×
Ad

ಜುಬೈಲ್ : ಅಲ್ ಫಲಾಹ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಉದ್ಘಾಟನೆ

Update: 2016-03-09 19:28 IST

  ಜುಬೈಲ್ :ಉದ್ಯೋಗವನ್ನು ಅರಸಿ ಮರುಳುಗಾಡಿಗೆ ತೆರಳಿದ ಮಂಗಳೂರಿನ ಯುವ ವೃಂದಕ್ಕೆ ಕ್ರಿಕೆಟ್ ಎಂದರೆ ಇನ್ನೂ ಪಂಚಪ್ರಾಣ ತಮ್ಮ ತಮ್ಮ ತಂಡಗಳನ್ನು ಕಟ್ಟಿ, ರಜಾ ವಾರದ ರಜಾ ದಿನದಂದು ಕ್ರಿಕೆಟ್ ಮೈದಾನದಲ್ಲಿ ಸೇರಿ ಆಡುವುದು ಮಂಗಳೂರಿಗರಿಗೆ ಎಲ್ಲಿಲ್ಲದ ಸಂತೋಷ.

    ಸೌದಿ ಅರೇಬಿಯಾದ ಈಶಾನ್ಯ ಪ್ರಾಂತ್ಯದ ಜುಬೆಲ್ ಕೈಗಾರಿಕ ನಗರ ಅತ್ಯಂತ ಹೆಚ್ಚು ವೃತ್ತಿಪರರು ಮತ್ತು ವ್ಯಾಪಾರ ಸ್ಥಾಪನೆಗಳು ಇರುವ ಪ್ರದೇಶವಾಗಿದೆ. ಇಲ್ಲಿ ಉದ್ಯೋಗ ಮಾಡುತ್ತಿರುವ ಮಂಗಳೂರಿನ ಒಂದು ದೊಡ್ಡ ಸಮೂಹಕ್ಕೆ ವಾರದ ರಜಾದಿನ ನಡೆಯುವ ಕ್ರಿಕೆಟ್ ಪಂದ್ಯಾಟಗಳು ಮನಸ್ಸನ್ನು ಸಂತೋಷಗೊಳಿಸುವ ಹಬ್ಬವಾಗಿದೆ.

      ಇಲ್ಲಿನ ಹೆಚ್ಚಿನ ಕ್ರಿಕೆಟ್ ಟೂರ್ನಿಗಳು ಅಲ್ ಫಲಾಹ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತದೆ. ಈ ಬಾರಿ ಮಂಗಳೂರಿನ ಯುವ ಉದ್ಯಮಿ ನಝೀರ್ ಹುಸೇನ್ ರವರು ಮುನ್ನಡೆಸುತ್ತಿರುವ ಅಲ್ ಫಲಾಹ್ ಮಹೀಂದ್ರಾ ಕಂಪೆನಿಗೆ ತಮ್ಮದೇ ಗ್ರೌಂಡಿನಲ್ಲಿ ತಮ್ಮದೇ ಆದ ಕ್ರಿಕೆಟ್ ಪಂದ್ಯಾಟವನ್ನು ನಡೆಸುವ ಸಂಭ್ರಮ ಅಲ್ ಫಲಾಹ್ ಪ್ರೀಮಿಯರ್ ಲೀಗ್ ಎಂಬ ಹೆಸರಿನಲ್ಲಿ ನಡೆಯುವ ಈ ಕ್ರಿಕೆಟ್ ಪಂದ್ಯಾಟವು ಮಾರ್ಚ್ 3 ರಂದು ಜುಬೈನಲ್ಲಿ ವಿಜೃಂಭಣೆಯಿಂದ ಉದ್ಘಾಟನೆಗೊಂಡಿತು.

