ಸೌದಿ ಏರ್‌ಲೈನ್ಸ್ : ಹಾರಾಟದಲ್ಲಿರುವಾಗಲೇ ಪೈಲಟ್ ಹೃದಯಾಘಾತದಿಂದ ಸಾವು
Update: 2016-03-04 09:58 IST
ರಿಯಾಧ್: ಬಿಶ ನಗರದಿಂದ ರಿಯಾಧ್‌ಗೆ ತೆರಳುತ್ತಿದ್ದಸೌದಿ ಅರೇಬಿಯನ್ ಏರ್‌ಲೈನ್ಸ್‌ನ ವಿಮಾನವೊಂದರ ಪೈಲಟ್ ವಿಮಾನ ಹಾರಾಟ ನಡೆಸುತ್ತಿರುವಾಗಲೇಹೃದಯಾಘಾತದಿಂದ ಸೋಮವಾರ ಮೃತಪಟ್ಟಿದ್ದಾರೆಂದು ಏರ್‌ಲೈನ್ಸ್ ಮಾಹಿತಿ ನೀಡಿದೆ.
ವಲೀದ್ ಅಲ್-ಮೊಹಮ್ಮದ್ ಎಂಬ ಹೆಸರಿನ ಪೈಲಟ್ ಎಸ್‌ವಿ1734 ವಿಮಾನವನ್ನು ಕಿಂಗ್ ಖಲೀದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಸುವ ಮೊದಲೇ ಹೃದಯಾಘಾತಕ್ಕೊಳಗಾದಾಗ ಸಹ ಪೈಲಟ್ ರಾಮಿ ಬೆನ್ ಘಾಝಿ ಕೂಡಲೇ ವಿಮಾನದ ನಿಯಂತ್ರಣವನ್ನು ತಮ್ಮ ಕೈಯಲ್ಲಿ ತೆಗೆದುಕೊಂಡರು. ನಂತರ ವಿಮಾನ ನಿಲ್ದಾಣಕ್ಕೆ ಕರೆ ಮಾಡಿ ವಿಮಾನ ಕೆಳಗಿಳಿಯುತ್ತಿದ್ದಂತೆಯೇ ಅಂಬ್ಯುಲೆನ್ಸ್ ಸಿದ್ಧವಾಗಿಟ್ಟುಕೊಳ್ಳುವಂತೆ ಅವರು ತಿಳಿಸಿದರು.
ವಿಮಾನ ಕೆಳಗಿಳಿಯುತ್ತಿದ್ದಂತೆ ಅಲ್ಲಿ ಕಾದು ನಿಂತಿದ್ದ ವೈದ್ಯರು ವಿಮಾನಪ್ರವೇಶಿಸಿ ಪೈಲಟ್‌ನನ್ನು ಪರೀಕ್ಷಿಸಿ ಆತ ಮೃತಪಟ್ಟಿದ್ದಾನೆಂದು ಘೋಷಿಸಿದರು.