×
Ad

ಹರಂ: ಸೇತುವೆ ಧ್ವಂಸದೊಂದಿಗೆ ಮತಾಫ್ ಸಾಮರ್ಥ್ಯ ವೃದ್ಧಿ

Update: 2016-04-05 15:53 IST

ಮಕ್ಕಾ, ಎ. 5: ಮಕ್ಕಾ ಮಸೀದಿಯಲ್ಲಿ ನಾಲ್ಕು ವರ್ಷಗಳ ಕಾಲ ಬಳಕೆಯಲ್ಲಿದ್ದ ತಾತ್ಕಾಲಿಕ ಮತಾಫ್ ಸೇತುವೆಯನ್ನು ಈಗ ಕೆಡವಲಾಗುತ್ತಿದೆ. ಸೇತುವೆಯನ್ನು ಸಂಪೂರ್ಣವಾಗಿ ಕೆಡವಿದ ಬಳಿಕ, ಗಂಟೆಗೆ 30,000 ಮಂದಿಗೆ ತವಾಫ್ (ಕಾಬಾಕ್ಕೆ ಪ್ರದಕ್ಷಿಣೆ ಬರುವುದು) ನಡೆಸಲು ಸಾಧ್ಯವಾಗುತ್ತದೆ. ಅಂದರೆ, ಪ್ರಸಕ್ತ ಸ್ಥಿತಿಗಿಂತ ಗಂಟೆಗೆ 20,000ಕ್ಕಿಂತಲೂ ಹೆಚ್ಚು ಭಕ್ತರು ತವಾಫ್ ನಡೆಸಬಹುದಾಗಿದೆ.

ನಿರ್ದಿಷ್ಟ ಯೋಜನೆಯಂತೆ, ಕಟ್ಟಡದ ಒಂದು ಭಾಗವನ್ನು ಒಮ್ಮೆ ಕೆಡವಲಾಗುತ್ತಿದೆ. ಕಾಮಗಾರಿ ದಿನದ 24 ಗಂಟೆಯೂ ನಡೆಯುತ್ತಿದೆ. ಈ ಕಾರ್ಯವನ್ನು ರಮದಾನ್ ತಿಂಗಳು ಆರಂಭಗೊಳ್ಳುವ ಮುನ್ನ ಪೂರ್ಣಗೊಳಿಸುವ ಯೋಜನೆಯನ್ನು ಅಧಿಕಾರಿಗಳು ಹೊಂದಿದ್ದಾರೆ. ಚಂದ್ರ ದರ್ಶನವನ್ನು ಆಧರಿಸಿ ಜೂನ್ 6ರಂದು ರಮದಾನ್ ತಿಂಗಳು ಆರಂಭಗೊಳ್ಳುವ ನಿರೀಕ್ಷೆಯಿದೆ.

ಎರಡು ಪವಿತ್ರ ಮಸೀದಿಗಳ ಉಸ್ತುವಾರಿ, ಸೌದಿ ಯುವರಾಜ, ಉಪ ಯುವರಾಜ ಹಾಗೂ ಮಕ್ಕಾ ಗವರ್ನರ್‌ರ ಆದೇಶಗಳಂತೆ ಸೇತುವೆ ಕೆಡಹುವ ಕಾರ್ಯವನ್ನು ಆರಂಭಿಸಲಾಗಿದೆ. ಹರಮ್ ಮಸೀದಿಯ ವಿಸ್ತರಣೆ ಕಾರ್ಯ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಸೇತುವೆಯನ್ನು ಕೆಡವಲಾಗುತ್ತಿದೆ.

ಮಸೀದಿ ವಿಸ್ತರಣೆಗೆ ಸಂಬಂಧಿಸಿದ ಚಟುವಟಿಕೆಗಳ ಯಶಸ್ಸು ದೊರೆ ಸಲ್ಮಾನ್‌ಗೆ ಸಲ್ಲಬೇಕು ಎಂಬುದಾಗಿ ಎರಡು ಪವಿತ್ರ ಮಸೀದಿಗಳ ಸಮಿತಿಯ ಮುಖ್ಯಸ್ಥ ಅಬ್ದುಲ್ ರಹಮಾನ್ ಅಲ್-ಸುದೈಸಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News