ರಶೀದ್ ವಿಟ್ಲ ಅವರಿಗೆ ದುಬೈಯಲ್ಲಿ ಸನ್ಮಾನ
Update: 2016-03-30 17:09 IST
ದುಬೈ; ಇಲ್ಲಿನ ದೇರಾ ದಲ್ಲಿರುವ ರಾಫಿ ಹೋಟೆಲ್ ನ ಹಾಲ್ ನಲ್ಲಿ ಅಲ್ ಫಲಾಹ್ ಸಂಸ್ಥೆ ಮಂಗಳವಾರ ಆಯೋಜಿಸಿದ "ಡಿನ್ನರ್ ವಿದ್ ರಾಫಿ" ಕಾರ್ಯಕ್ರಮದಲ್ಲಿ ಸಾಮಾಜಿಕ ಸಂಘಟಕ, ಎಂ.ಫ್ರೆಂಡ್ಸ್ ಟ್ರಸ್ಟ್ ನ ಕಾರ್ಯದರ್ಶಿ ರಶೀದ್ ವಿಟ್ಲ ಅವರನ್ನು ಸನ್ಮಾನಿಸಲಾಯಿತು.
ಭಾರತ ತಂಡದ ಫುಟ್ಬಾಲ್ ಆಟಗಾರ ರಾಫಿ ತೃಕ್ಕರಿಪುರ ಅವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಅಲ್ ಫಲಾಹ್ ಗ್ರೂಪ್ ಆಫ್ ಹೋಟೆಲ್ಸ್ ಇದರ ಆಡಳಿತ ನಿರ್ದೇಶಕ ಯೂಸುಫ್ ಎಸ್ ಅವರು ರಶೀದ್ ವಿಟ್ಲ ಅವರನ್ನು ಸನ್ಮಾನಿಸಿದರು. ದುಬೈ ಉದ್ಯಮಿ ಯಹ್ಯಾ ವೆಲ್ ಫಿಟ್, ಮಹಮ್ಮದ್ ಕುಞಿ, ದುಬೈ ಪ್ರೆಸ್ ಕ್ಲಬ್ ನ ಅಬ್ಬಾಸ್, ಮಲಬಾರ್ ಕಲಾ ಸಾಂಸ್ಕೃತಿಕ ವೇದಿಕೆಯ ಕಾರ್ಯದರ್ಶಿ ಅಶ್ರಫ್ ಕಾರ್ಲೆ, ಬೆಂಗಳೂರು ಉದ್ಯಮಿ ರಶೀದ್ ಹಾಜಿ ಬೆಳ್ಳಾರೆ, ಕಾಸರಗೋಡು ಜಿ.ಪಂ. ಸದಸ್ಯ ಹರ್ಷಾದ್ ವರ್ಕಾಡಿ, ಕೇರಳದ ಖ್ಯಾತ ಸಂಗೀತಗಾರ ಫೈಸಲ್ ಮೊದಲಾದವರು ಉಪಸ್ಥಿತರಿದ್ದರು.