ದುಬೈ: ತುಂಬೆ ಆಸ್ಪತ್ರೆಯಿಂದ ‘ಟ್ಯಾಕ್ಸಿ ಡ್ರೈವರ್ಸ್ ವೆಲ್ನೆೆಸ್ ವೀಕ್
Update: 2016-03-21 20:58 IST
ದುಬೈ, ಮಾ.21: ಇಲ್ಲಿನ ತುಂಬೆ ಸಮೂಹ ಸಂಸ್ಥೆಗಳ ಆಸ್ಪತ್ರೆ ಮತ್ತು ಕ್ಲಿನಿಕ್‌ಗಳ ವತಿಯಿಂದ ಆರಂಭಿಸಲಾಗಿರುವ ‘ಟ್ಯಾಕ್ಸಿ ಡ್ರೈವರ್ಸ್ ವೆಲ್ನೆೆಸ್ ವೀಕ್’ ಕಾರ್ಯಕ್ರಮಕ್ಕೆ ಬಾಲಿವುಡ್ ನಟ ಸೋನು ಸೂದ್ ತುಂಬೆ ಆಸ್ಪತ್ರೆಯಲ್ಲಿ ಶನಿವಾರ ಚಾಲನೆ ನೀಡಿದರು.
ಈ ಸಂದರ್ಭ ಆಸ್ಪತ್ರೆ ಮುಖ್ಯ ನಿರ್ವಾಹಕ ಅಧಿಕಾರಿ ಡಾ.ಅಶುತೋಷ್ ಸೂದ್, ತುಂಬೆ ದಂತ ವೈದ್ಯಕೀಯ ಆಸ್ಪತ್ರೆಯ ಸಹಾಯಕ ಆಡಳಿತ ನಿರ್ದೇಶಕ ಡಾ.ಸಮೀರ್‌ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಮಾ.19ರಿಂದ 24ರವರೆಗೆ ಯುಎಇಯಲ್ಲಿರುವ ತುಂಬೆ ಸಮೂಹ ಸಂಸ್ಥೆಯ ಆಸ್ಪತ್ರೆಗಳಲ್ಲಿ ಟ್ಯಾಕ್ಸಿ ಡ್ರೈವರ್‌ಗಳಿಗೆ ಉಚಿತ ಆರೋಗ್ಯ ತಪಾಸಣಾ ಹಾಗೂ ರಕ್ತದೊತ್ತಡ ತಪಾಸಣೆ, ರಕ್ತದಲ್ಲಿ ಸಕ್ಕರೆಯ ಅಂಶ ತಪಾಸಣೆ ಹಾಗೂ ಬಿಎಂಐ ತಪಾಸಣೆ ಸೇರಿದಂತೆ ಹಲವಾರು ವೈದ್ಯಕೀಯ ಚಿಕಿತ್ಸೆಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.