  ಉದ್ಯಮ ತಾಣವಾಗಿರುವ ಜುಬೈನಲ್ಲಿ ಕನಿಷ್ಟ ಪಕ್ಷ ಎರಡು ಡಜನ್‌ಗಳಷ್ಟು ಬೃಹತ್ ಉದ್ಯಮಗಳು ಮಂಗಳೂರಿನ ಯುವಕರಿಂದಲೇ ನಡೆಯುತ್ತಿದೆ. ಈ ಕಂಪೆನಿಗಳೆಲ್ಲ ತಮ್ಮದೇ ಆದ ಕ್ರಿಕೆಟ್ ಟೀಂಗಳನ್ನು ಹೊದಿವೆ.

          ಅಲ್ ಫಲಾಹ್ ಕಂಪೆನಿಯ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ನಝೀರ್ ಹುಸೈನ್‌ರವರು ಅಲ್ ಫಲಾಹ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿದರು. ಉದ್ಘಾಟನೆ ನಿರ್ವಹಿಸಿ ಭಾಷಣ ಮಾಡುತ್ತಾ ನಝೀರ್ ಹುಸೈನ್ ರವರು ಕ್ರಿಕೆಟ್ ಕ್ರಾಂತಿ ಸೌಹಾರ್ದದ ಒಂದು ಕ್ರೀಡೆಯಾಗಿದೆ. ಇಲ್ಲಿ ಆಯೋಜಿಸಿದ ಈ ಕ್ರೀಡಾ ಟೂರ್ನಿಯ ವಿವಿಧ ಸಮುದಾಯಗಳು ಒಟ್ಟಿಗೆ ವಾಸಿಸುತ್ತಿರುವ ಈ ಸೌದಿಅರೆಬಿಯಾದಲ್ಲಿ ಸೌಹಾರ್ದ,ಸಹಬಾಳ್ವೆಯನ್ನು ಇನ್ನಷ್ಟು ಬಲಗೊಳಿಸಲು ಸಹಕಾರಿಯಾಗಲಿ ಎಂದು ಆಶಿಸಿದರು.

   ಈ ಪಂದ್ಯಾವಳಿಯಲ್ಲಿ 20 ಕಂಪೆನಿಗಳ ತಂಡಗಳು 4 ಗ್ರೂಪುಗಳಾಗಿ ಭಾಗವಹಿಸುತ್ತಿದೆ. ಉದ್ಘಾಟನಾ ಪರೇಡ್‌ನಲ್ಲಿ ಭಾಗವಹಿಸಿದ ಈ ಎಲ್ಲಾ ತಂಡಗಳು ಪ್ರಮಾಣವನ್ನು ಸ್ವೀಕರಿಸುತ್ತಿರುವಾಗ ಪಟಾಕಿ ಮತ್ತು ಬಲೂನ್ ಪ್ರದರ್ಶನ ಕಾರ್ಯಕ್ರಮಕ್ಕೆ ಮೆರುಗನ್ನು ನೀಡಿತು.

 ಅಲ್ ಫಲಾಹ್ ಕಂಪೆನಿಯ ರಫೀಕ್ ಮತ್ತು ನಿಸಾರ್‌ರವರು ಅತಿಥಿಗಳಾಗಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದರು. ಸಂಧರ್ಬಕವಾಗಿ ಮಾತನಾಡಿದ ಈ ಇಬ್ಬರು ಅತಿಥಿಗಳು ಕ್ರಿಕೆಟಿನ ಭಾವೈಕ್ಯತೆಯನ್ನು ಪಸರಿಸಲು ಪ್ರಯತ್ನಿಸಬೇಕೆಂದು ಕ್ರಿಕೆಟಿಗರಿಗೆ ಕರೆನೀಡಿದರು. ಸಾಜಿದ್‌ರವರು ಕಾರ್ಯಕ್ರಮವನ್ನು ನಿರೂಪಿಸಿದರು.

Full View

Writer - Nazeer Al - Falah

contributor

Editor - Nazeer Al - Falah

contributor

Similar News