×
Ad

ಡಿ.ಕೆ.ಎಸ್.ಸಿ ದಮ್ಮಾಮ್ ವಲಯಕ್ಕೆ ನೂತನ ಸಾರಥ್ಯ

Update: 2016-03-06 23:15 IST

  ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಇದರ ದಮ್ಮಾಮ್ ವಲಯದ ಮಹಾಸಭೆಯು ದಿನಾಂಕ 04/02/2016 ನೇ ಶುಕ್ರವಾರ ಜುಮಾ ನಮಾಜಿನ ಬಳಿಕ ಅಲ್ ಕೋಬಾರ್ ಅಪ್ಸರ ರೆಸ್ಟೋರೆಂಟ್ ನಲ್ಲಿ ವಲಯದ ಅಧ್ಯಕ್ಷರಾದ ಜನಾಬ್ ಸುಲೈಮಾನ್ ಮೀಲನ್ ಸುರಿಂಜೆ ಇವರ ಗಣ್ಯ ಅಧ್ಯಕ್ಷತೆಯಲ್ಲಿ ಜರಗಿತು. ಫ್ರಾರಂಭದಲ್ಲಿ ನಜೀಬ್ ಮದನಿ ದುವಾ ನೆರೆವೆರಿಸಿದರು. ನಂತರ ಮಾಸ್ಟರ್ ಅರೀಫ್ ಸಕಲೆಶ್ಪುರ ಕಿರಾಅತ್ ಪಟಿಸಿದರು. ಸದ್ರಿ ಸಭೆಯನ್ನುಝೈನುದ್ದೀನ್ ಮುಖ್ವೆರವರು ಬಂದ ಆತಿಥಿಗಳನ್ನು ಸ್ವಾಗತಿಸಿದರು. ಕೇಂದ್ರ ಸಮಿತಿಯ ಕಾರ್ಯಧ್ಯಕ್ಷಾಬ್ದುಲ್ ಹಮೀದ್ ಅರಮೆಕ್ಸ್ ರವರು ಸಭೆಯನ್ನು ಉದ್ಘಾಟಿಸಿದರು.  2015 - 2016 ರ ಅವಧಿಯಲ್ಲಿ ಅತ್ಯಂತ ಉತ್ತಮವಾಗಿ ಕಾರ್ಯನಿರ್ವಾಹಿಸಿ ಪ್ರಥಮ ಸ್ಥಾನವನ್ನು ಪಡೆದ ಜುಬೈಲ್, ದ್ವಿತೀಯ ಸ್ಥಾನವನ್ನು ಪಡೆದ ದಮ್ಮಾಮ್, ಹಾಗು ತ್ರತೀಯ ಸ್ಥಾನವನ್ನು ಪಡೆದ ಹಪ್ರಲ್ ಬಾತಿನ್   ಘಟಕಗಳಿಗೆ ಅಭಿನಂದಾನ ಪತ್ರ ಮತ್ತು ಸ್ಮರಣೆಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ2016-2017 ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಚುನಾವಣಾಧಿಕಾರಿಯಾಗಿ ಡಿ.ಕೆ.ಎಸ್.ಸಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಅನ್ವರ್ ಹುಸೈನ್ ಗೂಡಿನಬಳಿವರು ನೆರೆವೆರಿಸಿಕೊಟ್ಟರು. ಗೌರವಧ್ಯಕ್ಷರಾಗಿ ಇಸ್ಮಾಯಿಲ್ ಕಿನ್ಯ, ಅಧ್ಯಕ್ಷರಾಗಿ ಸುಲೈಮಾನ್ ಮೀಲನ್ ಸುರಿಂಜೆ,  ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕ್ಕರ್ ಬರ್ವ, ಕೋಶಾಧಿಕಾರಿಯಾಗಿ  ಹಸ್ಸನ್ ಬಾವ ಕುಪ್ಪೇಪದವು, ಉಪಧ್ಯಕ್ಷರಾಗಿ  ಶೈಖ್ ಬಲ್ಕುಂಜೆ, ಅಶ್ರಫ್ ಮದಕ, ಅಝೀಝ್ ಮೂಡುತೋಟ, ಕಾರ್ಯದರ್ಶಿಯಾಗಿ ಮೊಹಮ್ಮದ್ ಅಶ್ರಫ್ ನಾವುಂದ,ಇಕ್ಬಾಲ್ ಮಲ್ಲೂರ್,ಹಸ್ಸನ್ ಕೂಟ್ಟಿಗೆಹಾರ, ಫಾರೂಖ್ ಕರ್ನೀರೆ, ಸಂಘಟಕರಾಗಿ    ಹೈದರ್ ಬಜ್ಪೆ, ಸಲೀಮ್ ಉಕ್ಕುಡ, ಬಶೀರ್ ಕೈಕಂಬ, ಶಂಶೀರ್ ಮುಲ್ಕಿ, ಅಬ್ದುಲ್ ರಹ್ಮಾನ್ ಪನಾಜೆ, ಸಿರಾಜ್ ಕುಂತೂರ್, ಕೆ.ಹೆಚ್ ರಫೀಕ್ ಸುರಿಂಜೆ, ಅಡ್ವೈಸರ್ ಆಗಿ   ಅಬ್ದುಲ್ ಹಮೀದ್ ಅರಮೆಕ್ಸ್, ಝೈನುದ್ದೀನ್ ಮುಖ್ವೆ, ಮುಹಿದ್ದೀನ್  ಹಾಜಿ ಗೂಲ್ಡನ್,  ತಾಹೀರ್ ಕುಂದಾಪುರ, ಹಸ್ಸನ್ ಮೂಡುತೋಟ, ಹಾತೀಮ್ ಕುಳೂರು, ಹಾತೀಮ್ ಕಂಚಿ, ಸಿದ್ದೀಕ್ ಕೊಂಚಾರ್, ಎನ್.ಎಸ್ ಅಬ್ದುಲ್ಲಾ, ಸೆಯ್ಯದ್ ಬಾವ, ಗಪೂರ್ ಸಜಿಫ, ಅನ್ವರ್ ಹುಸೈನ್ ಗೂಡಿನಬಳಿ. ಇವರೂಗಳನ್ನೂಳಗೊಂಡ ಒಟ್ಟು  62 ನೂತನ  ಸದಸ್ಯರನ್ನು ಅಯ್ಕೆ ಮಾಡಲಾಯಿತು. ಕಾರ್ಯಕ್ರಮವನ್ನು ವಲಯದ ಕಾರ್ಯದರ್ಶಿ ಇಕ್ಬಾಲ್ ಮಲ್ಲೂರ್ ಕಾರ್ಯಕ್ರಮ ನಿರ್ವಹಿಸಿದರು. ನೂತನ ವಾಗಿ ಆಯ್ಕೆಯಾದ ಎಲ್ಲಾ ಪದಾದಿಕಾರಿಗಳಿಗೆ ಸರ್ವ ವಿಧ ಶುಭಾಶಯಗಳನ್ನು ಆರ್ಪಿಸುವ ಡಿ.ಕೆ.ಎಸ್.ಸಿ ಜುಬೈಲ್ ಘಟಕ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News