ಸೌದಿ: ಕಾರ್ಮಿಕರಿಗಾಗಿ ಲೀಗಲ್ ಅಡ್ವೈಸರ್
ಲೇಬರ್‌ಆನ್‌ಲೈನ್ ಸೇವೆಯನ್ನು ಮೊದಲಿಗೆ ಅರೆಬಿಕ್ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಆರಂಭಿಸಲಾಗಿದೆ. ಆದರೆ ಸೌದಿಯಲ್ಲಿ ಕಾರ್ಮಿಕರು ವ್ಯಾಪಕವಾಗಿ ಮಾತನಾಡುತ್ತಿರುವ ಇತರ ಭಾಷೆಗಳನ್ನೂ ಆನಂತರ ಸೇರ್ಪಡೆಗೊಳಿ ಸಲಾಗುವುದು
ರಿಯಾದ್: ಸೌದಿಯ ಕಾರ್ಮಿಕ ಸಚಿವ ಮುಫ್ರೆಝ್ ಅಲ್-ಹಖ್ಬಾನಿ ಇತ್ತೀಚೆಗೆ, ‘‘ಲೀಗಲ್ ಅಡ್ವೈಸರ್ (ಕಾನೂನು ಸಲಹೆಗಾರ) ಎಂಬ ನೂತನ ಆನ್‌ಲೈನ್ ಮಾಹಿತಿ ಸೇವೆಯನ್ನು ಆರಂಭಿಸಿದ್ದಾರೆ. ಈಗಾಗಲೇ ಆನ್‌ಲೈನ್ ಪೋರ್ಟಲ್ ಲಿಂಕ್‌ನಲ್ಲಿರುವ ಹಕ್ಕುಗಳು ಹಾಗೂ ಕರ್ತವ್ಯಗಳು, ಕಾರ್ಮಿಕ ಶಿಕ್ಷಣ, ಉದ್ಯೋಗದ ವಾತಾವರಣ, ವೈದ್ಯಕೀಯ ಗ್ರಂಥಾಲಯ ಮತ್ತಿತರ ಸೇವೆಗಳ ಜೊತೆ ಇದೀಗ ಕಾನೂನು ಸೇವೆಯೂ ಸೇರ್ಪಡೆಗೊಂಡಿದೆ.
@MOL CARE ಲೇಬರ್‌ಆನ್‌ಲೈನ್ ಸೇವೆಯನ್ನು ಮೊದಲಿಗೆ ಅರೆಬಿಕ್ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಆರಂಭಿಸಲಾಗಿದೆ. ಆದರೆ ಸೌದಿಯಲ್ಲಿ ಕಾರ್ಮಿಕರು ವ್ಯಾಪಕವಾಗಿ ಮಾತನಾಡುತ್ತಿರುವ ಇತರ ಭಾಷೆಗಳನ್ನೂ ಆನಂತರ ಸೇರ್ಪಡೆಗೊಳಿಸಲಾಗುವುದು ಎಂದು ಮುಫ್ರೆಝ್ ಅಲ್-ಹಖ್ಬಾನಿ ತಿಳಿಸಿದ್ದಾರೆ. ಮಾಹಿತಿಯನ್ನು ಕೋರುವವರು ಮೊದಲಿಗೆ ಗ್ರಾಹಕ ಹಾಗೂ ಕಾರ್ಮಿಕ ಸಂಬಂಧಗಳ ಕುರಿತ ಸಹಾಯಕ ಕಾರ್ಮಿಕ ಸಚಿವ ಝಿಯಾದ್‌ಅಲ್ ಸಯೆಗ್ ತಿಳಿಸಿದ್ದಾರೆ. ಆನಂತರ ಅವನ್ನು ಗುತ್ತಿಗೆ ಒಪ್ಪಂದಗಳು,ರಜಾದಿನಗಳು, ಕೆಲಸದ ಸಮಯ, ತರಬೇತಿ, ಉದ್ಯೋಗದಿಂದ ವಜಾ ಹಾಗೂ ಸೇವಾ ಸೌಲಭ್ಯಗಳ ವಿವರಗಳೊಂದಿಗೆ ಉತ್ತರ ಸಹಿತವಾಗಿ ಅಧಿಕಾರಿಗಳಿಗೆ ಕಳುಹಿಸಿಕೊಡಲಾಗುತ್ತದೆ. ಆದರೆ ದೂರುಗಳನ್ನು ಸಲ್ಲಿಸಲು ಇಲ್ಲಿ ಅವಕಾಶವಿರುವುದಿಲ್ಲ. ಕಾರ್ಮಿಕರು ತಮ್ಮ ದೂರುಗಳನ್ನು ಕಾರ್ಮಿಕ ಕಚೇರಿಗಳು ಹಾಗೂ ಸಚಿವಾಲದ ಗ್ರಾಹಕ ಸೇವಾ ಇಲಾಖೆಯನ್ನು, ಟ್ವಿಟರ್‌ಖಾತೆ ಅಥವಾ 19911 ಕಾಲ್‌ಸೆಂಟರ್ ದೂರವಾಣಿ ಸಂಖ್ಯೆಯ ಮೂಲಕ ಸಲ್ಲಿಸಬಹುದಾಗಿದೆ.
ಲೀಗಲ್ ಅಡ್ವೈಸರ್ ಆನ್‌ಲೈನ್ ಮಾಹಿತಿ ಸೇವೆಯ ಉದ್ಘಾಟನಾ ಸಮಾರಂಭದಲ್ಲಿ ಸೌದಿ ಹಾಗೂ ರಿಯಾದ್ ವಾಣಿಜ್ಯೋದ್ಯಮ ಮಂಡಳಿಯ ಅಧ್ಯಕ್ಷ, ಸಹಾಯಕ ಕಾರ್ಮಿಕ ಸಚಿವ ಅಹ್ಮದ್ ಅಲ್-ಹುಮೈದಾನ್, ಉದ್ಯಮಿಗಳು, ವೃತ್ತಿಪರ ಕಾನೂನುತಜ್ಞರು, ಮಾನವಸಂಪನ್ಮೂಲ ನಿರ್ದೇಶಕರು, ರಾಜತಾಂತ್ರಿಕರು ಹಾಗೂ ಪತ್ರಕರ್ತರು ಉಪಸ್ಥಿತರಿದ್ದರು.