×
Ad

ಸೌದಿ ಅರೇಬಿಯದಲ್ಲಿ ಟ್ರೈಲರ್ ಢಿಕ್ಕಿ: ಭಾರತೀಯ ವ್ಯಕ್ತಿ ಮೃತ್ಯು

Update: 2016-03-02 19:20 IST

ಮಕ್ಕಾ,ಮಾರ್ಚ್.2: ತಾಯಿಫ್‌ನಲ್ಲಿ ಟ್ರೈಲರೊಂದು ಕೇರಳದ ಮಲಪ್ಪುರಂನ ವ್ಯಕ್ತಿಯೊಬ್ಬನಿಗೆ ಢಿಕ್ಕಿಯಾದ ಪರಿಣಾಮ ಎ.ಆರ್ ನಗರ. ಪುಕಯೂರ್ ಕೊಟ್ಟಂಚಾಲ್‌ನ ಅಬ್ದುಸ್ಸಲಾಂ ಕಳ್ಳಿಯತ್(48) ಮೃತರಾಗಿದ್ದಾರೆ.ಅವರು ಫೈನ್ ಟಿಶ್ಯೂ ಕಂಪೆನಿಯ ಬಿಸಿನೆಸ್ ಎಕ್ಸಿಕ್ಯೂಟಿವ್ ಆಗಿದ್ದರು. ಸೋಮವಾರ ಕಂಪೆನಿಯಿಂದ ತಾಯಿಫ್‌ಗೆ ಹೋಗಿದ್ದರು. ತಾಯಿಫ್ ರಸ್ತೆಯಲ್ಲಿ ಅವರು ಸಂಚರಿಸುತ್ತಿದ್ದ ವಾಹನದ ಟಯರ್ ಪಂಕ್ಚರ್ ಆಗಿತ್ತು. ಟಯರ್ ಬದಲಿಸಲಿಕ್ಕಾಗಿ ಅಪಾಯ ಸೂಚಕ ಸಿಗ್ನಲ್‌ನ್ನು ರಸ್ತೆಯಲ್ಲಿ ಇರಿಸಲು ಹೊರಗಿಳಿಯುತ್ತಿದ್ದ ಸಂದರ್ಭದಲ್ಲಿ ಪಾಕಿಸ್ತಾನಿ ವ್ಯಕ್ತಿಯೊಬ್ಬ ಚಲಾಯಿಸುತ್ತ ಬಂದ ಟ್ರೈಲರ್ ಅವರಿಗೆ ಢಿಕ್ಕಿಯಾಗಿತ್ತು.

ಅಬ್ದುಸ್ಸಲಾಂ ಸ್ಥಳದಲ್ಲೇ ಮೃತರಾದರು. ರಾತ್ರೆ ಕಳೆದರೂ ಮನೆಗೆ ಯಾಕೆ ಬಂದಿಲ್ಲ ಎಂದು ಮನೆಯವರು ಹುಡುಕಾಡಲು ಆರಂಭಿಸಿದ್ದರು. ಕಳೆದ ಹದಿನಾಲ್ಕು ವರ್ಷಗಳಿಂದ ಅವರು ಮಕ್ಕಾದ ಕಂಪೆನಿಯಲ್ಲಿ ಕೆಲಸಮಾಡುತ್ತಿದ್ದಾರೆ. ಮಂಗಳವಾರ ಕಂಪೆನಿ ಹುಡುಕಾಡಿದಾಗ ಅಪಘಾತ ಸಂಭವಿಸಿದ ವಿವರ ತಿಳಿದು ಬಂದಿತ್ತು. ಮಕ್ಕಾದಲ್ಲಿ ಪತ್ನಿಮಕ್ಕಳೊಂದಿಗೆ ಅವರು ವಾಸಿಸುತ್ತಿದ್ದರು. ಮೃತದೇಹವನ್ನು ಮಕ್ಕದಲ್ಲೇ ದಫನ ಮಾಡಲಾಗುವುದೆಂಬ ಕುಟುಂಬ ಸದಸ್ಯರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News