×
Ad

ಶಬನಾ ಫೈಝಲ್ ಗೆ ‘ಕೈರಳಿ ಟಿವಿ ಎನ್ಆರ್‌ಐ ಉದ್ಯಮ ಪ್ರಶಸ್ತಿ’

Update: 2016-03-23 19:45 IST

ದುಬೈ, ಮಾ.23, ಜನಪ್ರಿಯ ಮಲಯಾಳಂ ಟಿವಿ ಮಾಧ್ಯಮ ‘ಕೈರಳಿ ಟಿವಿ’ ನೀಡುತ್ತಿರುವ ಮೊತ್ತಮೊದಲ ವ್ಯಾಪಾರ ಶ್ರೇಷ್ಠತೆಯ ‘ಎನ್‌ಆರ್ ಐ ಮಹಿಳಾ ಉದ್ಯಮ ಪ್ರಶಸ್ತಿ’ಯನ್ನು ಕೆಇಎಫ್ ಹೋಲ್ಡಿಂಗ್ಸ್‌ನ ಚೀಫ್ ಕಾರ್ಪೋರೇಟ್‌ ಆಫೀಸರ್(ಸಿಒಒ)ಹಾಗೂ ಉಪಾಧ್ಯಕ್ಷೆ ಶಬನಾ ಫೈಝಲ್ ರಿಗೆ ನೀಡಿ ಗೌರವಿಸಿದೆ.

ದುಬೈನ ಇಂಡಿಯನ್ ಕನ್ಸುಲೇಟ್ ಹಾಲ್ನಲ್ಲಿ ನಡೆದ ಕೈರಳಿ ಟಿವಿ ಉದ್ಯಮ ಪ್ರಶಸ್ತಿ ಸಮಾರಂಭದಲ್ಲಿ ಮಲಯಾಳಂ ಕಮ್ಯುನಿಕೇಶನ್‌ನ ಅಧ್ಯಕ್ಷ ಹಾಗೂ ಖ್ಯಾತ ನಟ ಮಮ್ಮುಟಿ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭ ಅಶ್ರಫ್ ಅಲಿ, ಖಲೀಜ್ ಟೈಮ್ಸ್ನ ಹಿರಿಯ ವ್ಯಾಪಾರ ಪ್ರತಿನಿಧಿ ಐಸಾಕ್ ಜಾನ್ ಹಾಗೂ ಬೆಹ್‌ಝಾದ್ ಕಾರ್ಪೊರೇಶನ್ ಅಧ್ಯಕ್ಷ ಹಾಗೂ ಸಿಇಒ ಸಿ.ಕೆ.ಮೆನನ್ ಉಪಸ್ಥಿತರಿದ್ದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶಬಾನಾ ಫೈಝಲ್ ಮಲಯಾಳಂ ಕಮ್ಯೂನಿಕೇಷನ್ ಲಿಮಿಟೆಡ್ ಹಾಗೂ ಕೈರಳಿ ಟಿವಿ ನೀಡುತ್ತಿರುವ ಈ ಪ್ರಶಸ್ತಿ ಸ್ವೀಕರಿಸಲು ನನಗೆ ಅತೀವ ಸಂತೋಷವಾಗುತ್ತದೆ. ಸ್ಟೀವ್ ಜಾಬ್ಸ್ ಒಮ್ಮೆ ಹೇಳಿದಂತೆ ಯಶಸ್ವಿ ಉದ್ಯಮಿಗಳನ್ನು ಯಶಸ್ವಿಯಲ್ಲದವರಿಂದ ಬೇರ್ಪಡಿಸುವಲ್ಲಿ ಅರ್ಧದಷ್ಟು ಪಾಲು ಸತತ ಪ್ರಯತ್ನದ್ದಾಗಿರುತ್ತದೆ. ಇದು ಕಳೆದ ಕೆಲವು ವರ್ಷಗಳಲ್ಲಿ ನಾನು ಹಾಗೂ ನನ್ನ ಕೆಲಸವನ್ನು ವ್ಯಾಖ್ಯಾನಿಸಿದ ಒಂದು ಗುಣವಾಗಿದೆ. ಕಳೆದ 20 ವರ್ಷಗಳ ಉದ್ಯಮಪಯಣದಲ್ಲಿ ಮಾಡಿರುವ ಉತ್ತಮ ಕೆಲಸಗಳ ಬಗ್ಗೆ ತನಗೆ ಹೆಮ್ಮೆಯಿದೆ ಎಂದರು.

