×
Ad

ಒಮನ್‌ನಲ್ಲಿ ಎಪ್ರಿಲ್ ಒಂದರಿಂದ ತೈಲಬೆಲೆ ಹೆಚ್ಚಳ: ಅಂತಾರಾಷ್ಟ್ರೀಯ ಮಾರಕಟ್ಟೆಯ ತೈಲದರ ಕುಸಿತದ ಪರಿಣಾಮ

Update: 2016-03-31 15:23 IST

ಮಸ್ಕತ್, ಮಾರ್ಚ್.31: ದೇಶದಲ್ಲಿಮುಂದಿನ ತಿಂಗಳು ಒಂದನೆ ತಾರೀಕಿನಿಂದ ತೈಲ, ಪ್ರಕೃತಿ ಅನಿಲಗಳಿಗೆ ಬೆಲೆ ಹೆಚ್ಚಳವಾಗಲಿದೆ ಎಂದು ತೈಲ ಮತ್ತು ಪ್ರಕೃತಿ ಅನಿಲ ಸಚಿವಾಲಯ ತಿಳಿಸಿದೆ. ಅಂತಾರಾಷ್ಟ್ರ ಮಾರುಕಟ್ಟೆಯ ಪ್ರಕಾರ ಹೊಸ ಬೆಲೆಹೆಚ್ಚಳವಾಗಲಿದ್ದು ಸೂಪರ್ ಪೆಟ್ರೋಲ್‌ಗೆ 13ಬೈಸಾ ಮತ್ತು ರೆಗ್ಯುಲರ್ ಪೆಟ್ರೋಲ್‌ಗೆ 15ಬೈಸಾ ಹೆಚ್ಚಳವಾಗಲಿದೆ ಎಂದು ತಿಳಿದು ಬಂದಿದೆ. ಎಪ್ರಿಲ್ ಒಂದರ ನಂತರ ಅಲ್ಲಿ ಸೂಪರ್ ಪೆಟ್ರೋಲ್‌ಗೆ 158ಬೈಸಾ ತೆರಬೇಕಾಗಿದೆ. ಈಗ 130 ಬೈಸಾ ಮತ್ತು ಡೀಸೆಲ್‌ಗೆ 146 ಬೈಸಾ ಇದೆ. ಡೀಸೆಲ್‌ಗೆ ಎಪ್ರಿಲ್ ಒಂದರ ನಂತರ 163ಬೈಸಾ ಆಗಲಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಕುಸಿತವಾಗಿ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾದ ಹಿನ್ನೆಲೆಯಲ್ಲಿ ದೇಶದ ತೈಲದರಗಳ ನಿಯಂತ್ರಣವನ್ನು ಸರಕಾರ ತೆರವುಗೊಳಿಸಿತೆಂದು ವರದಿಗಳು ತಿಳಿಸಿವೆ. ಹದಿನೇಳು ವರ್ಷಗಳ ನಂತರ ಕಳೆದವರ್ಷ ಜನವರಿಯಿಂದ ಸರಕಾರ ಇಂಧನ ಬೆಲೆಯನ್ನು ಹೆಚ್ಚಿಸತೊಡಗಿದೆ. ಕಳೆದ ವರ್ಷ ಒಮನ್ ಸರಕಾರ ಇಂಧನ ಸಬ್ಸಿಡಿಗಾಗಿ ಬಜೆಟ್‌ನಲಿ ವ್ಯಯಿಸಿತ್ತು. ಬೆಲೆ ಹೆಚ್ಚಳ ಬಜೆಟ್ ಕೊರತೆಯನ್ನು ತುಂಬಲು ಸರಕಾರಕ್ಕೆ ಸಹಾಯಕವಾಗಲಿದೆಯೆಂದು ಲೆಕ್ಕ ಹಾಕಲಾಗಿದೆ. ಆದರೆ ಇಂಧನ ಬೆಲೆ ವಿಶೇಷತಃ ಡೀಸೆಲ್ ಬೆಲೆ ಹೆಚ್ಚಳದಿಂದ ಕೆಲವು ವಸ್ತುಗಳಿಗೂ ಬೆಲೆಯೇರಿಕೆಯಾಗಲಿವೆಯೆನ್ನಲಾಗಿದೆ. ಎರಡು ತಿಂಗಳ ಬಳಿಕ ಮತ್ತೆ ಡೀಸೆಲ್‌ಗೆ ಬೆಲೆ ಹೆಚ್ಚಳ ಮಾಡಲಾಗಿದೆ. ಸರಕುವಾಹನಗಳಿಗೆ ಹೆಚ್ಚಾಗಿ ಡೀಸೆಲ್‌ನ್ನು ಬಳಸಲಾಗುತ್ತಿದೆ.ತೈಲದರ ಹೆಚ್ಚಳದಿಂದ ಟ್ಯಾಕ್ಸಿ ಚಾಲಕರಿಗೆ ಪ್ರಯಾಣ ದರ ಹೆಚ್ಚಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಸರಕಾರ ಟ್ಯಾಕ್ಸಿದರವನ್ನು ನಿಶ್ಚಯಿಸದಿರುವುದರಿಂದ ಪ್ರಯಾಣಿಕರಿಗೆ ಪ್ರಯಾಣ ಪ್ರಯಾಸಕರವಾಗಲಿದೆಎನ್ನಲಾಗಿದೆ. ಅಲ್ಲಿ ಟ್ಯಾಕ್ಸಿಗಳು ಪ್ರಯಾಣಿಕರಿಂದ ಮನಬಂದಂತೆ ಸುಲಿಗೆ ನಡೆಸುತ್ತಿವೆ ಎಂಬ ದೂರುಗಳಿವೆ ಎಂದೂ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News