×
Ad

ಸೌದಿ: ಚಾಲಕರ ರಿಕ್ರ್ಯೂಟಿಂಗ್ ಸ್ಥಗಿತಕ್ಕೆ ತೀರ್ಮಾನ!

Update: 2016-03-31 15:20 IST

 ಜಿದ್ದಾ, ಮಾರ್ಚ್.31: ಸಾರಿಗೆ ಕ್ಷೇತ್ರದಲ್ಲಿ ಸ್ವದೇಶೀಕರಣಕ್ಕಾಗಿಕ್ರಮ ಆರಂಭಿಸಿರುವ ಹಿನ್ನೆಲೆಯಲಿ ಸೌದಿ ಕಾರ್ಮಿಕ ಸಚಿವಾಲಯ ಮತ್ತು ಸಾರಿಗೆ ಸಚಿವಾಲಯ ಚಾಲಕರ ರಿಕ್ರೂಟಿಂಗ್‌ನ್ನು ಸ್ಥಗಿತ ಗೊಳಿಸುವ ನಿಟ್ಟಿನಲ್ಲಿ ಪರಸ್ಪರ ಸಹಮತಕ್ಕೆ ಬಂದಿವೆ ಎಂದು ವರದಿಗಳು ತಿಳಿಸಿವೆ. ಸಾರಿಗೆ ಉದ್ಯೋಗದಲ್ಲಿ ಸ್ವದೇಶಿಕರಣ ಏರ್ಪಡಿಸುವ ಪೂರ್ವಭಾವಿಯಾಗಿ ಈ ಕ್ಷೇತ್ರದ ಉದ್ಯೋಗಗಳನ್ನು ವಿವಿಧ ಶ್ರೇಣಿಗಳನ್ನಾಗಿ ಮಾಡಲಾಗುವುದು. ಆಂತರಿಕ ಸಾರಿಗೆ, ಅಂತಾರಾಷ್ಟ್ರೀಯ ಸಾರಿಗೆ, ಆಂತರಿಕೆ ಸರಕು ಸಾಗಾಟ, ಅಂತಾರಾಷ್ಟ್ರೀಯ ಸರಕು ಸಾಗಾಟ ಮುಂತಾದ ವಿವಿಧ ವಿಭಾಗಳಾಗಿ ವಿಂಗಡಿಸಲಾಗುವುದೆಂದು ವರದಿಗಳು ತಿಳಿಸಿವೆ.

ಸಾರ್ವಜನಿಕ ಟ್ಯಾಕ್ಸಿ ಚಾಲಕ ವಿಭಾಗಕ್ಕೆ ಕಾರ್ಮಿಕ ಸಚಿವಾಲಯದ ವೀಸಾ ನಿಯಂತ್ರಣವಿದ್ದರೂ ಇನ್ನು ಮುಂದಕ್ಕೆ ಆ ವಿಭಾಗಕ್ಕೆ ವೀಸಾ ನೀಡಲಾಗುವುದಿಲ್ಲ. ಟ್ಯಾಕ್ಸಿ ವಿಭಾಗಗಳಲ್ಲಿರುವ ಕೆಲಸಗಳ ಅಧ್ಯಯನವನ್ನುಕಾರ್ಮಿಕ ಸಚಿವಾಲಯ ನಡೆಸಲಿದೆ. ಈಗ ಟ್ಯಾಕ್ಸಿ ನಡೆಸಲು ಅನುಮತಿಸಲಾದ ಸಂಸ್ಥೆಗ ವಾಹನಗಳುಮತ್ತುಇತರ ವಿಚಾರಗಳಲ್ಲಿ ಅಧ್ಯಯನ ನಡೆಯಲಿದೆ. ಆಂತರಿಕ ಬಸ್ ಸರ್ವೀಸ್‌ಗಳು ಮತ್ತು ಸರಕು ಸರ್ವೀಸ್‌ಗಳ ಉದ್ಯೋಗಿಗಳನ್ನು ಸ್ವದೇಶಿಕರಣ ನಡೆಸಲಿಕ್ಕಾಗಿ ಹೊಸ ಯೋಜನೆಗಳನ್ನು ಆವಿಷ್ಕರಿಸಲಾಗುವುದು ಎಂದು ವರದಿಗಳು ತಿಳಿಸಿವೆ. ಇಂತಹ ಸಂಸ್ಥೆಗಳ ಲೈಸೆನ್ಸ್ ನಿಯಮಗಳು ಇತ್ಯಾದಿಗಳನ್ನುಸಾರಿಗೆ ಸಚಿವಾಲಯ ಪರಿಷ್ಕರಿಸಲಿದೆ. ಟ್ಯಾಕ್ಸಿ ವಿಭಾಗದಲ್ಲಿ ಕಾರ್ಮಿಕ ಸಚಿವಾಲಯದ ನಿತಾಕತ್ ಯೋಜನೆಯನ್ನು ಸುಧಾರಿಸಿ ಹೊಸ ನಿಯಮಗಳನ್ನು ತರಲು ಕಾರ್ಮಿಕ ಸಚಿವಾಲಯ ಯೋಜಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News