ಕೆಇಎಫ್ ಹೋಲ್ಡಿಂಗ್ಸ್ ಒಂದು ಯುಇಎ ಆಧಾರಿತ ಬಹುರಾಷ್ಟ್ರೀಯ ವೈವಿಧ್ಯತೆಯ ಸಮೂಹವಾಗಿದ್ದು, ಇದು ನಾವೀನ್ಯತೆಯ ಆಫ್‌ಸೈಟ್ ನಿರ್ಮಾಣ ತಂತ್ರಜ್ಞಾನದಲ್ಲಿ ಪರಿಣಿತಿ ಹೊಂದಿದೆ. ಮಂಗಳೂರು ನಗರದ ಶಬಾನಾರವರು ಕೆಇಎಫ್ ಹೋಲ್ಡಿಂಗ್ಸ್ ಹಾಗೂ ಫೈಝಲ್ ಆ್ಯಂಡ್ ಶಬಾನಾ ಫೌಂಡೇಶನ್ನ ಅಧ್ಯಕ್ಷ ಫೈಝಲ್ ಇ. ಕೊಟ್ಟಿಕೋಲನ್‌ರೊಂದಿಗೆ ವಿವಾಹವಾದ ಬಳಿಕ 1995ರಲ್ಲಿ ಕಲ್ಲಿಕೋಟೆಯಲ್ಲಿ ಸೋಫಿಯಾಸ್ ವರ್ಲ್ಡ್-ಲಕ್ಷುರಿ ಹಾಗೂ ವಿಶೇಷ ವಸ್ತುಗಳ ಸ್ಟುಡಿಯೋವನ್ನು ಸ್ಥಾಪಿಸುವ ಮೂಲಕ ಉದ್ಯಮವನ್ನು ಪ್ರಾರಂಭಿಸಿದರು.

ಶಬಾನಾ ಅವರು ಕೆಇಎಫ್ ಹೋಲ್ಡಿಂಗ್ಸ್‌ನಲ್ಲಿ ಎಚ್‌ಆರ್ ಹಾಗೂ ಆಡಳಿತ, ಸಾಂಸ್ಥಿಕ ಸಂವಹನ, ಐಟಿ ಹಾಗೂ ಕಾನೂನು ಕಾರ್ಯಾಚರಣೆಗಳು ಸೇರಿದಂತೆ ಕೆಇಎಫ್ ಹೋಲ್ಡಿಂಗ್ಸ್‌ನ ಕಾರ್ಪೋರೇಟ್ ಕಾರ್ಯಾಚರಣೆಗಳನ್ನು ನೋಡಿಕೊಳ್ಳುತ್ತಾರೆ. ಸಂಸ್ಥೆಯ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕಾ (ಸಿಎಸ್‌ಆರ್)ಅಂಗವಾದ -ದ ಶಬಾನಾ ಫೈಝಲ್ ಫೌಂಡೇಷನ್‌ನ ಸಹಸಂಸ್ಥಾಪಕರು ಹಾಗೂ ಉಪಾಧ್ಯಕ್ಷ ಸ್ಥಾನವನ್ನೂ ಅಲಂಕರಿಸಿದ್ದಾರೆ.

ಶಬಾನಾರವರು ಹಿಂದುಳಿದವರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಉತ್ಕಟವಾದ ಆಸಕ್ತಿಯನ್ನು ಹೊಂದಿದು,್ದ ಇದು ಫೈಝಲ್ ಆ್ಯಂಡ್ ಶಬಾನಾ ಫೌಂಡೇಷನ್ನ ಸ್ಥಾಪನೆಗೆ ಕಾರಣವಾಯಿತು.ಈ ಫೌಂಡೇಷನ್ ಭಾರತ ಹಾಗೂ ಯುಎಇಗಳಲ್ಲಿ ಶಿಕ್ಷಣ,ಆರೋಗ್ಯ ಕಾಳಜಿ, ಸಮರ್ಥನೀಯ ಜೀವನ, ಮಾನವೀಯ ನೆರವು, ಯುವ ಅಭಿವೃದ್ಧಿ ಹಾಗೂ ಗೃಅ ನಿರ್ಮಾಣಗಳನ್ನು ಸುಧಾರಿಸಲು ಅಭಿಯಾನಗಳನ್ನು ನಡೆಸುತ್ತದೆ.

