ಯುಎಇ: ಸಚಿವ ಸಂಪುಟಕ್ಕೆ ಹೊಸರೂಪ ಸಚಿವರಲ್ಲಿ ಎಂಟು ಮಹಿಳೆಯರು

Update: 2016-02-11 14:05 GMT

ದುಬೈ: ಯುಎಇ ರೂಪೀಕರಣಗೊಂಡ ಬಳಿಕ ಅತಿದೊಡ್ಡ ಸಚಿಸಂಪುಟ ಪುನರ್ರಚನೆಯನ್ನು ಘೋಷಿಸಲಾಗಿದೆ. ಯುಎಇ ಉಪಾಧ್ಯಕ್ಷ ಮತ್ತು ಪ್ರಧಾನಿ ಹಾಗೂ ದುಬೈ ಆಡಳಿತಾಧಿಕಾರಿಯಾದ ಶೇಕ್ ಮುಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಂ ಟ್ವಿಟರ್ ಮೂಲಕ ಬುಧವಾರ 29 ಸದಸ್ಯರ ಸಚಿವ ಸಂಪುಟದ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದಾರೆ. ಯುವಕರಿಗೆ, ಮಹಿಳೆಯರಿಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯವಿದೆ. ಎಂಟು ಹೊಸ ಸಚಿವರನ್ನು ಸಂಪುಟಕ್ಕೆ ಸೇರಿಸಲಾಗಿದೆ. ಮೂವರು ಸಚಿವರನ್ನು ಕೈಬಿಡಲಾಗಿದೆ. ಮಹಿಳೆಯರ ಒಟ್ಟು ಸಂಖ್ಯೆ ಎಂಟಕ್ಕೇರಿದೆ. ಹೊಸದಾಗಿ ನೇಮಕಗೊಂಡ ಸಚಿವರ ಸರಾಸರಿ ವಯಸ್ಸು 38 ವರ್ಷವಾಗಿದೆ.ಸಹಿಷ್ಣುತಾ ಖಾತೆಗಳನ್ನು ರೂಪಿಸಿ ಸಹಾಯಕ ಸಚಿವರನ್ನು ನೇಮಿಸಲಾಗಿದೆ. ಫೆಡರಲ್ ಸಚಿಸಂಪುಟ ವ್ಯವಸ್ಥೆಯಲ್ಲಿ ಬದಲಾವಣೆಯ ಕುರಿತು ಕಳೆದ ದಿವಸ ಸರಕಾರದ ಶೃಂಗದಲ್ಲಿ ಶೇಕ್ ಮುಹಮ್ಮದ್ ಘೋಷಿಸಿದ್ದರು. ಖಾತೆಗಳ ಸಂಖ್ಯೆ ಕಡಿಮೆಗೊಳಿಸಿ ಸಚಿವರ ಸಂಖ್ಯೆ ಹೆಚ್ಚಿಸಿ ಹೊಸ ಸಚಿವ ಸಂಪುಟ ಅಸ್ತಿತ್ವಕ್ಕೆ ಬಂದಿದೆ. ರಕ್ಷಣಾ ಖಾತೆಯ ಹೊಣೆ ಪ್ರಧಾನಿ ಶೇಕ್ ಮುಹಮ್ಮದ್ ಬಿನ್ ರಾಶಿದ್ ಅಲ್ ಮಕ್ತೂಂ ವಹಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಸಹಕಾರ- ಅಭಿವೃದ್ಧಿ ಖಾತೆಯ ಸಚಿವೆಯಾಗಿದ್ದ ಶೇಕ್ ಲುಬ್ನಾ ಅಲ್ ಕಾಸಿಮಿ ಹೊಸದಾಗಿ ರಚನೆಯಾದ ಸಹಿಷ್ಣುತಾ ಖಾತೆಯ ಸಹ ಸಚಿವರಾಗಿ ವರ್ಗಾವಣೆಗೊಂಡಿದ್ದಾರೆ. ಕ್ಯಾಬಿನೆಟ್ ಜನರಲ್ ಸೆಕ್ರಟರಿಯಾಗಿದ್ದ ನಜ್ಜಾ ಮುಹಮ್ಮದ್ ಅಲ್ ಅವರಾನ್ ಸಾಮಾಜಿಕ ವಿಕಾಸ ಸಚಿವೆಯಾಗಿದ್ದಾರೆ. ಡಾ.ಥಾನಿ ಅಲ್ ಝಿಯೂದಿ ಹವಮಾನ ವೈಪರೀತ್ಯ- ಪರಿಸರ ಕಾರ್ಯ ಸಚಿವರಾಗಿದ್ದಾರೆ. ಈಗ ಅವರು ವಿಶ್ವಸಂಸ್ಥೆ ಪುನರ್ಬಳಕೆ ಇಂಧನ ಏಜೆನ್ಸಿಯ ಯುಎಇ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೂವತ್ತೆರಡು ವರ್ಷದ ಇವರು ಪುನರ್ಬಳಕೆ ಇಂಧನ ವಿಷಯದಲ್ಲಿ ಡಾಕ್ಟರೇಟ್ ಪಡೆದಿದ್ದಾರೆ. ಮುಹಮ್ಮದ್ ಅಲ್ ಬುವಾರಿದಿ ಹೊಸ ರಕ್ಷಣಾ ಸಹ ಸಚಿವರಾಗಿದ್ದಾರೆ. ಜಮೀಲಾ ಸಲೀಂ ಅಲ್‌ಮುಹೈರಿ ಸಾರ್ವಜನಿಕ ವಿದ್ಯಾಭ್ಯಾಸ ಸಹ ಸಚಿವೆಯಾಗಿದ್ದಾರೆ.

