×
Ad

ಬಖಾಲ ಮುಚ್ಚುವುದು ಸೌದೀಕರಣಕ್ಕೆ ಪೂರಕ: ತಜ್ಞರ ಬೆಂಬಲ

Update: 2016-03-27 13:38 IST

ಜಿದ್ದಾ, ಮಾ.27: ಸಣ್ಣ ಕಿರಾಣಿ ಅಂಗಡಿ (ಬಖಾಲ)ಗಳನ್ನು ಮುಚ್ಚುವ ಶೌರಾ ಕೌನ್ಸಿಲ್‌ನ ನಿರ್ಧಾರವನ್ನು ತಜ್ಞರು ಸ್ವಾಗತಿಸಿದ್ದು, ಇದು ಸೌದೀಕರಣಕ್ಕೆ ಪೂರಕವಾಗಲಿದೆ ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ಇದು ಪಾವತಿಯನ್ನು ಕಡಿಮೆ ಮಾಡುವ ಮೂಲಕ ಸಾಮ್ರಾಜ್ಯದ ಆರ್ಥಿಕತೆಗೆ ನೆರವಾಗಲಿದೆ ಎನ್ನುವುದು ತಜ್ಞರ ಅಭಿಮತ. ಆದರೆ ಪುಟ್ಟ ಕಿರಾಣಿ ಅಂಗಡಿಗಳ ಮಾಲಕರು ಈ ನಡೆಯನ್ನು ಟೀಕಿಸಿದ್ದು, ಇದು ದೊಡ್ಡ ವ್ಯಾಪಾರಿ ಸಂಸ್ಥೆಗಳಿಗೆ ಅವಕಾಶ ಮಾಡಿಕೊಡುವ ಹುನ್ನಾರ ಎಂದು ದೂರಿದ್ದಾರೆ.
ಈ ನಡೆ ದೊಡ್ಡ ಕಿರಾಣಿ ಅಂಗಡಿಗಳಿಗೆ ಮತ್ತು ಸೂಪರ್ ಮಾರ್ಕೆಟ್‌ಗಳಿಗೆ ಸೌದಿ ಅರಬಿಯಾದವರನ್ನು ನೇಮಕ ಮಾಡಿಕೊಳ್ಳಲು ನೆರವಾಗಲಿದೆ. ಇದು ರಾಷ್ಟ್ರೀಕರಣದ ಪ್ರಯತ್ನಗಳಿಗೆ ಪೂರಕವಾಗಲಿದೆ ಎಂದು ಜಿದ್ದಾ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್‌ನ ಆಹಾರ ಉತ್ಪನ್ನ ಸಮಿತಿಯ ಮುಖ್ಯಸ್ಥ ನಯೀಫ್ ಅಲ್ ಶರೀಫ್‌ಹೇಳಿದ್ದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಇದು ತಸತ್ತರ್ (ಕಳ್ಳವ್ಯಾಪಾರ) ನಿರ್ಮೂಲನೆಗೆ ನೆರವಾಗಲಿದೆ. ದೇಶದಲ್ಲಿ ಸಣ್ಣ ಕಿರಾಣಿ ಅಂಗಡಿಗಳ ಸಂಖ್ಯೆ ಶೇಕಡ 90ರಷ್ಟು ಹೆಚ್ಚಿದ್ದು, ಈ ಪೈಕಿ ಶೇ.75ರಷ್ಟು ಅಂಗಡಿಗಳಲ್ಲಿ ಭಾರತ ಮೂಲದ ಉದ್ಯೋಗಿಗಳಿದ್ದಾರೆ
ಇದು ದೊಡ್ಡ ವ್ಯಾಪಾರಿ ಸಂಸ್ಥೆಗಳು ಮತ್ತು ಸೂಪರ್ ಮಾರ್ಕೆಟ್‌ಗಳಿಗೆ ಅನುವು ಮಾಡಿಕೊಡುವ ಹುನ್ನಾರ ಎಂಬ ಸಣ್ಣ ವ್ಯಾಪಾರಿಗಳ ವಾದವನ್ನು ತಳ್ಳಿಹಾಕಿದ ಅವರು, ಅಗತ್ಯವಿರುವಷ್ಟು ಜಾಗ, ಉತ್ಪನ್ನ ಹಾಗೂ ಸುರಕ್ಷತಾ ಅಗತ್ಯತೆಗಳನ್ನು ಪೂರೈಸುವ ಯಾರು ಬೇಕಾದರೂ ಮಳಿಗೆ ತೆರೆಯಲು ಅವಕಾಶವಿದೆ ಎಂದು ಸ್ಪಷ್ಟಪಡಿಸಿದರು.
ಜೆಸಿಸಿಐನ ವಾಣಿಜ್ಯ ಕೇಂದ್ರಗಳ ಸಮಿತಿ ಮುಖ್ಯಸ್ಥ ಮುಹಮ್ಮದ್ ಅಲಾವಿ ಪ್ರಕಾರ, ಆಹಾರ ಉತ್ಪನ್ನ ವಲಯ ದೇಶದಲ್ಲಿ 170 ಶತಕೋಟಿ ಸೌದಿ ರಿಯಾಲ್ ವಹಿವಾಟು. ಹಾಗೂ ಇದು ಗಲ್ಫ್ ದೇಶಗಳ ದೊಡ್ಡ ಪ್ರಮಾಣದ ವಹಿವಾಟಿಗೆ ಕೊಡುಗೆ ನೀಡುತ್ತದೆ. ಗಲ್ಫ್ ದೇಶಗಳಲ್ಲಿ ಒಟ್ಟು 270 ಶತಕೋಟಿ ಸೌದಿ ರಿಯಾಲ್ ವಹಿವಾಟು ಈ ಕ್ಷೇತ್ರದಲ್ಲಿ ನಡೆಯುತ್ತಿದೆ
ಈ ವಲಯದಲ್ಲಿ ಕೆಲಸ ಮಾಡುವ ಬೇರೆ ದೇಶದ ಅನಿವಾಸಿಗಳ ಮೂಲಕ ದೇಶದಿಂದ ಹಣ ಹೊರಕ್ಕೆ ಹರಿಯುವುದನ್ನು ಇದು ತಡೆಯುತ್ತದೆ. ಈ ಮೂಲಕ ಸೌದಿಯ ಆರ್ಥಿಕತೆಗೆ ಉತ್ತೇಜನ ನೀಡಲು ಪೂರಕವಾಗಲಿದೆ ಎಂದು ಅರ್ಥಶಾಸ್ತ್ರಜ್ಞ ಫಾರೂಕ್ ಅಲ್ ಖತೀಬ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News