×
Ad

ಪಳ್ಳಿಕ್ಕರ ಖಾಸಿ ಪಯ್ಯಕ್ಕಿ ಉಸ್ತಾದರಿಗೆ ದುಬಾಯಿಯಲ್ಲಿ ಅದ್ದೂರಿಯ ಅಭಿನಂದನಾ ಸಮರ್ಪಣೆ

Update: 2016-04-01 16:52 IST

ದುಬಾಯಿ : ಪಳ್ಳಿಕ್ಕರ ಜಂಟಿ ಜಮಾಅತ್ತ್ ಗಳ ಖಾಸಿಯಾಗಿ ನಿಯುಕ್ತಗೊಂಡ ಬಳಿಕ ಪ್ರಥಮ ಬಾರಿಗೆ ಯು.ಎ.ಇ. ಪ್ರವಾಸ ಕೈಗೊಂಡ ಪಯ್ಯಕ್ಕಿ ಉಸ್ತಾದ್ ಶೈಖುನಾ ಪಿ.ಕೆ.ಅಬ್ದುಲ್ ಖಾದರ್ ಮುಸ್ಲಿಯಾರ್ ರವರಿಗೆ ಪಯ್ಯಕ್ಕಿ ಉಸ್ತಾದ್ ಇಸ್ಲಾಮಿಕ್ ಅಕಾಡಮಿಯ ದುಬಾಯಿ ವಲಯ ಸಮಿತಿಯು ಆಯೋಜಿಸಿದ ಅಭಿನಂದನಾ ಸಮಾರಂಭವು ಸಮಾಜದ ವಿವಿಧ ಕ್ಷೇತ್ರಗಳಲ್ಲಿನ ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ಬಹಳ ಉತ್ಸಾಹದಿಂದ ಜರಗಿತು. ಕರ್ನಾಟಕ ರಾಜ್ಯ ಸಚಿವರಾದ ಬಿ.ರಾಮನಾಥ ರೈ, ಉಧ್ಯಮ ರಂಗದ ಪ್ರಮುಖರಾದ ಡಾ. ಬಿ.ಆರ್.ಶೆಟ್ಟಿ, ಹಾಜಿ ಅಬ್ದುಲ್ಲ ಡಬಲ್ ಗೇಟ್, ಶಾಸಕರಾದ    ಪಿ.ಬಿ.ಅಬ್ದುಲ್ ರಸಾಕ್,ಕಾಂಗ್ರೆಸ್ ನೇತಾರ ಪಿ.ಎ.ಅಶ್ರಫಾಲಿ ಸೇರಿದಂತೆ ಹಲವು ಪ್ರಮುಖರು  ಶುಭಾಶಂಸನೆಗೈದರು. ಪಿ.ಎ. ಗ್ರೂಪ್ ಚೇರ್ ಮಾನ್ ಪಿ.ಎ.ಇಬ್ರಾಹಿಂ ಹಾಜಿಯವರು ಕಾರ್ಯಕ್ರಮವನ್ನುಗಣ್ಯರ ಸಮ್ಮುಖದಲ್ಲಿ ಪಯ್ಯಕ್ಕಿ ಉಸ್ತಾದರಿಗೆ ದುಬಾಯಿಯಲ್ಲಿ ಅಭಿನಂದನಾ ಸಮರ್ಪಣೆ

ಅಬ್ದುಲ್ ಖಾದರ್ ಅಸ್ ಅದಿಯವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭಕ್ಕೆ ಹಂಸ ತೊಟ್ಟಿಯಿಲ್, ಎಂ.ಎ.ಮಹಮ್ಮದ್ ಉದುಮ, ಹನೀಫ್ ಕಲ್ಮಟ್ಟ, ಸಯ್ಯಿದ್ ಅಬ್ದುಲ್ ಹಕೀಂ ತಂಗಳ್, ಸಯ್ಯಿದ್ ಅಸ್ಗರಲಿ ತಂಗಳ್, ಅಬ್ಬಾಸ್ ಫೈಸಿ ಪುತ್ತಿಗೆ, ಮಜೀದ್ ದಾರಿಮಿ ಪೈವಳಿಕೆ, ಮೊಯ್ದೀನ್ ಕುಟ್ಟಿ ಹಾಜಿ ದಿಬ್ಬ, ಮುನೀರ್ ಚೆರ್ಕಳ, ಹಸೈನಾರ್ ಬೀಜಂತಡ್ಕ, ಫೈಸಲ್ ರಹ್ಮಾನಿ ಬಾಯಾರು, ಬದ್ರುದ್ದೀನ್ ಹೆಂತಾರು, ಟಿ.ಎ.ಮೂಸ ಉಪ್ಪಳ, ಆಸೀಸ್ ಮರಿಕ್ಕೆ, ಸುಬೈರ್ ನಿಸಾಮಿ, ಸಿದ್ದಿಕ್ ಫೈಸಿ, ಆಯೂಬ್ ಉರುಮಿ, ಶಂಸುದ್ದೀನ್ ಹನೀಫಿ, ಯಾಕೂಬ್ ಮೌಲವಿ,ಸಿ.ಎಚ್. ನೂರುದ್ದೀನ್, ಸ್ವಾಲಿಹ್ ಕಳಾಯಿ, ಶಾಫಿ ಹಾಜಿ ಪೈವಳಿಕೆ, ಗಫೂರ್ ಎರಿಯಾಲ್,ಅಬ್ಬಾಸ್ ಕಳನಾಡು, ಹಮೀದ್ ಹಾಜಿ ಪೈವಳಿಕೆ, ಇಲ್ಯಾಸ್ ಕಟ್ಟಕ್ಕಾಲ್, ಶಂಸೀರ್ ಅಡೂರು, ಸಿದ್ದೀಕ್ ಕನಿಯಡ್ಕ ಮೊದಲಾದವರು ಶುಭಾರೈಸಿದರು. ಮಹಮೂದ್ ಹಾಜಿ ಪೈವಳಿಕೆ ಸ್ವಾಗತಿಸಿ ಆಸೀಸ್ ಬಳ್ಳೂರು ವಂದಿಸಿದರು. ಉದ್ಘಾಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News