22ವರ್ಷ ವಯಸ್ಸಿನ ಶಮ್ಮ ಅಲ್ ಮಸ್‌ರೂಯಿ ಯುವಜನ ಖಾತೆ ಸಚಿವೆಯಾಗಲಿದ್ದಾರೆ. ಇವರು ಯೂತ್ ಕೌನ್ಸಿಲ್ ಚೇರ್‌ಮ್ಯಾನ್ ಕೂಡ ಆಗಲಿದ್ದಾರೆ. ಸಚಿವ ಸಂಪುಟದಿಂದ ಹೊರಹೋಗುತ್ತಿರುವ ಸಚಿವರಾದ ಶೇಕ್ ಹಂದಾನ್‌ಬಿನ್ ಮುಬಾರಕ್, ಮರಿಯಂ ಅಲ್‌ರೂಮಿ, ಅಬ್ದುಲ್ಲಾ ಗೋಬಾಶ್‌ರ ಕೆಲಸ ಅಮೂಲ್ಯವಾದುದು ಎಂದು ಶೇಕ್ ಮುಹಮ್ಮದ್‌ಶ್ಲಾಘಿಸಿದ್ದಾರೆ.

ಹೊಸ ಸಚಿವರು ಮತ್ತು ಖಾತೆಗಳು

ಶೇಕ್ ಮುಹಮ್ಮದ್ ಬಿನ್ ರಾಶಿದ್ ಅಲ್ ಮಕ್ತೂಂ: ಪ್ರಧಾನಮಂತ್ರಿ, ರಕ್ಷಣೆ

ಶೇಕ್ ಸೈಫ್ ಬಿನ್ ಝಾಯಿದ್ ಅಲ್ ನಹ್ಯಾನ್: ಉಪಪ್ರಧಾನ ಮಂತ್ರಿ,, ಗೃಹ

ಶೇಕ್ ಮನ್ಸೂರ್ ಬಿನ್ ಝಾಯಿದ್ ಅಲ್ ನಹ್ಯಾನ್: ಉಪಪ್ರಧಾನಿ, ಫ್ರಸಿಡೆನ್ಸಿಯಲ್ ಕಾರ್ಯ ಸಚಿವ

ಶೇಕ್ ಹಂದಾನ್‌ಬಿನ್ ರಾಶಿದ್ ಅಲ್‌ಮಕ್ತೂಂ: ಹಣಕಾಸು ಸಚಿವ

ಶೇಕ್ ಅಬ್ದುಲ್ಲಾ ಬಿನ್ ಝಾಯಿದ್ ಅಲ್ ನಹ್ಯಾನ್: ವಿದೇಶ ಸಚಿವ- ಅಂತಾರಾಷ್ಟ್ರಸಹಕಾರ

ಶೇಕ್‌ನಹ್ಯಾನ್ ಬಿನ್ ಮುಬಾರಕ್ ಅಲ್ ನಹ್ಯಾನ್: ಸಾಂಸ್ಕೃತಿಕ-ವಿಜ್ಞಾನ ವಿಕಸನ

ಶೇಕ್ ಲುಬ್ನಾ ಬಿನ್ತಿ ಖಾಲಿದ್ ಅಲ್ ಕಾಸಿಮಿ: ಸಹಿಷ್ಣುತಾ ಕಾರ್ಯ(ಸಹ ಸಚಿವೆ)

