×
Ad

ಸೌದಿ: ಅವರು ನಾಲ್ವರೂ ಸೆಲ್ಫಿ ತೆಗೆಸಿಕೊಂಡರು. ನಂತರ ಜತೆಯಾಗಿ ಕಾರು ಅಪಘಾತದಲ್ಲಿ ಸತ್ತರು!

Update: 2016-02-23 16:57 IST

ರಿಯಾದ್; ಸಾಯುವ ಮೊದಲು ಅಧ್ಯಾಪಕರು ತೆಗೆದ ಸೆಲ್ಫಿ ಸೋಶಿಯಲ್ ಸೈಟ್ ಹಾಗು ಪ್ರಾದೇಶಿಕ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು ನೋವು ಸೃಷ್ಟಿಸಿದೆ. ಅಲ್‌ಬಾಹ ಪ್ರಾಂತದಲ್ಲಿ ಕಾರುಗಳೆರಡು ಢಿಕ್ಕಿಯಾದ ಪರಿಣಾಮ ಮೃತರಾದ ನಾಲ್ವರು ಅಧ್ಯಾಪಕರು ಕಾರಿನೊಳಗೆ ಸೆಲ್ಫಿತೆಗೆದು ಸಾಮಾಜಿಕ ಮಾಧ್ಯಮಗಳಿಗೆ ಪೋಸ್ಟ್ ಮಾಡಿದ್ದರು. ಇದರ ನಂತರ ಇವರು ಸಂಚರಿಸುತ್ತಿದ್ದ ಕಾರು ಎದುರುಗಡೆಯಿಂದ ಬರುತ್ತಿದ್ದ ಇನ್ನೊಂದು ಕಾರಿಗೆ ಢಿಕ್ಕಿಯಾಗಿ ನಾಲ್ವರೂ ಸ್ಥಳದಲ್ಲೇ ಮೃತರಾಗಿದ್ದಾರೆ.


ಅಲ್‌ಬಾಹ ಪ್ರಾಂತದ ಲೈದ್‌ನಿಂದ ಎಂಬತ್ತು ಕಿಲೋಮೀಟರ್ ದೂರದ ಮಕ್ಕಾ ರಸ್ತೆಯಲ್ಲಿ ದುರ್ಘಟನೆ ನಡೆದಿದೆಯೆಂದು ಪ್ರಾದೇಶಿಕ ಮಾಧ್ಯಮಗಳು ವರದಿ ಮಾಡಿವೆ. ಜಾರುಲ್ಲಾ ಅಲ್ ಅಬ್ದಲಿ, ಹುಸೈನ್ ಅಬ್ದಲಿ, ಅಬ್ದುಲ್ಲಾ ಅಬ್ದಲಿ, ಅಲಿ ಝುಬೈದಿ ಅಪಘಾತದಲ್ಲಿ ಮೃತರಾದ ಅಧ್ಯಾಪಕರು.ಅಪಘಾತದ ರಭಸಕ್ಕೆ ಕಾರಿಗೆ ಬೆಂಕಿ ಹಿಡಿದು ಸಂಪೂರ್ಣ ಸುಟ್ಟುಹೋಗಿದೆ. ನಾಲ್ವರೂ ಹೊರಗಿಳಿಯಲಾಗದೆ ಕಾರಿನೊಳಗೆ ಸುಟ್ಟು ಹೋಗಿದ್ದಾರೆ. ಸಿವಿಲ್ ಡಿಫೆನ್ಸ್ ವಿಭಾಗ ಬಂದು ಹೆಚ್ಚು ಕಷ್ಟಪಟ್ಟು ಮೃತದೇಹವನ್ನು ಹೊರಗೆ ತೆಗೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News