ಸೌದಿ : ದೊರೆ ಸಲ್ಮಾನ್ ಗೈರಿನಲ್ಲಿ ಯುವರಾಜ ಉಸ್ತುವಾರಿ
Update: 2016-04-08 15:15 IST
ಜಿದ್ದಾ , ಎ.8 : ಗುರುವಾರ ಸೌದಿ ದೊರೆ ಸಲ್ಮಾನ್ ತಮ್ಮ ಈಜಿಪ್ಟ್ ಪ್ರವಾಸ ಆರಂಭಿಸಿದ್ದಾರೆ. ಅವರು ಮರಳುವವರೆಗೆ ಯುವರಾಜ, ಉಪಪ್ರಧಾನಿ ಹಾಗು ಆಂತರಿಕ ವ್ಯವಹಾರಗಳ ಸಚಿವ ಮೊಹಮ್ಮದ್ ಬಿನ್ ನೈಫ್ ಅವರು ದೇಶದ ಉಸ್ತುವಾರಿ ಹಾಗು ಎರಡು ಪವಿತ್ರ ಮಸೀದಿಗಳ ಮೇಲ್ವಿಚಾರಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ದೊರೆ ಸಲ್ಮಾನ್ ಅವರು ಪ್ರವಾಸ ಹೊರಡುವ ಮುನ್ನ ಅರಮನೆಯ ಆದೇಶ ತಿಳಿಸಿದೆ.