ಶಾರ್ಜಾ : ಮಹಿಳೆಯ ಅವಹೇಳನ ಮಾಡಿದ್ದಕ್ಕೆ ಜೈಲು, 2.5 ಲಕ್ಷ ದಿರ್ಹಮ್ ದಂಡ !

Update: 2016-03-25 05:57 GMT

ಶಾರ್ಜಾ,ಮಾ.25 : ಮಹಿಳೆಯೊಬ್ಬಳನ್ನು ಅವಹೇಳನಗೈದ ಅರಬ್ ವ್ಯಕ್ತಿಯೊಬ್ಬನಿಗೆ ಶಾರ್ಜಾದ ನ್ಯಾಯಾಲಯವೊಂದುಮೂರು ತಿಂಗಳ ಜೈಲು ಶಿಕ್ಷೆಯಲ್ಲದೆ ಆತನಿಗೆ2.5 ಲಕ್ಷ ದಿರ್ಹಮ್ ದಂಡ ವಿಧಿಸಿದೆ. ಇದರ ಹೊರತಾಗಿ ನ್ಯಾಯಾಲಯ ಆತನಿಗೆ ಗಡೀಪಾರು ಶಿಕ್ಷೆ ಕೂಡ ವಿಧಿಸಿದೆ.

ಮಹಿಳೆ ಮಾಡಿದ ಆಪಾದನೆಯಂತೆ ಆರೋಪಿ ಆಕೆಗೆ ಜುಲೈ 18,2015ರಂದು ಅವಹೇಳನಕಾರಿ ವಾಟ್ಸಪ್ ಸಂದೇಶ ಕಳುಹಿಸಿದ್ದನು. ಜುಲೈ28ರಂದು ದೂರು ನೀಡಿದ ಮಹಿಳೆ ಆರೋಪಿ ತನಗೆ 8000 ದಿರಮ್ ಸಾಲ ನೀಡಿದ್ದು ಆತ ಅದನ್ನು ಹಿಂದಕ್ಕೆ ಕೇಳಿದಾಗ ತನ್ನ ಬಳಿ ಹಣವಿಲ್ಲವೆಂದು ಹೇಳಿದ್ದಕ್ಕೆ ಪ್ರತಿಯಾಗಿ ಆತ 10 ಅವಹೇಳನಕಾರಿ ವಾಟ್ಸಪ್ ಸಂದೇಶ ಕಳುಹಿಸಿದ್ದಾನೆಂದುಆಪಾದಿಸಿದ್ದಾಳೆ.

ಈ ವರ್ಷದ ಜನವರಿಯಲ್ಲಿ ಆರೋಪಿ ತನಗೆ ತನ್ನ ಸಹಪಾಠಿಯಾಗಿದ್ದಮಹಿಳೆಯೊಂದಿಗೆ ವಿವಾದವಿರುವುದನ್ನು ಒಪ್ಪಿಕೊಂಡಿದ್ದನಲ್ಲದೆ ಆಕೆ ತನಗೆ ವಾಟ್ಸೆಪ್‌ನಲ್ಲಿ ಅಶ್ಲೀಲ ವೀಡಿಯೋ ಕಳುಹಿಸಿದ್ದಳೆಂದೂ ಹೇಳಿಕೊಂಡಿದ್ದನು. ಇದರ ಬಗ್ಗೆ ಅರಿತಿದ್ದ ತನ್ನ ಸಹೋದರ ಆಕೆಯ ವಿರುದ್ಧ ಕಾನೂನು ಹೋರಾಟ ನಡೆಸುವಂತೆ ಹೇಳಿದ್ದರಿಂದ ತಾನೂ ದೂರು ದಾಖಲಿಸಿದ್ದಾಗಿ ಆತ ಹೇಳಿದ್ದಾನೆ.

ಆರೋಪಿಯ ವಕೀಲರು ಕೋರ್ಟ್ ಆದೇಶವನ್ನು ಪ್ರಶ್ನಿಸುವುದಾಗಿ ಹೇಳಿದರಲ್ಲದೆ ತನ್ನ ಕಕ್ಷಿದಾರನಿಗೆ ಕೋರ್ಟ್ ವಿಚಾರಣೆಯ ಬಗ್ಗೆತಿಳಿದಿರಲಿಲ್ಲವೆಂದೂ ಹೇಳಿದ್ದಾರೆ. ತನ್ನ ಕಕ್ಷಿದಾರ ಹಾಗೂ ಮಹಿಳೆಯ ನಡುವಿನ ವಾಟ್ಸೆಪ್‌ಸಂದೇಶಗಳನ್ನು ಪರಿಶೀಲಿಸುವಂತೆಯೂ ಅವರು ಕೇಳಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News