×
Ad

ರಿಯಾದ್: ಹಾಸನ ಹಳೇ ವಿದ್ಯಾರ್ಥಿ ಸಂಘದ ರಿಯಾದ್ ಚಾಪ್ಟರ್ ವತಿಯಿಂದ 'ಶುದ್ಧಿಯೆಡೆಗೆ' ಪುಸ್ತಕ ಬಿಡುಗಡೆ

Update: 2016-03-20 22:37 IST

  ರಿಯಾದ್: ತಾಯ್ನಾಡಿನ ವ್ಯಾಸಂಗ ಮುಗಿಸಿಕೊಂಡು ಉದ್ಯೋಗದ ನಿಮಿತ್ತ ಸೌದಿ ಗೆ ಬಂದು ರಿಯಾದ್ ನ ವಿವಿಧ ಪ್ರದೇಶಗಳಲ್ಲಿ ನೆಲೆಸಿರುವ ಹಾಸನದ ಯುವಕರ ಸಂಘಟನೆ 'ನಿಬ್ರಾಸುಲ್ ಇಸ್ಲಾಂ ಓಲ್ಡ್ ಸ್ಟುಡೆಂಟ್ಸ್ ಫೆಡರೇಶನ್' ವತಿಯಿಂದ ಹೊರ ತಂದ, ಇಸ್ಲಾಮೀ ಶಿಷ್ಠಾಚಾರ, ಆಚರಣೆಗಳು, ಜೀವನ ಸಂಸ್ಕೃತಿ ಇತ್ಯಾದಿಗಳನ್ನು ಪ್ರತಿಪಾದಿಸುವ 'ಶುದ್ಧಿಯೆಡೆಗೆ' ಎಂಬ ಪುಸ್ತ ಕದ ಬಿಡುಗಡೆ ಸಮಾರಂಭವು ಇತ್ತೀಚೆಗೆ ಇಲ್ಲಿನ 'ಮಾಸ್ ಹೋಟೆಲ್' ಸಭಾಂಗಣದಲ್ಲಿ ನಡೆಯಿತು.
  ಯುವ ಇಸ್ಲಾಮೀ ಲೇಖಕ, ಮುಸ್ತಫಾ ಹಿಮಮಿ,ನಈಮಿ ಮೋಂಟುಗೊಳಿ ಬರೆದ ಈ ಕೃತಿಯ ಪ್ರಕಾಶನ ಕಾರ್ಯಕ್ರ ಮವನ್ನು ಕೆಸಿಎಫ್ ರಿಯಾದ್ ಝೋನಲ್ ಶಿಕ್ಷ ಣ ವಿಭಾಗದ ಚೆಯರ್ಮ್ಯಾನ್ ಅಬ್ದುಲ್ಲ ಸಖಾಫಿ ನಿಂತಿಕಲ್ಲು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಯುವ ಜನತೆ ತಮ್ಮ  ದುಡಿಮೆಯ ಒತ್ತಡದ ನಡುವೆ ದೊರೆಯುವ ಆತ್ಯಲ್ಪ ಬಿಡುವು ವೇಳೆಗಳನ್ನು ಅಮೂಲ್ಯ ಗಳಿಗೆಗಳೆಂದು ಬಗೆದು ಅವುಗಳನ್ನು ಇಂಥ ರಚನಾತ್ಮಕ ಹಾಗೂ ಸೃಜನಶೀಲ ಚಟುವಟಿಕೆಗಳಿಗೆ  ಬಳಸಿಕೊಂಡರೆ ನಮ್ಮ ಸಮಾಜದಲ್ಲಿ ಕ್ರಾಂತಿ ಮೂಡಿಸಲು ಸಾಧ್ಯ ಎಂದು ಹೇಳಿದರು. ತಂತ್ರಜ್ಞಾನ ಬೆಳೆದಂತೆ ಮಾನವೀಯ ಮೌಲ್ಯಗಳು ಶಿಥಿಲವಾಗುತ್ತಿದ್ದು ಇಂಥ ಪರಿಸರದಲ್ಲಿ ನೈತಿಕತೆ ಮತ್ತು ದೇವ ಭಯವನ್ನು ಬಲಪಡಿಸಲು ಪ್ರೇರಣೆ ನೀಡುವ ಪುಸ್ತಕಗಳನ್ನು ಓದುವ ಹವ್ಯಾಸವನ್ನು ನಾವು ಬೆಳೆಸಿಕೊಳ್ಳಬೇಕಿದೆ ಎಂದು ಅವರು ಸಲಹೆ ನೀಡಿದರು.
