ದುಬೈ: ಅನುಮತಿಯಿಲ್ಲದೆ ಸಾಮಾಜಿಕ ಮಾಧ್ಯಮಗಳಲ್ಲಿ ಯಾರದೇ ಫೋಟೊ ಹಾಕಿದರೆ ಕಠಿಣ ಶಿಕ್ಷೆ!

Update: 2016-02-25 09:42 GMT

ದುಬೈ: ಅನುಮತಿ ರಹಿತವಾಗಿ ಇತರರ ಫೋಟೊಗಳನ್ನು ಸಾಮಾಜಿಕ ಮಾಧ್ಯಮಗಳಿಗೆ ಪೋಸ್ಟ್ ಮಾಡಿದರೆ ಅಂತಹವರಿಗೆ ಕಠಿಣ ಶಿಕ್ಷೆ ಲಭಿಸಲಿದೆಯೆಂದು ದುಬೈ ಪೊಲೀಸ್ ಮುನ್ನೆಚ್ಚರಿಕೆ ನೀಡಿದೆ. ಆರು ತಿಂಗಳ ಶಿಕ್ಷೆ ಮತ್ತು ಒಂದೂವರೆ ಲಕ್ಷದಿಂದ ಐದುಲಕ್ಷ ರೂ. ವರೆಗೆ ದಂಡ ವಿಧಿಸಲಾಗುವುದು. ಇದು ಗೊತ್ತಿಲ್ಲದೆ ತಮಾಷೆಗೆ ಫೋಟೊಗಳನ್ನು ಪೋಸ್ಟ್ ಮಾಡುತ್ತಿರುವ ವಿದ್ಯಮಾನಗಳು ಹೆಚ್ಚುತ್ತಿವೆ.

 ಇದನ್ನು ನಿಲ್ಲಿಸಲಿಕ್ಕಾಗಿ ಜಾಗೃತಿ ಅಭಿಯಾನಗಳನ್ನು ಆರಂಭಿಸಲಾಗಿದೆಎಂದು ದುಬೈ ಪೊಲೀಸ್ ಆಡಳಿತ ವಿಭಾಗ ಅಸಿಸ್ಟೆಂಟ್ ಕಮಾಂಡರ್ ಮೇಜರ್‌ಜನರಲ್ ಮುಹಮ್ಮದ್ ಅಲ್ ಶರೀಫ್ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ಅಭಿಯಾನಗಳನ್ನು ಕೈಗೊಳ್ಳಲಾಗುತ್ತದೆ. ಯುಎಇ ಐಟಿ ಕಾನೂನುಪ್ರಕಾರ ಅಪರಾಧಕೃತ್ಯ ನಡೆಸುವವರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಮಕ್ಕಳು ಸಾಮಾಜಿಕ ಮಾಧ್ಯಮಗಳನ್ನು ಉಪಯೋಗಿಸದಂತೆ ಹೆತ್ತವರು ನೋಡಿಕೊಳ್ಳಬೇಕು. ಅವರನ್ನು ಅಪರಾಧಕೃತ್ಯಗಳಿಗೆ ಬಲಿಪಶುಮಾಡುವ ಸಾಧ್ಯತೆ ಇರುವುದರಿಂದ ಈ ಸೂಚನೆ ನೀಡಲಾಗಿದೆ. ನಿಶ್ಚಿತ ಪ್ರಾಯಮಿತಿಗಿಂತ ಕೆಳಗಿನ ವಯಸ್ಸಿನವರು ಸಾಮಾಜಿಕ ಮಾಧ್ಯಮಗಳನ್ನು ಬಳಸಬಾರೆದೆಂಬ ಕಾನೂನು ಹಲವು ದೇಶಗಳಲ್ಲಿವೆ ಎಂದು ಮುಹಮ್ಮದ್ ಅಲ್‌ಶರೀಫ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News