ಬದಲಾಗಿರುವ ಸಿರಿಯಾದ ಮದಾಯದ ದಯನೀಯ ಚಿತ್ರವು ಇತ್ತೀಚೆಗೆ ಜಾಗತಿಕ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದವು. ವಿಶ್ವಸಂಸ್ಥೆ ಭದ್ರತಾ ಸಮಿತಿ 2254,2139,2165,2191 ನಂಬರ್‌ನ ನಾಲ್ಕು ಆದ್ಯಾದೇಶ ಹೊರಡಿಸಿಯೂ ಹಲವು ಬಾರಿ ಆಗ್ರಹಿಸಿಯೂ ಅಗತ್ಯವಿರುವವರಿಗೆ ಆಹಾರ ಇತ್ಯಾದಿ ತಲುಪಿಸಲು ಸಿರಿಯನ್ ಸರಕಾರ ಸೂಕ್ತ ಅವಕಾಶವನ್ನು ಕಲ್ಪಿಸಿಲ್ಲ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News