ಡಿ.ಕೆ.ಎಸ್.ಸಿ. ಅಲ್‌ಖಾನ್ ಘಟಕ ಅಸ್ತಿತ್ವಕ್ಕೆ
ದುಬೈ, ಮಾ.7: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್(ಡಿ.ಕೆ.ಎಸ್.ಸಿ.) ಯು.ಎ.ಇ. ರಾಷ್ಟ್ರೀಯ ಸಮಿತಿ ಅಧೀನದ ಸಭೆಯು ಇತ್ತೀಚೆಗೆ ಸಮೀರ್ ಅಹ್ಮದ್ ಅವರ ನಿವಾಸದಲ್ಲಿ ಇಬ್ರಾಹೀಂ ಹಾಜಿ ಕಿನ್ಯ ಅವರ ದುಆದೊಂದಿಗೆ ನಡೆಯಿತು. ಡಿ.ಕೆ.ಎಸ್.ಸಿ. ರಾಷ್ಟ್ರೀಯ ಸಮಿತಿ ನಾಯಕರಾದ ಇ.ಕೆ.ಇಬ್ರಾಹೀಂ ಕಿನ್ಯ, ಎಸ್.ಯೂಸುಫ್ ಅರ್ಲಪದವು ಅವರು ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್‌ನ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಇದೇ ಸಂದರ್ಭ ಶಾರ್ಜಾ ಅಲ್ಖಾನ್‌ನಲ್ಲಿ ಡಿ.ಕೆ.ಎಸ್.ಸಿ. ನೂತನ ಯುನಿಟ್ ರಚಿಸಲು ತೀರ್ಮಾನಿಸಲಾಯಿತು. ಸಮೀರ್ ಅಹ್ಮದ್ ಸ್ವಾಗತಿಸಿದರು. ನೂತನ ಸಮಿತಿಯನ್ನು ಇಬ್ರಾಹೀಂ ಹಾಜಿ ಕಿನ್ಯ ನೇತೃತ್ವದಲ್ಲಿ ರಚಿಸಲಾಯಿತು.
ಗೌರವಾಧ್ಯಕ್ಷರು: ಸಮೀರ್ ಅಹ್ಮದ್
ಅಧ್ಯಕ್ಷರು: ವೈ.ಅಶ್ರಫ್ ಶೈಖ್ ಉಚ್ಚಿಲ
ಉಪಾಧ್ಯಕ್ಷರು: ಮುಹಮ್ಮದ್ ದಾವೂದ್
ಪ್ರಧಾನ ಕಾರ್ಯದರ್ಶಿ: ವೈ.ಅಬ್ದುಲ್ ರಝಾಕ್ ಶೈಖ್ ಉಚ್ಚಿಲ
ಜೊತೆ ಕಾರ್ಯದರ್ಶಿ: ಸಾಲಿಯತ್ ಸುಲೈಮಾನ್
ಕೋಶಾಧಿಕಾರಿ: ಇಲ್ಯಾಸ್ ಅಹ್ಮದ್
ಲೆಕ್ಕ ಪರಿಶೋಧಕರು: ಇಬ್ರಾಹೀಂ ದಾವೂದ್
ವರದಿ: ಎಸ್.ಯೂಸುಪ್ ಆರ್ಲಪದವು