ನಡಕ್ಕಾವು ಕೇರಳದಲ್ಲಿನ ಜಿವಿಎಚ್‌ಎಸ್‌ಎಸ್ನ ಮರುಚೈತನ್ಯ ಅವರ ಮಹತ್ವದ ಯೋಜನೆಯಾಗಿತ್ತು. ಇದು ತಮ್ಮಲ್ಲಿ ಹಾಗೂ ತಮ್ಮ ಕನಸುಗಳಲ್ಲಿ ಭರವಸೆ ಹೊಂದಿದ 2400ಕ್ಕೂ ಹೆಚ್ಚು ಯುವತಿಯರಿಗೆ ಬೆಂಬಲ ನೀಡಿ ಕೇರಳದ 65 ಶಾಲೆಗಳಲ್ಲಿ 69,000ಕ್ಕೂ ಹೆಚ್ಚು ಜನರ ಜೀವನದ ಮೇಲೆ ಪ್ರಭಾವ ಬೀರಿದೆ.

ಕೆಇಎಫ್ ಹೋಲ್ಡಿಂಗ್ಸ್ 2015ರಲ್ಲಿ ಕೇವಲ ಒಂಬತ್ತು ತಿಂಗಳ ಅವಧಿಯಲ್ಲಿ ಮಂಗಳೂರಿನ ಯೆನೆಪೊಯ ವಿಶ್ವವಿದ್ಯಾನಿಲಯದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಒಂದು ವಸತಿ ಸಮುಚ್ಚಯವನ್ನು ನಿರ್ಮಿಸಿತು. ಇದು ಸಂಪೂರ್ಣವಾಗಿ ಆಫ್‌ಸೈಟ್‌ನಲ್ಲಿ ನಿರ್ಮಾಣಗೊಂಡ ಭಾರತದ ಮೊತ್ತಮೊದಲ ಕಟ್ಟಡ ಸಮುಚ್ಚಯವಾಗಿದೆ. ಈ ಯೋಜನೆಯಲ್ಲಿ ಶಬಾನಾ ಮಹತ್ತರ ಪಾತ್ರ ವಹಿಸಿದ್ದರು.

ಶಬಾನಾ ಫೈಝಲ್ ಮಂಗಳೂರಿನ ಪ್ರಮುಖ ವ್ಯಾಪಾರೋದ್ಯಮಿ ಹಾಗೂ ಬಿ.ಎ. ಸಮೂಹದ ಅಧ್ಯಕ್ಷ ಬಿ.ಅಹ್ಮದ್ ಹಾಜಿ ಮುಹಿಯುದ್ದೀನ್ ಅವರ ಪುತ್ರಿಯಾಗಿದ್ದಾರೆ. ಅವರು ಮಂಗಳೂರಿನ ಸೈಂಟ್ ಆ್ಯಗ್ನೆಸ್ ಕಾಲೇಜಿನಿಂದ ಮನಃಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ.

ಕೆಇಎಫ್ ಸಂಸ್ಥೆಯ ಬಗ್ಗೆ:

2007ರಲ್ಲಿ ಸ್ಥಾಪಿತ ಕೆಇಎಫ್ ಹೋಲ್ಡಿಂಗ್ಸ್ ಸಿಂಗಾಪುರದಲ್ಲಿ ನೋಂದಾಯಿತ ನವಯುಗದ ಸಾಮಾಜಿಕ ಉದ್ಯಮವಾಗಿದೆ. ಫೈಝಲ್ ಇ. ಕೊಟ್ಟಿಕೊಲ್ಲನ್‌ರ ಮೂಲಕ ಸಂಸ್ಥಾಪಿಸಲ್ಪಟ್ಟ ಈ ಕಂಪೆನಿ ಭಾರತ, ಮಧ್ಯಪ್ರಾಚ್ಯ ಹಾಗೂ ಸಿಂಗಾಪುರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.
ಕಂಪೆನಿಯು ಕೆಇಎಫ್ ಇನ್ಫ್ರಾ, ಕೆಇಎಫ್ ಹೆಲ್ತ್, ಕೆಇಎಫ್ ಎಜ್ಯುಕೇಷನ್, ಕೆಇಎಫ್ ಮೆಟಲ್ಸ್ ಮತ್ತು ಕೆಇಎಫ್ ಇನ್‌ವೆಸ್ಟ್‌ಮೆಂಟ್ಸ್ ಎಂಬ ಐದು ವಿಭಾಗಗಳಲ್ಲಿ ಕಾರ್ಯಾಚರಿಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News