ಹಿದಾಯತ್ ಫೌಂಡೇಶನ್ ನಿಂದ ‘ಹಿದಾಯತ್ ಕಪ್ 2016’ ಕ್ರೀಡಾಕೂಟ

Update: 2016-02-14 13:08 GMT

ಜುಬೈಲ್ : ಭಿನ್ನ ಸಾಮರ್ಥ್ಯದ ಮಕ್ಕಳ ಸಹಾಯಾರ್ಥಕ್ಕಾಗಿ ಹಿದಾಯತ್ ಫೌಂಡೇಶನ್ ಜುಬೈಲ್ ಹಮ್ಮಿಕೊಳ್ಳಲಾದ ಹಿದಾಯತ್ ಕಪ್ 2016 ಕ್ರೀಡಾಕೂಟವನ್ನು ಸೌದಿ ಅರೇಬಿಯಾದಲ್ಲಿ ಇತ್ತೀಚೆಗೆ ಉದ್ಘಾಟಿಸಲಾಯಿತು. ರಿಯಲ್ ಟೇಕ್ ಅಧ್ಯಕ್ಷರಾದ ಇಸ್ಮಾಯಿಲ್ ಪಂದ್ಯಾಕೂಟವನ್ನು ಉದ್ಘಾಟಿಸಿದರು. ಮೊದಲ ಪಂದ್ಯದಲ್ಲಿ ಡೀಲ್ ವಾರಿಯರ್ಸ್ ಮತ್ತು ಈಸ್ಟರ್ನ್ ಬ್ಲೂ ತಂಡಗಳ ನಡುವೆ ನಡೆದವು. ನಂತರದ ಪಂದ್ಯದಲ್ಲಿ ಈಗ್ಲೈಟ್ ಮತ್ತು ಸ್ಯಾಮ್ಕಾನ್, ಎನ್ ಜಿ ಸಿ ಹಾಗೂ ಸಿ ಎಫ್ ಸಿ, ಕೊನೇಯ ಪಂದ್ಯದಲ್ಲಿ ಬ್ಲೂಸ್ಟಾರ್ ಮತ್ತು ಆಂಪ್ಲಿಟ್ಯೂಡ್ ತಂಡಗಳು ಸೆಣಸಾಟ ನಡೆಸಿದವು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಅಶ್ಪಾಕ್ ಪ್ಲಾಂಟ್ ಸೊಲ್ಯೂಶನ್, ಆಸಿಫ್ ಅಮಾಕೋ, ಆಬಿದ್ ಜಿಆರ್ಸಿ, ಯೂನೂಸ್ ಹ್ಯುಂಡೈ, ಶರೀಫ್ ಮತ್ತಿತರರು ಉಪಸ್ಥಿತರಿದ್ದರು. ಕೊರೆಯುವ ಚಳಿಯಲ್ಲೂ ಅತೀವ ಉತ್ಸಾಹದಿಂದ ಕ್ರೀಡಾಪಟುಗಳು ಪಂದ್ಯದಲ್ಲಿ ಪಾಲ್ಗೊಂಡರು. ಭಿನ್ನ ಸಾಮರ್ಥ್ಯದ ಮಕ್ಕಳನ್ನು ಸಲಹುತ್ತಿರುವ ಹಿದಾಯತ್ ಫೌಂಡೇಶನ್ ಗೆ ನೆರವಾಗುವ ಉದ್ದೇಶದಿಂದ ಈ ಪಂದ್ಯಾಟವನ್ನು ಆಯೋಜಿಸಲಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News