ಡಿ.ಕೆ ಎಸ್.ಸಿ ಅಜ್ಮಾನ್ ಘಟಕದ ಪದಾಧಿಕಾರಿಗಳ ಆಯ್ಕೆ, ಮಾಸಿಕ ದಿಕ್ರ್ ಮಜ್ಲಿಸ್ ಉದ್ಘಾಟನೆ
ದುಬೈ, ಮಾ.29: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಯು.ಎ.ಇ ಇದರ ಘಟಕವಾದ ಡಿ.ಕೆ.ಎಸ್.ಸಿ ಅಜ್ಮಾನ್ ಮಹಾ ಸಭೆಯು ಹಸನಬ್ಬ ಕೊಳ್ನಾಡ್ ರ ನಿವಾಸದಲ್ಲಿ ನಡೆಯಿತು.
ಸಭೆಯು ಅಬೂಬಕರ್ ಮದನಿ ಕೆಮ್ಮಾರ ಅವರ ದುವಾದೊಂದಿಗೆ ಘಟಕದ ಅದ್ಯಕ್ಷ ಹಸನಬ್ಬ ಕೊಳ್ನಾಡ್ ಅದ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಅತಿಥಿಗಳಾಗಿ ಯು.ಎ.ಇ.ರಾಷ್ಟೀಯ ಸಮಿತಿಯ ನೇತಾರರಾದ ಇಕ್ಬಾಲ್ ಹೆಜಮಾಡಿ, ಹುಸೈನ್ ಹಾಜಿ ಕಿನ್ಯ , ಇ.ಕೆ.ಇಬ್ರಾಹಿಂ ಕಿನ್ಯ, ಯೂಸುಫ್ ಅರ್ಲಪದವು, ಇಬ್ರಾಹಿಂ ಹಾಜಿ ಕಿನ್ಯ , ಅಬ್ದುಲ್ ರಝಾಕ್ ಮುಟ್ಟಿಕಲ್, ಹಾಜಿ .ಅಬ್ದುಲ್ ರಹಿಮಾನ್ ಸಂಟ್ಯಾರ್, ಅಬ್ಬಾಸ್ ಪಾಣಾಜೆ ಉಪಸ್ಥಿತರಿದ್ದರು. ಹುಸೈನ್ ಹಾಜಿ ಕಿನ್ಯ ಚುನಾವಣಾಧಿಕಾರಿಯಾಗಿ 2016 - 17 ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರು : ಅಬೂಬಕ್ಕರ್ ಮದನಿ ಕೆಮ್ಮಾರ, ಅಧ್ಯಕ್ಷರು : ಹಸನಬ್ಬ ಕೊಳ್ನಾಡ್, ಉಪಾಧ್ಯಕ್ಷರು : ಅಬ್ದುಲ್ ಖಾದರ್ ಸಅದಿ, ಆದಂ ಈಶ್ವರಮಂಗಿಲ, ಅಬ್ದುಲ್ಲ ಹಾಜಿ ಬೀಜಾಡಿ, ಪ್ರಧಾನ ಕಾರ್ಯದರ್ಶಿ : ಫಾರುಕ್ ಅನೇಕಲ್, ಜೊತೆ ಕಾರ್ಯದರ್ಶಿ : ನಝೀರ್ ಕಣ್ಣಂಗಾರ್, ಮುಸ್ತಪ ಕೊಳ್ನಾಡ್, ಅಬ್ದುಲ್ ಖಾದರ್.ಕೆ, ಕೋಶಾದಿಕಾರಿ : ಹಿದಾಯತ್ ತುಂಬೆ, ಲೆಕ್ಕ ಪರಿಶೋದಕರು : ಸಮೀರ್ ಕೊಳ್ನಾಡ್, ಸಂಚಾಲಕರು : ಇಬ್ರಾಹಿಂ ಕೇದಿಗೆ, ಸಿದ್ದಿಕ್ ಅಮಾನಿ, ಸಂಶುದ್ದೀನ್, ಶಬೀರ್ ಕೊಳ್ನಾಡ್ ಹಾಗೂ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಅದಂ ಈಶ್ವರಮಂಗಿಲ ಸ್ವಾಗತಿಸಿ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು.
ಮುಜೀಬ್ ಸಅದಿ ರವರ ನೇತ್ರತ್ವದಲ್ಲಿ ಅಬೂಬಕ್ಕರ್ ಮದನಿ ಕೆಮ್ಮಾರ, ಅಬ್ದುಲ್ ಖಾದರ್ ಸಅದಿ,ಸಿದ್ದಿಕ್ ಅಮಾನಿ ಉಪಸ್ಥತಿಯಲ್ಲಿ ಮಾಸಿಕ ಅಸ್ಮಾಹುಲ್ ಹುಸ್ನಾ ದಿಕ್ರ್ ಮಜ್ಲಿಸ್ ಅನ್ನು ಪ್ರಾರಂಭಿಸಲಾಯಿತು. ಪಾರೂಕ್ ಅನೇಕಲ್ ವಂದಿಸಿದರು.