×
Ad

ಈ ಮಹಿಳೆಯನ್ನು ಆಸ್ಪತ್ರೆಯಿಂದ ಸಾಗಿಸಲು ತುರ್ತು ರಕ್ಷಣಾ ತಂಡ ಬಂದಿದ್ದೇಕೆ ?

Update: 2016-03-24 17:24 IST

ಜಿದ್ದಾ , ಮಾ. 24 : ಇಲ್ಲಿನ ತಾಯಿಫ್ ನಲ್ಲಿರುವ  ಕಿಂಗ್ ಫೈಸಲ್ ಆಸ್ಪತ್ರೆ ಅತಿ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯೊಬ್ಬರನ್ನು ಸ್ಥಳಾಂತರಿಸಲು ಆರೋಗ್ಯ ಹಾಗು ರಕ್ಷಣಾ ವಿಭಾಗದ ತುರ್ತು ತಂಡಗಳನ್ನು ಕರೆಸಿದ ಘಟನೆ ವರದಿಯಾಗಿದೆ. ಮಹಿಳೆಯ ತೂಕ 200 ಕೆಜಿ. 

ಈ ಮಹಿಳೆ ಆಸ್ಪತ್ರೆಯಲ್ಲಿ ಕೆಲವು ಸಮಯದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆಯ ಆಕೆಯನ್ನು ಮನೆಗೆ ಕಲಿಸುವಾಗ ಸಮಸ್ಯೆಯ ಅರಿವು ಆಗಿದೆ. ಆಕೆಯ ಗಾತ್ರ ಹಾಗು ತೂಕದಿಂದಾಗಿ ಆಕೆಯನ್ನು ಎತ್ತಿಕೊಂಡು ಆಸ್ಪತ್ರೆಯಿಂದ ಹೊರಗೆ ಹೋಗುವುದು ಹಾಗು ಸಾಮಾನ್ಯ ವಾಹನದಲ್ಲಿ ಆಕೆಯನ್ನು ಕರೆದುಕೊಂಡು ಹೋಗುವುದು ಸಾಧ್ಯವಿರಲಿಲ್ಲ. 

ಬಳಿಕ ಆಸ್ಪತ್ರೆಯ ವಿಶೇಷ ತಂಡ , ತುರ್ತು ವಿಭಾಗದ ತಂಡ ಹಾಗು ರಕ್ಷಣಾ ತಂಡಗಳು ಸೇರಿ ಮಹಿಳೆಯನ್ನು ವಿಶೇಷ ಸ್ಟ್ರೆಚರ್ ನಲ್ಲಿ  ಆಕೆಯ ಮನೆಗೆ ಸ್ಥಳಾಂತರಿಸಿದವು. ಆಕೆಯ ಮನೆ ಕಟ್ಟಡವೊಂದರ ಮೊದಲ ಮಹಡಿಯಲ್ಲಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News