×
Ad

ಜಿದ್ದಾ: ಶಾಲಾ ಬಸ್‌ನಲ್ಲಿ ಬಾಲಕ ಮೃತಪಟ್ಟ ಘಟನೆ - ತನಿಖೆ ಆರಂಭ

Update: 2016-04-05 16:02 IST

ಜಿದ್ದಾ, ಎ. 5: ಎಂಟು ವರ್ಷದ ಬಾಲಕನೊಬ್ಬ ರವಿವಾರ ಬಸ್‌ನಲ್ಲಿ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಇಲ್ಲಿನ ಶಿಕ್ಷಣ ಇಲಾಖೆ ತನಿಖೆ ಆರಂಭಿಸಿದೆ.

ನವಾಫ್ ಅಲ್-ಸುಲಮಿ ರವಿವಾರ ಬೆಳಗ್ಗೆ ನಸೀಂ ಜಿಲ್ಲೆಯಲ್ಲಿರುವ ತನ್ನ ಶಾಲೆಗೆ ಬಸ್‌ನಲ್ಲಿ ಬಂದಿದ್ದನು. ಆದರೆ ಆತ ಬಸ್‌ನಿಂದ ಇಳಿದಿರಲಿಲ್ಲ ಎನ್ನಲಾಗಿದೆ. ಮಧ್ಯಾಹ್ನ ಬಾಲಕ ಶವವಾಗಿ ಪತ್ತೆಯಾಗಿದ್ದನು ಎಂದು ಸ್ಥಳೀಯ ಪತ್ರಿಕೆಯೊಂದು ಸೋಮವಾರ ವರದಿ ಮಾಡಿದೆ.

ಅಬ್ದುಲ್ಲಾ ಬಿನ್ ಅಹ್ಮದ್ ಅಲ್-ತಖಾಫಿ ತನಿಖೆಗೆ ಆದೇಶ ನೀಡಿದ್ದಾರೆ ಎಂದು ಇಲಾಖೆಯ ವಕ್ತಾರ ಅಬ್ದುಲ್‌ಮಜೀದ್ ಅಲ್-ಘಮ್ಡಿ ತಿಳಿಸಿದರು. ತನಿಖೆಯನ್ನು ಪೊಲೀಸರು ಮತ್ತು ಶಾಲೆಯ ಆಡಳಿತ ನಡೆಸುತ್ತದೆ ಎಂದರು.

ಬಸ್‌ನ ಅರಬ್ ಚಾಲಕ ಮಧ್ಯಾಹ್ನ ಬಾಲಕ ಬಸ್‌ನಲ್ಲಿ ಮೃತಪಟ್ಟಿರುವುದನ್ನು ನೋಡಿದರು ಎಂದು ಮಕ್ಕಾ ಪೊಲೀಸ್ ವಕ್ತಾರ ಕ. ಅತ್ತಿ ಬಿನ್ ಅತಿಯ ಅಲ್-ಖುರೇಶಿ ಹೇಳಿದರು. ಚಾಲಕನನ್ನು ವಿಚಾರಣೆಗಾಗಿ ಬಂಧಿಸಲಾಗಿದೆ.

ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಮೂರನೆ ತರಗತಿಯ ವಿದ್ಯಾರ್ಥಿ ಅಬ್ದುಲ್ ಮಲಿಕ್ ಬಸ್‌ನಲ್ಲೇ ಉಳಿದು ಉಸಿರುಗಟ್ಟಿ ಮೃತಪಟ್ಟಿದ್ದನು. ಬಸ್‌ನ ಏಶ್ಯನ್ ಚಾಲಕನನ್ನು ಬಂಧಿಸಲಾಗಿತ್ತು. ಕಳೆದ ಡಿಸೆಂಬರ್‌ನಲ್ಲಿ ಆ ಶಾಲೆಯನ್ನು ಶಿಕ್ಷಣ ಸಚಿವಾಲಯ ಶಾಶ್ವತವಾಗಿ ಮುಚ್ಚಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News