ಮುಹಮ್ಮದ್ ಬಿನ್ ಅಬ್ದುಲ್ಲಾ ಅಲ್ ಗರ್‌ಗಾವಿ:ಕ್ಯಾಬಿನೆಟ್-ಭಾವಿ ಕಾರ್ಯ

ಸುಲ್ತಾನ್ ಬಿನ್ ಸಈದ್ ಅಲ್ ಮನ್ಸೂರಿ: ಆರ್ಥಿಕ ಕಾರ್ಯ

ಡಾ. ಅಬ್ದುರ್ರಹ್ಮಾನ್ ಬಿನ್ ಮುಹಮ್ಮದ್ ಬಿನ್ ನಾಸರ್ ಅಲ್ ಉವೈಸ್: ಆರೋಗ್ಯ-ರೋಗ ಪ್ರತಿರೋಧ ಕಾರ್ಯ

ಝಕರ್ ಬಿನ್ ಗೋಬಾಶ್ ಸಈದ್ ಗೋಬಾಶ್: ಮಾನವ ಸಂಪನ್ಮೂಲ- ರಾಷ್ಟ್ರೀಕರಣ

ಡಾ. ಅನ್‌ವರ್ ಬಿನ್ ಮುಹಮ್ಮದ್ ಗರ್‌ಗಾಶ್: ವಿದೇಶಕಾರ್ಯ(ಸಹ ಸಚಿವ)

ಉಬೈದ್ ಬಿನ್ ಹುಮೈದ್ ಅಲ್ ತಾಯಿರ್; ಆರ್ಥಿಕಕಾರ್ಯ(ಸಹ ಸಚಿವ)

ರೀಂ ಬಿನ್ತ್ ಇಬ್ರಾಹೀಂ ಅಲ್ ಹಾಶಿಮಿ: ಅಂತಾರಾಷ್ಟ್ರ ಸಹಾಯಕ(ಸಹ ಸಚಿವೆ)

ಸುಹೈಲ್ ಬಿನ್ ಮುಹಮ್ಮದ್ ಫರಜ್ ಅಲ್ ಮಸ್ರೂಇ: ಇಂಧನ ಕಾರ್ಯ

ಹುಸೈನ್ ಬಿನ್ ಇಬ್ರಾಹೀಂ ಅಲ್ ಹಮ್ಮಾದಿ: ವಿದ್ಯಾಭ್ಯಾಸ

ಡಾ. ಅಬ್ದುಲ್ಲಾ ಬಿನ್ ಮುಹಮ್ಮದ್ ಬೆಲ್‌ಹೈಫ್ ಅಲ್ ನುಹೈಮಿ: ಮೂಲಭೂತ ಸೌಕರ್ಯ ವಿಕಸನ

ಸುಲ್ತಾನ್ ಬಿನ್ ಸಈದ್ ಅಲ್ ಕಾದಿ: ನ್ಯಾಯ

ನಜ್ಜ ಬಿನ್ತ್ ಮುಹಮ್ಮದ್ ಅಲ್ ಅವಾರ್: ಸಾಮಾಜಿಕ ವಿಕಸನ

ಮುಹಮ್ಮದ್ ಬಿನ್ ಅಹ್ಮದ್ ಅಲ್ ಝಿಯೂದಿ: ಹವಾಮಾನ ವೈಪರೀತ್ಯ- ಪರಿಸರ ಕಾರ್ಯ

ಜಮೀಲಾ ಬಿನ್ತ್ ಸಾಲಿಂ ಅಲ್ ಮುಹೈರಿ: ಸಾರ್ವಜನಿಕ ವಿದ್ಯಾಭ್ಯಾಸ(ಸಹ ಸಚಿವೆ)

 ಡಾ. ಅಹ್ಮದ್ ಬಿನ್ ಅಬ್ದುಲ್ಲಾ ಹುಮೈದ್ ಬಲ್‌ಹುಲ್ ಅಲ್ ಫಲಾಸಿ: ಉನ್ನತ ವಿದ್ಯಾಭ್ಯಾಸ (ಸಹ ಸಚಿವ)

ಡಾ. ಸುಲ್ತಾನ್ ಬಿನ್ ಅಹ್ಮದ್ ಅಲ್ ಜಾಬಿರ್:(ಸಹ ಸಚಿವ)

ಡಾ. ಮಾಇತಾ ಬಿನ್ತ್ ಸಾಲಿಂ ಅಲ್ ಶಂಸಿ:(ಸಹ ಸಚಿವೆ)

ಡಾ. ರಾಶಿದ್ ಬಿನ್ ಅಹ್ಮದ್ ಬಿನ್ ಫಹದ್:(ಸಹ ಸಚಿವ)

ಉಹೂದ್ ಬಿನ್ತ್ ಕಲ್ಫಾನ್ ಅಲ್ ರೂಮಿ:ಮನರಂನಾ ಕಾರ್ಯ(ಸಹ ಸಚಿವೆ)

ನೂರಾ ಬಿನ್ತ್ ಮುಹಮ್ಮದ್ ಅಲ್ ಕಅಬಿ: ಎಫ್. ಎನ್. ಸಿ ಕಾರ್ಯ(ಸಹ ಸಚಿವೆ)

ಶಮ್ಮ ಬಿನ್ತ್ ಸುಹೈಲ್ ಫಾರಿಸ್ ಅಲ್ ಮಸ್ರೂಇ:ಯುವಜನ ಕಾರ್ಯ(ಸಹ ಸಚಿವೆ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News