  ಸಂಘಟನೆಯ ಸ್ಥಾನೀಯ ಅಧ್ಯಕ್ಷ ರಫೀಕ್. ಎಫ್ ಸಭೆಯ ಅಧ್ಯಕ್ಷತೆ ವಹಿಸಿದರು. ಹಾವೇರಿ ಜಿಲ್ಲೆಯ 'ಮುಹ್ಯುಸ್ಸುನ್ನ' ಸಮುದಾಯ ಶಿಕ್ಷಣ ಸಂಸ್ಥೆಯ ರೂವಾರಿಯೂ ಸದ್ರಿ ಕೃತಿಯ ಲೇಖಕರೂ ಆದ ಮೌಲಾನಾ ಮುಸ್ತಫಾ ನಈಮಿ ಸಂಸ್ಥೆಯ ಪ್ರಚಾರಾರ್ಥ ಸದ್ಯ ಸೌದಿ ಅರೇಬಿಯಾದಲ್ಲಿ ಪ್ರವಾಸದಲ್ಲಿದ್ದು, ಅವರನ್ನು ಈ ಸಂದರ್ಭದಲ್ಲಿ ಸಂಘಟನೆಯ ಪರವಾಗಿ ಶಾಲು ಹೊದಿಸಿ ಸನ್ಮಾನಿಸಲಾಯಿತು.
  'ಶುದ್ಧಿಯೆಡೆಗೆ' ಕೃತಿಯನ್ನು 'ಮಲ್ಜ ಅ್' ರಿಯಾದ್ ಸಮಿತಿ ಉಪಾಧ್ಯಕ್ಷ ಹಾಗೂ ಕೆಸಿಎಫ್ ಕಾರ್ಯಕರ್ತ ಅಬೂಬಕ್ಕರ್ ಸಾಲೆತ್ತೂರು ಉದ್ಯಮಿ ಉಮರ್ ಬನ್ನೂರು ರವರಿಗೆ ಪ್ರತಿ ನೀಡಿ ಬಿಡುಗಡೆಗೊಳಿಸಿದರು. 
ಈ ಸಂದರ್ಭ ವೇದಿಕೆಯಲ್ಲಿ ಹಿರಿಯ ಅನಿವಾಸಿ ಧುರೀಣ, ಕೆಸಿಎಫ್ ರಾಷ್ಟ್ರೀಯ ಸಮಿತಿ ಸದಸ್ಯ ಇಸ್ಮಾಈಲ್ ಶಾಫಿ ವಿಟ್ಲ,  ಡಿಕೆಎಸ್ಸಿ ಮುಖಂಡ ದಾವೂದ್ ಕಜೆಮಾರ್, ಉದ್ಯಮಿ ಹಾಗೂ ಕೆಸಿಎಫ್ ಕಾರ್ಯಕರ್ತ ಅಬ್ದುರಹ್ಮಾನ್ ಗಂಟಲ ಕಟ್ಟೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.
  ಸಂಘಟನೆಯ ನಿರ್ದೇಶಕ ರಹ್ಮತುಲ್ಲಾ ಮದನಿ ಆರಂಭದಲ್ಲಿ ಸ್ವಾಗತಿಸಿ ಕೊನೆಯಲ್ಲಿ ಧನ್ಯವಾದ ಅರ್ಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News